ನ.12 ರಂದು ಬೆಸೆಂಟ್ ಕಾಲೇಜಿನಲ್ಲಿ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ
ಕರ್ನಾಟಕ ಕ್ಯಾನ್ಸರ್ ಅವೇರ್ ನೆಸ್ ಫೋರಮ್ ವತಿಯಿಂದ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ಸಂಸ್ಥೆಯ ಸಹಭಾಗಿತ್ವದಲ್ಲಿ ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮವು ನ.12 ರಂದು ಬೆಳಿಗ್ಗೆ 10.00 ಗಂಟೆಗೆ ನಡೆಯಲಿದೆ.ಕ್ಯಾನ್ಸರ್ ಜಾಗೃತಿ ಸರಣಿ ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ಉದ್ಘಾಟಿಸಲಿದ್ದಾರೆ.ಕ್ಯಾನ್ಸರ್ ಜಾಗೃತಿ ಬಗ್ಗೆ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ಸಂಸ್ಥೆಯ ಸಂಶೋಧನಾ ವಿಭಾಗದ ಮುಖ್ಯಸ್ಥ ಹಾಗೂ ಹಿರಿಯ ರೆಡಿಯೋ ಬಯಾಲಜಿಸ್ಟ್ ಡಾ.ಎಂ.ಎಸ್.ಬಾಳಿಗ ಅವರು ಮಾಹಿತಿ ನೀಡಲಿದ್ದಾರೆ .ಕೆ.ಎಂ.ಸಿ ನಿವೃತ್ತ ಪ್ರೊಫೆಸರ್ ಡಾ.ಬಿ.ಶಾಂತಾರಾಮ ಬಾಳಿಗ ಮತ್ತು ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜು ಆಸ್ಪತ್ರೆಯ ತಜ್ಞ ವೈದ್ಯೆ ಡಾ.ಪ್ರತೀಕ್ಷಾ ಜೆ.ರೈ ಅವರು ಕ್ಯಾನ್ಸರ್ ಮತ್ತು ಆರೋಗ್ಯ ಜಾಗೃತಿ ಬಗ್ಗೆ ಮಾತನಾಡಲಿದ್ದಾರೆ. ಬೆಸೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕುಡ್ಪಿ ಜಗದೀಶ್ ಶೆಣೈ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕರ್ನಾಟಕ ಕ್ಯಾನ್ಸರ್ ಅವೆರ್ ನೆಸ್ ಫೋರಮ್ ನ ಸಂಚಾಲಕ ಧರ್ಮರಾಜ್ ಅಮ್ಮುಂಜೆ ತಿಳಿಸಿದ್ದಾರೆ.