ದಾಖಲೆಯತ್ತ ದಾಪುಗಾಲಿಟ್ಟ ಚೊಚ್ಚಲ ‘ಬಿಲ್ಲವಾಸ್ ಕತಾರ್ ಪ್ರತಿಭಾ ಸಪ್ತಾಹ 2021’
ಬಿಲ್ಲವಾಸ್ ಕತಾರ್ ಪ್ರತಿಭಾ ಸಪ್ತಾಹ-2021 ಎಂಬ ಕಾರ್ಯಕ್ರಮವನ್ನು ಆನ್‌ಲೈನ್ ಮೂಲಕ ಆಯೋಜಿಸಿದ್ದು, ವಿಶ್ವದ ಎಲ್ಲಾ ಬಿಲ್ಲವ ಪ್ರತಿಭೆಗಳು ಅರಳುವಂತೆ ಮಾಡಿದೆ ಬಿಲ್ಲವಾಸ್ ಕತ್ತಾರ್. ಕೋವಿಡ್‌ನ ಈ ವಿಷಮ ಸ್ಥಿತಿಯಲ್ಲಿ ಪ್ರತಿಭೆಗಳಿಗೆ ಸೂಕ್ತವಾದ ವೇದಿಕೆಯಲ್ಲಿ ಬಿಲ್ಲವಾಸ್ ಕತಾರ್‌ನವರು ಕಲ್ಪಿಸಿಕೊಟ್ಟಿದ್ದಾರೆ.
ಅಂತರ ಕಾಪಾಡಿ, ಅಂತರ್ಮುಖಿಯಾಗಿ, ದುಗುಡ ದುಮ್ಮಾನಗಳ ಸರಪಳಿಯಲ್ಲಿ ಸಿಲುಕಿರುವ ಅದೆಷ್ಟೋ ಜನರಿಗೆ ತಮ್ಮ ಹಿಂದಿನ ಜೀವನ ಕನಸಿನ ಗಂಟಾಗಿ ಕಾಡುತ್ತಿರುವ ಹೆಮ್ಮಾರಿ ಕೊರೋನಾ, ಇಂತಹ ವಿಷಮ ಪರಿಸ್ಥಿತಿಯಲ್ಲಿ, ತಮ್ಮ ಪ್ರತಿಭೆಗಳಿಗೆ ಸೂಕ್ತವಾದ ವೇದಿಕೆಯನ್ನು ಸೃಷ್ಟಿಸಿದ ಹೆಮ್ಮೆ “ಬಿಲ್ಲವಾಸ್ ಕತಾರ್” ಇವರದ್ದು.
ಅಂತರ್ಜಾಲದ ಮೂಲಕ ” ಬಿಲ್ಲವಾಸ್ ಕತಾರ್ ಪ್ರತಿಭಾ ಸಪ್ತಾಹ 2021″ ಎಂಬ ವೇದಿಕೆಯನ್ನು ನಿರ್ಮಿಸಿ ಕೇವಲ ಕತಾರ್ ಗೆ ಸೀಮಿತವಾಗಿರದೆ ವಿಶ್ವದ ಎಲ್ಲಾ ಬಿಲ್ಲವ ಪ್ರತಿಭೆ ಅರಳುವಂತೆ ಮಾಡಿದ ಹೆಮ್ಮೆ “ಬಿಲ್ಲವಾಸ್ ಕತಾರ್” ಇವರದ್ದು.
2012 ರಂದು ಕೇವಲ 45 ಜನರಿಂದ ಪ್ರಾರಂಭವಾದ ಸಂಸ್ಥೆ ಇಂದು ಕತಾರ್ ನಲ್ಲಿ 350 ಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿದ್ದು ಅನೇಕ ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆಯನ್ನು ಮಾಡುತ್ತಾ ಬಂದಿದೆ. ವೈದ್ಯಕೀಯ ನೆರವು, ರಕ್ತದಾನ, ಕ್ರೀಡಾಪಟುಗಳಿಗೆ ನೆರವು, ನೆರೆ ಪರಿಹಾರ, ನಾರಾಯಣ ಗುರು ಚಾರಿಟೇಬಲ್ ಟ್ರಸ್ಟ್ ನೊಂದಿಗೆ ಕೈಜೋಡಿಸಿ ಶೈಕ್ಷಣಿಕ ನೆರವು, ಪರಿಸರ ದಿನಾಚರಣೆ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ.
ಸಂಘದ ಚುಕ್ಕಾಣಿ ಹಿಡಿದ ಶ್ರೀ ರಘುನಾಥ್ ಅಂಚನ್, ಸ್ಥಾಪಕಾಧ್ಯಕ್ಷ ಶ್ರೀ ದಿವಾಕರ ಪೂಜಾರಿ, ಉಪಾಧ್ಯಕ್ಷ ರೂಪೇಶ್ ಎಸ್ ಸಾಲಿಯಾನ್, ಪ್ರಧಾನ ಕಾರ್ಯದರ್ಶಿ ಅಮಿತ್ ಪೂಜಾರಿ ಮತ್ತು ಸಂಘದ ಎಲ್ಲಾ ಸದಸ್ಯರ ಸರ್ವಾನುಮತದಿಂದ ಸಂಪನ್ನವಾದ ಕಾರ್ಯಕ್ರಮ “ಬಿಲ್ಲವಾಸ್ ಕತಾರ್ ಪ್ರತಿಭಾ ಸಪ್ತಾಹ 2021”. ದಿನಾಂಕ 15-07-2021 ಪ್ರಾರಂಭವಾಗಿ 21-07-2021 ರ ವರೆಗೆ ನಡೆಯಿತು.
ಹನ್ನೊಂದು ಬಗೆಯ ವಿವಿಧ ಸ್ಪರ್ಧೆಗಳಲ್ಲಿ 175 ಕ್ಕೂ ಮಿಕ್ಕಿ ಸ್ಪರ್ಧಾಳುಗಳು ಭಾಗವಹಿಸಿದ್ದರು. ಮೂರು ವರ್ಷದ ಕಿರಿಯರಿಂದ ಹಿಡಿದು 75 ವರ್ಷದ ಹಿರಿಯರೂ ಕೂಡ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ಕೊಟ್ಟರು. ಕತಾರ್ ಬಿಲ್ಲವಾಸ್ ನ ಸದಸ್ಯರ ಆಂತರಿಕ ಪ್ರತಿಭೆಗಳ ಚಿತ್ರ ಸುರುಳಿಗಳ ಪ್ರದರ್ಶನ ನಡೆಯಿತು. ಈ ಕಾರ್ಯಕ್ರಮವನ್ನು ಸಂಘದ ಸಾಂಸ್ಕ್ರತಿಕ ಕಾರ್ಯದರ್ಶಿನಿ ಶ್ರೀಮತಿ ಅಪರ್ಣ ಶರತ್ ಮತ್ತು ಜೊತೆ ಕಾರ್ಯದರ್ಶಿನಿ ಸೀಮಾ ಉಮೇಶ್ ಪೂಜಾರಿ ಅವರು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
ಪ್ರತಿಭಾ ಸಪ್ತಾಹ 2021” ರ ಸಮಾರೋಪ ಸಮಾರಂಭದ ಉದ್ಘಾಟನೆ 21.07.2021 ರಂದು ದೋಹಾ ಕತಾರ್ ನ ಐ. ಸಿ. ಸಿ ಯ ಅಶೋಕ ಸಭಾಭವನದಲ್ಲಿ ದೀಪ ಬೆಳಗಿಸುವುದರೊಂದಿಗೆ ನಡೆಯಿತು. ಸಂಘದ ಅಧ್ಯಕ್ಷರು ಹಾಗು ಕಾರ್ಯಕಾರಿ ಮಂಡಳಿಯವರ ಸಮ್ಮುಖದಲ್ಲಿ, ಮುಖ್ಯ ಅತಿಥಿಗಳಾಗಿ ಭಾರತೀಯ ಸಾಂಸ್ಕೃತಿಕ ಕೇಂದ್ರ ( ಐ ಸಿ ಸಿ ) ಅಧ್ಯಕ್ಷರು ಶ್ರೀ ಬಾಬು ರಾಜನ್, ಐ ಸಿ ಸಿ ಉಪಾಧ್ಯಕ್ಷ – ಕನ್ನಡಿಗ ಸುಬ್ರಹ್ಮಣ್ಯ ಹೆಬ್ಬಾಗಿಲು, ಪ್ರಧಾನ ಪ್ರಾಯೋಜಕರರಾದ ಎಂ ಪಲ್ಲೊಂಜಿ ಕತಾರ್ ಇದರ ಆಡಳಿತ ನಿರ್ದೇಶಕ ಶ್ರೀ ಚಿದಾನಂದ ನಾಯ್ಕ್ – ಎ. ಟಿ. ಎಸ್ ಗ್ರೂಪ್ ನ ಆಡಳಿತ ನಿರ್ದೇಶಕ ಶ್ರೀ ಮೂಡಂಬೈಲ್ ರವಿ ಶೆಟ್ಟಿ ಭಾಗವಹಿಸಿದ್ದರು.
ಸ್ವಾಗತ ಭಾಷಣ ಮೂಲಕ ಸಂಘದ ಅಧ್ಯಕ್ಷರಾದ ಶ್ರೀ ರಘುನಾಥ ಅಂಚನ್ ಬಿಲ್ಲವಾಸ್ ಕತಾರ್ ನ ಧ್ಯೇಯೋದ್ದೇಶ, ಸಾಧನೆ ಮತ್ತು ಕಾರ್ಯಾಚರಣೆಗಳ ಬಗ್ಗೆ ಬೆಳಕು ಚೆಲ್ಲಿ ಸಪ್ತಾಹಕ್ಕೆ ಚಾಲನೆಯಿತ್ತರು . ಭೂಮಿಕಾ ರಘುನಾಥ್ ಅಂಚನ್ ಅವರು ಸ್ವಾಗತ ನೃತ್ಯದ ಮೂಲಕ ಎಲ್ಲರ ಕಣ್ಮನ ಸೆಳೆದರು .
ಮುಂದೆ ನಡೆದ ಅಂತರ್ಜಾಲ ಸಭಾಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಮುಜುರಾಯಿ ಸಚಿವರಾದ ಶ್ರೀಯುತ ಕೋಟ ಶ್ರೀನಿವಾಸ ಪೂಜಾರಿಯವರು ನಾರಾಯಣ ಗುರುಗಳ ಸಾಮಾಜಿಕ ಸುಧಾರಣೆ, ದೀನ ದಲಿತರ ಸೇವೆ, ಜಾತ್ಯತೀತ ರಾಷ್ಟ್ರದ ಪರಿಕಲ್ಪನೆ, ವಿಧ್ಯಾಭ್ಯಾಸದ ಅಗತ್ಯತೆಯ ಬಗ್ಗೆ ಬೆಳಕು ಚೆಲ್ಲಿ ಗುರುಗಳ ಸರಳತೆಯನ್ನು ತನ್ನ ನಡೆ ಮತ್ತು ನುಡಿಯಲ್ಲಿ ತೋರಿಸಿಕೊಟ್ಟರು. ಪೊಲೀಸ್ ಅಧೀಕ್ಷಕರಾದ ಶ್ರೀಮತಿ ರೀನಾ ಸುವರ್ಣ , ಕೋಸ್ಟಲ್/ಸ್ಯಾಂಡಲ್ ವುಡ್ ಖ್ಯಾತಿಯ ಉದಯೋನ್ಮುಖ ಚಲನ ಚಿತ್ರ ನಟ ಪೃಥ್ವಿ ಅಂಬರ್, ಬಹು ಮುಖ ಪ್ರತಿಭೆಯ ಪತ್ರಕರ್ತ ಮತ್ತು ರಂಗ ಕರ್ಮಿ ಶ್ರೀ ಪರಮಾನಂದ ಸಾಲಿಯಾನ್ , ಶ್ರೀ ರೂಪೇಶ್ ಎಸ್ ಸಾಲಿಯಾನ್, ಬಿಲ್ಲವಾಸ್ ಕತಾರ್ ನ ಉಪಾಧ್ಯಕ್ಷರು ಈ ಗಣ್ಯರ ಸಭಾ ಕಾರ್ಯಕ್ರಮವನ್ನು ಅತ್ಯಂತ ಚೊಕ್ಕವಾಗಿ ನಿರೂಪಿಸಿದರು.
ಮಂಗಳೂರಿನಲ್ಲಿ ಆಯೋಜಿಸಿದ ಪ್ರತಿಭೆಗಳ ಸಮ್ಮಿಲನದ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ನಿರೂಪಕರಾದ ಶ್ರೀ ದಿನೇಶ್ ಸುವರ್ಣ ರಾಯಿ, ನಿತೇಶ್ ಪೂಜಾರಿ ಮಾರ್ನಾಡ್, ಡಾ. ಅರುಣ್ ಉಳ್ಳಾಲ್, ಹಾಗು ವಿ ಜೆ ಶರ್ಮಿಳಾ ರವರು ನಡೆಸಿಕೊಟ್ಟರು .ಅಕ್ಷತಾ ಪೂಜಾರಿಯವರು ವಿಶೇಷ ಅನುಕರಣ ಕಲೆಯ ಸ್ವರಾನುಕರಣೆ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಕಂಬಳದ ಹಿರಿಯಜ್ಜ ಇರುವೈಲು ಪಾಣಿಲ ಬಾಡ ಪೂಜಾರಿಯವರನ್ನು ಸನ್ಮಾನಿಸಲಾಯಿತು .
ಪ್ರಧಾನ ಪ್ರಾಯೋಜಕರಾಗಿ ಶ್ರೀ ಜೆಪ್ಪು ಚಿದಾನಂದ ನಾಯ್ಕ್ – ಪ್ರಧಾನ ವ್ಯವಸ್ಥಾಪಕರು, ಎಂ ಪಲ್ಲೊಂಜಿ ಕತಾರ್, ಜೊತೆ ಪ್ರಾಯೋಜಕರಾಗಿ ಡಾ. ಎಂ ರವಿ ಶೆಟ್ಟಿ- ವ್ಯವಸ್ಥಾಪಕ ನಿರ್ದೇಶಕರು, ಎ ಟಿ ಎಸ್ ಗ್ರೂಪ್, ಶ್ರೀ ಫೆಲಿಕ್ಸ್ ಲೋಬೊ- ವ್ಯವಸ್ಥಾಪಕ ನಿರ್ದೇಶಕರು,ಕತಾರ್ ಮೆಟಾಕೋಟ್, ಶ್ರೀ ವೀರೇಶ್ ಮನ್ನಂಗಿ- ವಿಭಾಗೀಯ ವ್ಯವಸ್ಥಾಪಕ, ಅಲ್ ಮುಫ್ತಾ ಕಾಂಟ್ರಾಕ್ಟಿಂಗ್ ಕಂಪೆನಿ ಶ್ರೀ ಜೆರಾಲ್ಡ್ ಡಿಮೆಲ್ಲೋ- ವ್ಯವಸ್ಥಾಪಕ ನಿರ್ದೇಶಕರು ಸ್ಪೇಸ್ ಕಾಂಟ್ರಾಕ್ಟಿಂಗ್ ಅಂಡ್ ಟ್ರಾನ್ಸ್ಪೋರ್ಟ್ ಇವರುಗಳು ಈ ಸಂಪೂರ್ಣ ಕಾರ್ಯಕ್ರಮದ ಪ್ರಾಯೋಜಕರಾಗಿದ್ದರು.
ಧನ್ಯವಾದ ಸಮರ್ಪಣೆಯನ್ನು ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಅಮಿತ್ ಪೂಜಾರಿಯವರು ನೆರವೇರಿಸಿಕೊಟ್ಟರು. ಎಲ್ಲಾ ಕಾರ್ಯಕ್ರಮದ ನಿರ್ವಹಣೆಯನ್ನು ಸಂಘದ ಜೊತೆ ಕಾರ್ಯದರ್ಶಿ ಶ್ರೀ ಜಯರಾಮ ಸುವರ್ಣ ನಡೆಸಿಕೊಟ್ಟರು. ಒಟ್ಟಿನಲ್ಲಿ 35೦೦೦ ಸಾವಿರಕ್ಕೂ ಮಿಕ್ಕಿ ಜನರು ಈ ಕಾರ್ಯಕ್ರಮವನ್ನು ಫೇಸ್ಬುಕ್ ನೇರ ಪ್ರಸಾರದ ಮೂಲಕ ನೋಡುವಂತಾಯಿತು. ಇದೊಂದು ಬಿಲ್ಲವಾಸ್ ಕತಾರ್ ನ ಇತಿಹಾಸಲ್ಲೇ ಹೊಸ ದಾಖಲೆಯನ್ನು ಸೃಷ್ಟಿಸಿದ ಚೊಚ್ಚಲ ಪ್ರತಿಭಾ ಸಪ್ತಾಹ ಎನ್ನುವ ಕೀರ್ತಿಗೆ ಪಾತ್ರವಾಯಿತು.
ನಿತೇಶ್ ದೊಡ್ಡಣಗುಡ್ಡೆ
ದೋಹಾ ಕತಾರ್ .