ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರ ಆರಂಭ
ಕೊರೊನಾ ಹಿನ್ನಲೆ ಲಾಕ್‌ಡೌನ್ ನಂತರ ಬರೋಬ್ಬರಿ 68 ದಿನಗಳ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರ ಆರಂಭವಾಗಿದೆ. ಕೊರೊನಾ ಪ್ರಕರಣ ಇಳಿಕೆಯ ಹಿನ್ನೆಲೆ ರಾಜ್ಯ ಸರ್ಕಾರ ಜೂನ್.22ರ ನಂತರ ಷರತ್ತು ಬದ್ಧವಾಗಿ ಖಾಸಗಿ ಬಸ್ ಸಂಚಾರಕ್ಕೆ ಅನುಮತಿ ನೀಡಿತ್ತು. ಆದರೆ ತಾಂತ್ರಿಕ ಕಾರಣ ಹಾಗೂ ತೆರಿಗೆ ವಿನಾಯಿತಿ, ಬಸ್ ದರ ಹೆಚ್ಚಳಕ್ಕೆ ಪಟ್ಟು ಹಿಡಿದಿದ್ದ ಖಾಸಗಿ ಬಸ್ ಮಾಲಕರು ಸರ್ಕಾರದ ಜೊತೆ ಮಾತುಕತೆ ನಂತರ ಇಂದಿನಿಂದ ತಮ್ಮ ಸಂಚಾರ ಆರಂಭಿಸಿಲು ನಿರ್ಧರಿಸಿದ್ದರು, ಮೊದಲು ದಿನ ಹಿನ್ನೆಲೆ ಕೆಲವು ಬೆರಳೆಣಿಕೆಯಷ್ಟು ಬಸ್‌ಗಳು ಮಾತ್ರ ಸಂಚರಿಸುತ್ತಿದ್ದು, ಸರ್ವೀಸ್ ,ಸಿಟಿ ಬಸ್‌ಗಳ ಮೂಲಕ ಜನರು ಓಡಾಟ ಆರಂಭಿಸಿದ್ದಾರೆ.
ಇನ್ನು ದಕ್ಷಿನ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಜಾರಿಯಲ್ಲಿರುವ ಆದೇಶದ ಪ್ರಕಾರ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಲಾಕ್‌ಡೌನ್ ವಿನಾಯಿತಿ ಇದೆ. ಜಿಲ್ಲಾಡಳಿತ ಈಗಾಗಲೇ ನೀಡಿರುವ ಆದೇಶದ ಪ್ರಕಾರ ಜಿಲ್ಲಾ ವ್ಯಾಪ್ತಿಯಲ್ಲಿ ಮಧ್ಯಾಹ್ನ ಒಂದು ಗಂಟೆಯವರೆಗೆ ಮಾತ್ರ ಕಾರ್ಯಾಚರಿಸಲು ಅವಕಾಶ ಇದೆ. ಸಿಟಿ ಮತ್ತು ಖಾಸಗಿ ಬಸ್ ದರಈಗಾಗಲೇ ಶೇ.20ರಷ್ಟು ಏರಿಕೆ ಮಾಡಲಾಗಿದೆ.