ಬಂಟ್ವಾಳದ ಕಲ್ಲಗುಡ್ಡೆಯಲ್ಲಿ ಮನೆ ಮೇಲೆ ಆವರಣಗೋಡೆ ಕುಸಿತ: ಮನೆಮಂದಿ ಪವಾಡ ಸದೃಶ ಪಾರು

ಬಂಟ್ವಾಳ: ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಬಂಟ್ವಾಳದ ಕಲ್ಲಗುಡ್ಡೆ ಎಂಬಲ್ಲಿ ಮಣ್ಣು ಸಹಿತ ಆವರಣ ಗೋಡೆ ಮನೆಯೊಂದರ ಮೇಲೆ ಕುಸಿದು ಬಿದ್ದು ಮನೆಮಂದಿ ಪವಾಡ ಸದೃಶ್ಯರಾಗಿ ಪಾರಾದ ಘಟನೆ ನಡೆದಿದೆ. ಘಟನೆಯಲ್ಲಿ ಮನೆ ಸಂಪೂರ್ಣ ಜಖಂಗೊಂಡಿದ್ದು 5 ಲಕ್ಷ ರೂಪಾಯಿಗಿಂತಲೂ ಅಧಿಕ ನಷ್ಟ ಸಂಭವಿಸಿದೆ.


ಸೋಮನಾಥ ಕುಲಾಲ್ ಎಂಬವರಿಗೆ ಸೇರಿದ ಈ ಮನೆಯನ್ನು ನವೀನ್ ಎಂಬವರಿಗೆ ವಾಸ್ತವ್ಯಕ್ಕಾಗಿ ಬಾಡಿಗೆಗೆ ನೀಡಲಾಗಿತ್ತು. ಅವರು ಪತ್ನಿ ಪವಿತ್ರ ಹಾಗೂ ಮಗಳೊಂದಿಗೆ ಈ ಮನೆಯಲ್ಲಿ ವಾಸವಿದ್ದು, ಶುಕ್ರವಾರ ತಡರಾತ್ರಿ 12.30ರ ವೇಳೆಗೆ ಮನೆಪಕ್ಕದ ತಡೆಗೋಡೆ ಕುಸಿದು ಮನೆಯ ಗೋಡೆಗಳನ್ನು ಸೀಳಿ ಒಳ ಬಂದಿದೆ. ಮನೆಮಂದಿ ಪಕ್ಕದಲ್ಲೇ ಮಲ್ಲಗಿದ್ದರೂ ಯಾವುದೇ ಗಾಯಗಳಿಲ್ಲದೆ ಪ್ರಣಾಪಯದಿಂದ ಪಾರಾಗಿದ್ದಾರೆ. ಮನೆ ಸಂಪೂರ್ಣ ಹಾನಿಗೀಡಾಗಿದ್ದು ಗೋಡೆಗಳು ಕುಸಿದು ವಾಲಿ ನಿಂತಿದೆ. ಮನೆಯಲ್ಲಿದ್ದ ಫ್ಯಾನ್ ಮತ್ತಿತರ ಎಲೆಕ್ಟ್ರೋನಿಕ್ಸ್ ವಸ್ತುಗಳು, ಮನೆಯ ಹೊರ ಬಾಗದಲ್ಲಿದ್ದ ದ್ವಿಚಕ್ರ ವಾಹನಕ್ಕೂ ಹಾನಿಯಾಗಿದೆ. ಸ್ಥಳಕ್ಕೆ ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಪುರಸಭಾ ಸದಸ್ಯ ಗಂಗಾಧರ್ ಪೂಜಾರಿ, ಪ್ರಮುಖಖರಾದ ರಮನಾಥ ಪೈ ಮೊದಲಾದವರು ಬೆಳಿಗ್ಗ ಭೇಟಿ ನೀಡಿದ್ದಾರೆ.

Related Posts

Leave a Reply

Your email address will not be published.