ನಳಿನ್ ಅವರ ಮಿಮಿಕ್ರಿ ಮಾಡುವ ಎಕ್ಸ್ಫರ್ಟ್ಗಳು ಇಲ್ಲಿ ಇದ್ದಾರ..: ಆಡಿಯೋ ಬಗ್ಗೆ ನಗುತ್ತಲೇ ವ್ಯಂಗ್ಯವಾಡಿದ ರಮಾನಾಥ್ ರೈ
ನಳಿನ್ ಕುಮಾರ್ ಕಟೀಲ್ ಅವ ರದ್ದು ಎನ್ನಲಾದ ಆಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿ ಮಾಜಿ ಸಚಿವ ರಮಾನಾಥ್ ರೈ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ನೀವೆಲ್ಲಾ ಮಂಗಳೂರಿನವರು ಅಲ್ವಾ..? ನೀವು ನಳಿನ್ ಕುಮಾರ್ ಕಟೀಲ್ ಅವರ ಜೊತೆ ಮಾತನಾಡಿಲ್ವಾ,,? ಅವರ ಮಿಮಿಕ್ರಿ ಮಾಡುವ ಎಕ್ಸ್ಪರ್ಟ್ಗಳು ಇಲ್ಲಿ ಇದ್ದಾರ..? ಇದು ನಿಮ್ಮಗೆ ಅರ್ಥ ಆಗ್ತದೆ ಅಲ್ವಾ, ಪತ್ರಕರ್ತರಿಗೆ ಮರು ಪ್ರಶ್ನೆ ಕೇಳಿದ ರೈ, ಏನಿದ್ರೂ ಅವರ ನಗುವನ್ನು ಮಿಮಿಕ್ರಿ ಮಾಡೋದಕ್ಕೆ ಯಾರಿಂದಲೂ ಸಾಧ್ಯವಿಲ್ಲ .ಆಡಿಯೋ ಬಗ್ಗೆ ನಗುತ್ತಲೇ ಮಾಜಿ ಸಚಿವ ರಮಾನಾಥ್ ರೈ ವ್ಯಂಗ್ಯಮಾಡಿದರು.