ಪುತ್ತೂರಿನಲ್ಲಿ ಪಿಎಫ್ಐ ವತಿಯಿಂದ ಪ್ರತಿಭಟನೆ
ಪುತ್ತೂರು:ಅಸ್ಸಾಂನಲ್ಲಿ ಪ್ರತಿಭಟನಕಾರರ ಮೇಲೆ ದಾಳಿ ಹಾಗೂ ಹತ್ಯೆಯನ್ನು ಖಂಡಿಸಿ ಅಸ್ಸಾಂ ಸರಕಾರ ಹಾಗೂ ಪೊಲೀಸ್ ಕ್ರೌರ್ಯದ ವಿರುದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸೆ.28ರಂದು ಮಿನಿ ವಿಧಾನ ಸೌಧದ ಮುಂಭಾದ ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪಿಎಫ್ಐ ಪುತ್ತೂರು ಜಿಲ್ಲಾಧ್ಯಕ್ಷ ಜಾಬೀರ್ ಅರಿಯಡ್ಕ ಮಾತನಾಡಿ, ದೇಶದಲ್ಲಿ ಹಲವಾರು ಹೋರಾಟಗಳನ್ನು ಮಾಡಿರುವ ನಾವು ಆರ್ಎಸ್ಎಸ್ ವಿರುದ್ದ ಹೋರಾಟದಲ್ಲಿ ಒಂದಿಂಚು ಹಿಂದೆ ಸರಿಯುವುದಿಲ್ಲ. ದೇಶದ ಅಲ್ಪ ಸಂಖ್ಯಾತರು, ದಲಿತರನ್ನು ಕಡೆಗಣಿಸುವುದಾದರೆ ಆರ್ಎಸ್ಎಸ್ಗೂ ಮುಂದೋಂದು ದಿನ ಇಂತಹ ಪರಿಸ್ಥಿತಿ ಬರಲಿದೆ ಎಂದು ಎಚ್ಚರಿಸಿದರು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಅಶ್ರಫ್ ಎ.ಕೆ ಮಾತನಾಡಿ, ಅಸ್ಸಾ ನಿರಂತರ ವಿವಾದಕ್ಕಿಡಾಗುವ ರಾಜ್ಯ. ಎನ್ಆರ್ಸಿಗೆ ಬಲಿಯಾದ ರಾಜ್ಯ. ಒಂದು ವರ್ಗವನ್ನು ಗುರಿಪಡಿಸುವ ಷಡ್ಯಂತ್ರ ನಿರಂತವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು.
ಎಸ್ಡಿಪಿಐ ಅಧ್ಯಕ್ಷ ಇಬ್ರಾಹಿಂ ಸಾಗರ್, ಅಶ್ರಫ್ ಬಾವು, ಸಿದ್ದೀಕ್, ಹಮೀದ್ ಸಾಲ್ಮರ, ಉಮ್ಮರ್ ಕೂರ್ನಡ್ಕ, ಕೆ.ಎಚ್ ಖಾಸೀಂ ಹಾಜಿ ಸೇರಿದಂತೆ ಹಲವು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿ ಆರ್ಎಸ್ಎಸ್, ಕೇಂದ್ರ ಸರಕಾರ, ಪ್ರಧಾನಿ ಮೋದಿ, ಅಸ್ಸಾಂ ಸರಕಾರದ ವಿರುದ್ದ ದಿಕ್ಕಾರ ಕೂಗಿದರು.