ಗೇರು ಕೃಷಿ ಕಡಿದ ಅರಣ್ಯಾಧಿಕಾರಿಗಳ ವರ್ತನೆಗೆ ಖಂಡನೆ: ಸುಳ್ಯ ತಾಲೂಕು ರೈತ ಸಂಘದಿಂದ ಪ್ರತಿಭಟನೆಯ ಎಚ್ಚರಿಕೆ

ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದಲ್ಲಿ ಶೇಷಮ್ಮ ಎಂಬವರ ಸ್ವಾಧೀನದಲ್ಲಿರುವ ಜಾಗದಲ್ಲಿ ನೆಟ್ಟ ಗೇರು ಗಿಡಗಳನ್ನು ಅರಣ್ಯಾಧಿಕಾರಿ ಕಡಿದಿರುವುದಕ್ಕೆ ಸುಳ್ಯ ತಾಲೂಕಿನ ರೈತ ಸಂಘ ತೀವ್ರವಾಗಿ ಖಂಡಿಸಿದ್ದಾರೆ.

 

ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ರೈತ ಸಂಘದ ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು ಅವರು, ಸುಳ್ಯ ತಾಲೂಕು ತೋಡಿಕಾನ ಗ್ರಾಮದ ಶೇಷಮ್ಮ ಎಂಬವರ ಸ್ವಾಧೀನದಲ್ಲಿ ಸುಮಾರು ೫೦ ವರ್ಷಗಳಿಂದ ಇದ್ದ ಸ್ಥಳವಾಗಿರುತ್ತದೆ. ಈ ಸ್ಥಳದಲ್ಲಿ ಕಸಿ ಗೇರು ಗಿಡವನ್ನು ಕಳೆದ ಮೂರು ವರ್ಷಗಳ ಹಿಂದೆ ನೆಟ್ಟಿದ್ದರು. ಅರಣ್ಯಾಧಿಕಾರಿಗಳು ಯಾವುದೇ ಗಡಿ ಗುರುತು ಮಾಡದೇ, ಶೇಷಮ್ಮರವರಿಗೆ ಯಾವುದೇ ಮಾಹಿತಿಯನ್ನು ನೀಡದೆ ಸರಿಸುಮಾರು ೮೦ ಗಿಡಗಳನ್ನು ಕಡಿದು ಹಾಕಿ ತಮ್ಮ ದರ್ಪವನ್ನು ತೋರಿಸಿದ್ದಾರೆ. ಅರಣ್ಯವನ್ನೇ ರಕ್ಷಣೆ ಮಾಡಬೇಕಾದ ಅರಣ್ಯಾಧಿಕಾರಿಗಳಾದ ಮನೋಜ್ ಕುಮಾರ್ ಮತ್ತು ಚಿದಾನಂದರವರು ಗಿಡವನ್ನು ಕಡಿದು ತಮ್ಮ ಅಹಾಂಕಾರವನ್ನು ತೊರಿಸಿದ್ದಾರೆ. ಇದನ್ನು ತಾಲೂಕು ರೈತ ಸಂಘ ಖಂಡಿಸುತ್ತದೆ ಎಂದು ಹೇಳಿದರು.


ಈ ಸಂದಭದಲ್ಲಿ ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಭರತ್ ಕುಮಾರ್, ನೂಜಾಲು ಪದ್ಮನಾಭ ಗೌಡ, ಸುಳ್ಯಕೊಡಿ ಮಾಧವ ಗೌಡ, ದಿವಾಕರ ಪೈ ಅರಂಬೂರು, ಸೆಬಾಸ್ಟಿನ್ ಮಡಪ್ಪಾಡಿ, ಮಂಜುನಾಥ ಮಡ್ತಿಲ, ರಾಮಕೃಷ್ಣ ಕುಂಟುಕಾಡು, ಪೂವಯ್ಯ ಗೌಡ ಅಲೆಟ್ಟಿ, ಉಮೇಶ್ ಕೂಟೇಲು ಮೊದಲದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.