ಜನರಿಗೆ ದೀಪಾವಳಿ ಆಚರಣೆಗೂ ಸಮಸ್ಯೆ : ಮಾಜಿ ಸಚಿವ ರಮಾನಾಥ ರೈ ಹೇಳಿಕೆ
ದೇಶದಲ್ಲಿ ಜೀವನಾವಶ್ಯಕ ವಸ್ತುಗಳ ಬೆಲೆಯೂ ಏರಿಕೆಯಾಗುತ್ತದೆ. ತೈಲ ಬೆಲೆ ದಿನೇ ದಿನೇ ಏರಿಯಾಗುತ್ತಿದೆ. ನೂರು ದಿನದಲ್ಲಿ ಪೆಟ್ರೋಲ್ ಬೆಲೆ ಕಡಿಮೆ ಮಾಡುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು ಆದರೆ ಅವರು ಭರವಸೆ ಹುಸಿಯಾಗಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.
ಅವರು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಪಕ್ಷದ ಮುಖಂಡರು ಸಚಿವರು ಬೆಲೆ ಏರಿಕೆ ಸಮಸ್ಯೆ ಇಲ್ಲ. ಇದು ವಿರೋಧ ಪಕ್ಷಗಳ ಅಪಪ್ರಚಾರ ಎಂದು ಹೇಳ್ತಾರೆ. ಜಿಲ್ಲೆಯಲ್ಲಿ ಅನೈತಿಕ ಪೊಲೀಸ್ ಗಿರಿ ನಡೆಸ್ತಾರೆ. ಇವರು ಕೇವಲ ಭಾವನಾತ್ಮಕ ವಿಚಾರಗಳ ಮುಂದೆ ಇಡ್ತಾ ಇದ್ದಾರೆ. ಇದಕ್ಕೆ ಜನರು ತಕ್ಕ ಉತ್ತರ ನೀಡಲಿದ್ದಾರೆ. ಇಲ್ಲಿ ನಿಜವಾದ ಸಮಸ್ಯೆ ನಿತ್ಯ ಏರಿಕೆ ಆಗ್ತಾ ಇರುವ ಬೆಲೆ. ಜನರಿಗೆ ಇದ್ರಿಂದ ದೀಪಾವಳಿ ಆಚರಣೆಗೂ ಸಮಸ್ಯೆ ಆಗಿದೆ. ಕೊರೋನಾ ಹಿನ್ನೆಲೆ ಪೆಟ್ರೋಲ್ ಬೆಲೆ ಏರಿಕೆ ಆಗಿದೆ ಅಂತಾರೆ. ಹಾಗಿದ್ರೆ ನೇಪಾಳ, ಶ್ರೀಲಂಕಾದಲ್ಲಿ ಕೊರೋನಾ ಇಲ್ಲವೇ, ಅಲ್ಲಿ 60 ರೂಪಾಯಿಗೆ ಪೆಟ್ರೋಲ್ ಡಿಸೇಲ್ ನೀಡ್ತಾರೆ. ದೇಶದಲ್ಲಿ ನಿರುದ್ಯೋಗ, ಬಡತನ ಹೆಚ್ಚಾಗ್ತಾ ಇದೆ. ಶ್ರೀಮಂತ ಪ್ರಪಂಚದಲ್ಲೇ ಶ್ರೀಮಂತರಾಗ್ತಾ ಇದ್ದಾರೆ. ಬಡವರು ಬಡತನ ರೇಖೆಗಿಂತ ಕೆಳಗೆ ಹೋಗ್ತಾ ಇದ್ದಾರೆ. ನಿತ್ಯ ಬೆಲೆ ಏರಿಕೆ ಮೂಲಕ ಜನ್ರಿಗೆ ಬರೆಹಾಕ್ತಾ ಇದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.
ಇನ್ನು ಹಾನಗಲ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಇಲ್ಲಿ ಹಣ ಬಲ ಮುಂದೆ ಕಾಂಗ್ರೆಸ್ಗೆ ಜಯ. ಮನೆ ಮನೆಗೆ ಕವರ್ ಮೂಲಕ ಹಣ ಹಂಚಿದ್ದಾರೆ. ಇದ್ರ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಿ ಜಯ ಪಡೆದಿದೆ. ನಾ ಕಾವೂಂಗ ನಾ ಕಾನೇ ದೂಂಗ ಎಂದು ತಿಂದಿದ್ದಾರೆ. ಈಗ ಅವ್ರೇ ಮನೆ ಮನೆ ಹಣ ಹಂಚಿದ್ದಾರೆ. ಸರ್ಕಾರದ ವೈಫಲ್ಯ ಜನ್ರ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಮುಕ್ತ ಭಾರತ ಮಾಡ್ತೇವೆ ಎಂದು ಪಹಾಸ್ಯ ಮಾಡಿದ್ರು
ಯಾರನ್ನು ಯಾರು ಮುಕ್ತ ಮಾಡುವುದು ಜನ ತೀರ್ಮಾನ ಮಾಡ್ತಾರೆ ಪಕ್ಷಗಳು ಅಲ್ಲ
ಮಾಜಿ ಸಚಿವ ಬಿ ರಮಾನಾಥ್ ರೈ ಹೇಳಿದರು.