ಪಡುಬಿದ್ರಿಯಲ್ಲಿ ಎರ್ರಾ ಬಿರ್ರಿ ಚಲಿಸಿದ ಲಾರಿ:ಮೂರು ದ್ವಿಚಕ್ರ ವಾಹನ ಸಹಿತ ಒಂದು ಕಾರು ಜಖಂ
ಲಾರಿ ಚಾಲಕನೊರ್ವನ ಅಜಾಗರೂಕತೆಯ ಚಾಲನೆಯಿಂದಾಗಿ ರಸ್ತೆಯಂಚಿನಲ್ಲಿ ಪಾರ್ಕ್ ಮಾಡಲಾದ ದ್ವಿಚಕ್ರ ವಾಹನಗಳು, ಕಾರೊಂದರ ಸಹಿತ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ತಗ್ಗು ಪ್ರದೇಶದಲ್ಲಿ ನಿಂತಿದೆ.
ಮಂಗಳೂರು ಕಡೆಯಿಂದ ಬಂದ ಲಾರಿಯೊಂದು ಪಡುಬಿದ್ರಿ ಬಂಟರ ಸಂಘದ ಮುಂಭಾಗದ ಹೊಟೇಲೊಂದರ ಮುಂಭಾಗ ರಸ್ತೆಯಂಚಿನಲ್ಲಿ ಹೊಟೇಲ್ ಗ್ರಾಹಕರುನಿಲ್ಲಿಸಿದ ಎರಡು ಬೈಕ್ ಒಂದು ಸ್ಕೂಟರ್ ಹಾಗೂ ಒಂದು ರಿಡ್ಜ್ ಕಾರಿಗೆ ಡಿಕ್ಕಿಯಾಗಿ ಮುಂದಿದ್ದ ವಿದ್ಯುತ್ ಕಂಬಕ್ಕೂ ಡಿಕ್ಕಿಯೊಡೆದು ಸುಮಾರು ಅರವತ್ತು ಅಡಿ ದೂರದ ತಗ್ಗಿನಲ್ಲಿ ಹೋಗಿ ನಿಂತಿದೆ. ಅಪಘಾತ ಸಂದರ್ಭ ಈ ಭಾಗದಲ್ಲಿ ಯಾರೂ ಇಲ್ಲದ ಪರಿಣಾಮ ಪ್ರಾಣಾಪಾಯ ಸಂಭವಿಸಿಲ್ಲ. ವಾಹನಗಳು ಬಹುತೇಕ ಜಖಂಗೊಂಡಿದೆ. ಈ ಅಪಘಾತದ ಬಗ್ಗೆ ಪ್ರತಿಕ್ರಿಯೆ ವ್ಯಕ್ತ ಪಡಿಸಿದ ಲಾರಿ ಚಾಲಕ ಏನಾಯಿತೆಂದು ಗೊತ್ತಿಲ್ಲ…ಲಾರಿ ನನ್ನ ನಿಯಂತ್ರಣಕ್ಕೆ ಬಂದಿಲ್ಲ ಎಂದಿದ್ದಾನೆ.
ಅಪಘಾತ ವಲಯ: ನೂತನವಾಗಿ ಸಣ್ಣ ತಿರುವು ಪ್ರದೇಶ ಇದ್ದಾಗಿದ್ದು ಇಲ್ಲಿ ಹೆದ್ದಾರಿ ನಿರ್ಮಾಣ ಗೊಂಡ ಬಳಿಕ ಹತ್ತಾರು ಅಪಘಾತಗಳು ನಡೆದಿರುವುದು ಇಲ್ಲಿ ಸ್ಮರಿಸ ಬಹುದಾಗಿದೆ. ಸ್ಥಳೀಯರು ಹೇಳುವಂತೆ ಏಕಾಏಕಿ ಈ ಭಾಗದಲ್ಲಿ ವಾಹನಗಳು ಉರುಳುತ್ತಿದ್ದು. ಈ ಬಗ್ಗೆ ಮಾದ್ಯಮಗಳು ಬಹಳಷ್ಟು ಬಾರಿ ವರದಿ ಮಾಡಿದ್ದರೂ ಸಂಬಂಧಪಟ್ಟ ಇಲಾಖೆಗಳು ಯಾವುದೇ ರೀತಿಯಲ್ಲಿ ಸ್ಪಂಧಿಸದಿರುವುದರಿಂದ ಇಂಥಹ ದುರ್ಘಟನೆಗಳು ನಡೆಯುವಂತ್ತಾಗಿ. ಮುಂದಿನ ದಿನದಲ್ಲಾದರೂ ಹೆಚ್ಚಿನ ದುರಂತ ಸಂಭವಿಸುವ ಮೊದಲು ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.