ಬಲ್ಲಾಳ್ ಭಾಗ್ನಲ್ಲಿ ಹಿಂದೂಗಳ ಮೇಲೆ ಹಲ್ಲೆ ಪ್ರಕರಣ : ಆರೋಪಿಗಳನ್ನ ಬಂಧಿಸುವಂತೆ ರಕ್ಷಿತ್ ಕೊಟ್ಟಾರಿ ಆಗ್ರಹ
ಬಲ್ಲಾಳ್ ಭಾಗ್ನಲ್ಲಿ ಹಿಂದೂಗಳ ಮೇಲೆ ಅನ್ಯಧರ್ಮದವರಿಂದ ನಡೆದಿರುವ ದೌರ್ಜನ್ಯದ ಬಗ್ಗೆ ಕೂಲಂಕುಷವಾಗಿ ಮತ್ತು ಪಾರದರ್ಶಕವಾಗಿ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುವಂತೆ ಬಲ್ಲಾಳ್ ಭಾಗ್ ಫ್ರೆಂಡ್ಸ್ನ ರಕ್ಷಿತ್ ಕೊಟ್ಟಾರಿ ಅವರು ಆಗ್ರಹಿಸಿದ್ದರು.
ಅವರು ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಬಲ್ಲಾಳ್ ಭಾಗ್ ಪರಿಸರದ ಸುತ್ತಮುತ್ತ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ನಿಮಿತ್ತ ಆಸುಪಾಸಿನ ಯುವ ಮನಸ್ಸುಗಳಿಗೆ ವೇದಿಕೆಯನ್ನು ಕಲ್ಪಿಸಿದೆ. ಆದರೆ ಅಕ್ಟೋಬರ್ 30ರ ತಡರಾತ್ರಿ ನಮ್ಮ ಮೇಲೆ ದಾಳಿ ನಡೆಸಿರುವುದು ಖಂಡನೀಯ. ಇನ್ನು ಘಟನೆಗೆ ಸಂಬಂಧಿಸಿ ಈಗಾಗಲೇ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಈ ಘಟನೆಯನ್ನು ಅತೀ ಗಂಭೀರವಾಗಿ ಪರಿಗಣಿಸಿ ಪಾದರರ್ಶಕ ತನಿಖೆ ನಡೆಸಿ ಹಲ್ಲೆ ಕೃತ್ಯದ ಪ್ರತಿಯೊಂದು ಮಾಹಿತಿಗಳನ್ನು ಕಲೆ ಹಾಕಿ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಶಿಕ್ಷೆಗೊಳಪಡಿಸಬೇಕು ಎಂದು ಆಗ್ರಹಿಸಿದ್ದರು.ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಬಲ್ಲಾಳ್ ಭಾಗ್ ಫ್ರೆಂಡ್ಸ್ನ ಅಧ್ಯಕ್ಷರಾದ ಪ್ರವೀಣದ ಶೆಟ್ಟಿ, ಸೆಕ್ರೆಟರಿ ರೋಹಿತ್ ಶೆಟ್ಟಿ, ಟ್ರಶರರ್ ವಿವೇಕ್ ಶೆಟ್ಟಿಗಾರ್ ಉಪಸ್ಥಿತರಿದ್ದರು.