ಪುತ್ತೂರಿನಲ್ಲಿ ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ
ಪರಿಶಿಷ್ಟ ಜಾತಿ ಘಟಕ ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗು ಬ್ಲಾಕ್ ಕಾಂಗ್ರೆಸ್ ಸಮಿತಿ ಪುತ್ತೂರು ವತಿಯಿಂದ ಕೇಂದ್ರ ಸರ್ಕಾರದ ಜನವಿರೋಧಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕೇಂದ್ರ ಹಾಗು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಯಂಗ್ ಬ್ರಿಗೇಡ್ ಸೇವಾದಳ ಅಧ್ಯಕ್ಷರು, ಯುವ ದಲಿತ ನಾಯಕರಾದ ಅಭಿಷೇಕ್ ಬೆಳ್ಳಿಪ್ಪಾಡಿ ಭಾರತದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಪೆಟ್ರೋಲ್ ಬೆಲೆ 100ರ ಗಡಿ ದಾಟಿ ಗಿನ್ನಿಸ್ ದಾಖಲೆ ಬಾರಿಸಿದ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸಿದರು.
ಬಿಜೆಪಿ ನೇತೃತ್ವದ ಕೇಂದ್ರ ಹಾಗು ರಾಜ್ಯ ಸರ್ಕಾರಕ್ಕೆ ಕಿಂಚಿತ್ತೂ ಬಡವರ,ದಲಿತರ ,ಮದ್ಯಮ ವರ್ಗದ ಜನರ ಕಷ್ಟ ನೋವುಗಳು ಅರ್ಥವಾಗುವುದಿಲ್ಲ ಅವರು ಏನಿದ್ದರೂ ಶ್ರೀಮಂತ ಬಂಡವಾಳಶಾಹಿ ಜನರ ಪರವಾಗಿ ಇರುವವರು, ಬಡ ಮದ್ಯಮ ವರ್ಗದ ಜನರ ಹಿತವನ್ನು ಕಾಪಾಡಬೇಕೆಂದರೆ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕಾಗಿದೆ ಎಂದರು.ಬಳಿಕ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಪ್ರಸಾದ್ ಕೌಶಲ್ ಶೆಟ್ಟಿ ಅವರು ಕೇಂದ್ರ ಸರ್ಕಾರದ ಕಾರ್ಯ ವೈಫಲ್ಯದಿಂದಾಗಿ ಇಂದು ದೇಶದಲ್ಲಿ ಎಲ್ಲಾ ಸಮುದಾಯದ ಜನರಲ್ಲಿ ದಿನ ನಿತ್ಯದ ಬದುಕು ನಡೆಸಲು ಕಷ್ಟ ಆಗಿದೆ ಎಂದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ರಿಯಾಜ್ ಪರ್ಲಡ್ಕ, ಪ್ರಹ್ಲಾದ್ ಬೆಳ್ಳಿಪ್ಪಾಡಿ,ಪರಿಶಿಷ್ಟ ಜಾತಿ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಕೇಶವ ಪಡೀಲ್,ಬಾಬು ಮರಿಕೆ,ಭಾತೀಶ್ ಅಳಕೆಮಜಲ್, ಗಣೇಶ್ ಎಚ್ ಪಡೀಲ್ , ಶರೀಫ್ ಬಲ್ನಾಡ್, ಸೇಟು ಪಡೀಲ್,ಸರತ್ ಪಡೀಲ್, ಸತೀಶ್ ಪಡೀಲ್, ಅಶೋಕ್ ಪಡೀಲ್, ಸಂದೇಶ್,ಧನಂಜಯ, ರಮೇಶ್, ಸಂತೋಷ್,ಬಾಬು ಮರಿಕೆ,ಭವಿತ್ ಕುಂಬ್ರ, ಚರಣ್ ರಾಜ್, ವಿಶಾಂಕ್, ಮುಂತಾದವರು ಉಪಸ್ಥಿತರಿದ್ದರು.