ನಾಳೆ ಪಿಯುಸಿ ಫಲಿತಾಂಶ: ಎಷ್ಟು ಗಂಟೆಗೆ ..? ರಿಸಲ್ಟ್ ನೋಡುವುದು ಹೇಗೆ ಇಲ್ಲಿದೆ ಮಾಹಿತಿ..

ಯುಸಿ ವಿದ್ಯಾರ್ಥಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಫಲಿತಾಂಶವನ್ನು ನಾಳೆ ಅಂದರೆ ಜುಲೈ 20ರಂದು ಪ್ರಕಟಿಸಲಾಗುತ್ತಿದೆ.

ಶಿಕ್ಷಣ ಇಲಾಖೆಯ ವೆಬ್ಸೈಟ್ನಲ್ಲಿ ಫಲಿತಾಂಶ ಪ್ರಕಟವಾಗಲಿದ್ದು, ಸಂಜೆ 4.30 ಗಂಟೆಗೆ ಫಲಿತಾಂಶ ನೋಡಬಹುದಾಗಿದೆ. ಇದಾಗಲೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ತಿಳಿಸಿರುವಂತೆ ಎಸ್ಎಸ್ಎಲ್ಸಿ ಮತ್ತು ಪ್ರಥಮ ಪಿಯುಸಿ ಅಂಕಗಳು ಹಾಗೂ ಇಂಟರ್ನಲ್ ಅಸೆಸ್‍ಮೆಂಟ್ ಪರಿಗಣಿಸಿ ಫಲಿತಾಂಶ ನೀಡಲಾಗುತ್ತದೆ. ಈ ಕುರಿತು ಸುರೇಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನಿಡಿದ್ದಾರೆ. ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದೇ ವ್ಯವಸ್ಥಿತವಾಗಿ ಫಲಿತಾಂಶ ನೀಡಲಾಗುವುದು. ಈ ಬಾರಿ ಯಾವುದೇ ಶ್ರೇಯಾಂಕ ನೀಡುವುದಿಲ್ಲ. ಅಂಕಗಳ ಆಧಾರದ ಮೇಲೆಯೇ ಸಿಬಿಎಸ್‍ಇ ಮಾದರಿಯಲ್ಲಿ ಎಸ್‍ಎಸ್‍ಎಲ್ ಸಿ ಹಾಗೂ ಪ್ರಥಮ ಪಿಯುಸಿ ಅಂಕ ಆಧರಿಸಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.suresh kumar education minister

ಪರೀಕ್ಷೆ ನಡೆಯದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ನೋಂದಣಿ ನಂಬರ್ ಸಿಕ್ಕಿಲ್ಲ. ಆದ್ದರಿಂದ ಫಲಿತಾಂಶ ನೋಡುವ ಸಲುವಾಗಿ ವಿದ್ಯಾರ್ಥಿಗಳಿಗೆ ಹೊಸ ರಿಜಿಸ್ಟರ್ ನಂಬರ್ ಜನರೇಟ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ವೆಬ್ ತಾಣದಲ್ಲಿ know your number ಅಯ್ಕೆ ಮೂಲಕ ವಿದ್ಯಾರ್ಥಿಗಳು ಪರಿಶೀಲಿಸಬಹುದು. ವಿದ್ಯಾರ್ಥಿಗಳಿಗೆ ಎಸ್‍ಎಂಎಸ್ ಮೂಲಕ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ನೀಡಲಾಗುವುದು. ಆಯಾ ಕಾಲೇಜುಗಳಿಗೆ ಫಲಿತಾಂಶದ ವಿವರದ ಪಟ್ಟಿ ಹೋಗಲಿದೆ. ಫಲಿತಾಂಶದ ಮುನ್ನ ವಿದ್ಯಾರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ಖಚಿತ ಪಡಿಸಿಕೊಂಡು, ಜನರೇಟ್ ಆದ ರಿಜಿಸ್ಟರ್ ನಂಬರ್ ಪರಿಶೀಲಿಸಿ ಫಲಿತಾಂಶವನ್ನು ನೋಡಬಹುದಾಗಿದೆ.PUC Supplementary Examination Results - 2020 how to see pu result ವೆಬ್‍ಸೈಟ್ ವಿವರ http://karresults.nic.in

 

Related Posts

Leave a Reply

Your email address will not be published.