ಬಿಎನ್‍ಐ ಮಂಗಳೂರು ಕರಾವಳಿ ಎಕ್ಸ್ ಪೋ-2021
ಬಿಎನ್‍ಐ ಮಂಗಳೂರು ವತಿಯಿಂದ ಕರಾವಳಿ ಎಕ್ಸ್ ಪೋ 2021 ವರ್ಚುವಲ್ ಬಿಸಿನೆಸ್ ಎಕ್ಸಿಬಿಷನ್ ಅನ್ನು ಆಗಸ್ಟ್ 20ರಿಂದ ಆಗಸ್ಟ್ 22ರ ವರೆಗೆ ಆಯೋಜಿಸುತ್ತಿದ್ದೇವೆ ಎಂದು ಬಿಎನ್‍ಐ ಮಂಗಳೂರಿನ ಕರಾವಳಿ ಎಕ್ಸ್ ಪೋ ಇದರ ಅಧ್ಯಕ್ಷರಾದ ಸುನಿಲ್ ದತ್ ಪೈ ತಿಳಿಸಿದರು.
ಅವರು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಬಿಎನ್‍ಐ ಮಂಗಳೂರಿನ ನಾಲ್ಕು ಅಧ್ಯಾಯಗಳ ಭಾಗವಾಗಿದೆ. ಈ ಸಾಂಕ್ರಾಮಿಕ ಸಮಯದಲ್ಲಿ ಬಿಎನ್‍ಐ ಮಂಗಳೂರು ವರ್ಚುವಲ್ ಎಕ್ಸ್‍ಪೋವನ್ನು ಆಯೋಜಿಸುತ್ತಿದ್ದೇವೆ. 120ಕ್ಕೂ ಹೆಚ್ಚು ವ್ಯವಹಾರವು ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶಿಸುತ್ತಿದೆ. ಇದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕೇರಳ, ಕೊಡಗು ಹಾಗೂ ಭಾರತ ಮತ್ತು ವಿಶ್ವದ ಇತರ ಭಾಗಗಳಲ್ಲಿನ ಗ್ರಾಹಕರಿಗೆ ತಕ್ಷಣದ ಅಗತ್ಯಗಳು ಮತ್ತು ಭವಿಷ್ಯದ ಅಗತ್ಯಗಳಿಗಾಗಿ ಗುಣಮಟ್ಟದ ವ್ಯವಹಾರದೊಂದಿಗೆ ತಪಡಗಿಸಿಕೊಳ್ಳಲು ಸಹಾಯ ಮಾಡುತ್ತದೆ. ಕರಾವಳಿ ಎಕ್ಸ್ ಪೋವನ್ನು ಆಗಸ್ಟ್ 20ರಂದು ಸಂಜೆ 7.30ಕ್ಕೆ ಬಿಎನ್‍ಐ ಎಪಿಎಸಿ ಮತ್ತು ಎಮ್‍ಎಫ್‍ಎಎಸ್‍ನ ಅಧ್ಯಕ್ಷರಾದ ಎಮ್‍ಎಸಿ ಶ್ರೀನಿವಾಸನ್, ಬಿಎನ್‍ಐ ಇಂಡಿಯಾದ ಜಿಲ್ಲಾ ನಿರ್ದೇಶಕರಾದ ಮುರುಳಿ ಶ್ರೀನಿವಾಸನ್, ಬಿಎನ್‍ಐ ಮಂಗಳೂರಿನ ಕಾರ್ಯನಿರ್ವಾಹಕ ನಿರ್ದೇಶಕ ಗಣೇಶ್ ಎನ್ ಶರ್ಮಾ ಸೇರಿದಂತೆ ಸಮಿತಿಯ ಸದಸ್ಯರು, ಬಿಎನ್‍ಐ ಮಂಗಳೂರಿನ ನಿರ್ದೇಶಕರು ಮತ್ತು ರಾಯಬಾರಿಗಳ ಉಪಸ್ಥಿತಿಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಹೇಳಿದರು.
ಆನಂತರ ಅನುಪಮ್ ಎಡ್ವಟೈಸರ್ ಮತ್ತು ಪೈ ಸೇಲ್ಸ್ ಸುಝುಕಿಯ ರೀಜನಲ್ ಟ್ರೈನರ್ ಹಾಗೂ ಪ್ರೋಮೋಷನ್ ಕೊರ್ಡಿನೇಟರ್ ಅರುಣ್ ಪೈ ಅವರು ಮಾತನಾಡಿ, ಬಿಎನ್‍ಐ ವಿಶ್ವದ ಪ್ರಮುಖ ವ್ಯವಹಾರ ರೆಫರಲ್ ಸಂಸ್ಥೆಯಾಗಿದ್ದು, ವಿಶ್ವದಾದ್ಯಂತ 10,300ಕ್ಕೂ ಹೆಚ್ಚು ಬಿಎನ್‍ಐ ಅಧ್ಯಾಯಗಳಲ್ಲಿ 284 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. 2020ರಲ್ಲಿ ಬಿಎನ್‍ಐ 11.5 ಮಿಲಿಯನ್ ಮೌಲ್ಯಯುತ ಹೊಸ ಕ್ಲೈಂಟ್ ರೆಫರಲ್‍ಗಳನ್ನು ಹಂಚಿಕೊಂಡರು ಮತ್ತು 16.2ಬಿ ಆದಾಯವನ್ನು ಗಳಿಸಿದರು ಎಂದು ಹೇಳಿದರು.
ಬಿಎನ್‍ಐ ಮಂಗಳೂರಿನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಗಣೇಶ್ ಎನ್ ಶರ್ಮಾ ಅವರು ಮಾತನಾಡಿ, ಎಕ್ಸ್‍ಪೋದ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಸಿವಿಲ್ ಕಾಂಟ್ರಾಕ್ಟರ್ ಮತ್ತು ಮಹೇಶ್ ಇಂಜಿನಿಯರಿಂಗ್ ಸಪೋರ್ಟ್‍ನ ನಿರ್ದೇಶಕರಾದ ಮಹೇಶ್ ಕಾಮತ್, ಏ ಒನ್ ಲಾಜಿಕ್ಸ್ ಸಾಫ್ಟ್‍ವೇರ್ ಡೆವಲಪ್‍ಮೆಂಟ್ ಮತ್ತು ಆನ್‍ಲೈನ್ ಎಕ್ಸ್‍ಪೋ ಸ್ಪೆಷಲಿಸ್ಟ್ ಪ್ರವೀಣ್ ಉಡುಪ ಉಪಸ್ಥಿತರಿದ್ದರು.