ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ) ಎಸ್. ಕೋಡಿ ಇವರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ವೇದಿಕೆಯ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ) ಎಸ್. ಕೋಡಿ ಇವರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ವೇದಿಕೆಯ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ದಿನಾಂಕ 15 .03.2025 ರಂದು ಪದ್ಮಾವತಿ ಲಾನ್ ಎಸ್ ಕೋಡಿ,‌ ತೋಕೂರು ಇಲ್ಲಿ ನೆರವೇರಿಸಲಾಯಿತು.ಈ ಕಾರ್ಯಕ್ರಮದ ಉದ್ಘಾಟನೆಯನ್ನು ಗೋವಿಂದ ದಾಸ್ ಪದವಿಪೂರ್ವ ಕಾಲೇಜು ಸುರತ್ಕಲ್ ಇಲ್ಲಿನ ಉಪನ್ಯಾಸಕರಾದ ಶ್ರೀಮತಿ ಪಲ್ಲವಿ ರಾಜೇಶ್ ರವರು ದೀಪ ಪ್ರಜ್ವಲನೆಗೊಳಿಸಿ ನೆರವೇರಿಸಿದರು.


“ಸಮಾಜದಲ್ಲಿ ಸ್ತ್ರೀಯರು ಮತ್ತು ಪುರುಷರು ಸರಿ ಸಮಾನರು, ಸ್ತ್ರೀಯರು ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು ಹಾಗೂ
ಇಂದಿನ ಯುವ ಪೀಳಿಗೆ ತಮ್ಮ ಆಲೋಚನೆ ದಿಕ್ಕನ್ನು ಬದಲಾಯಿಸಬೇಕು ಎಂಬುದಾಗಿ ಕರೆಕೊಟ್ಟರು.

ಮುಖ್ಯ ಅತಿಥಿಯಾದ ಶ್ರೀಮತಿ ಲಲಿತ ಭಾಸ್ಕರ್ ಶೆಟ್ಟಿಗಾರ್ ರವರು ಸಮಯದ ಮಹತ್ವ ಮತ್ತು ಸದ್ಬಳಕೆಯ ಬಗ್ಗೆ ಮಾಹಿತಿಗಳನ್ನು ನೀಡಿದರು.

ಚಾಮರ ಫೌಂಡೇಶನ್ ನ ವ್ಯವಸ್ಥಾಪನ ಟ್ರಸ್ಟಿಯಾದ ಶ್ರೀಮತಿ ರಚನಾಮನೀಷ್ ರವರು ಸಂಘಟನೆಗಳು ಮಹಿಳೆಯರಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತದೆ. ಆ ಮುಖೇನವಾಗಿ ಒಳ್ಳೆಯ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಜೀವನ ಕೌಶಲ್ಯವನ್ನು ಹೊಂದುವಂತಾಗಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷರಾದ ಶ್ರೀ ನವೀನ್ ಹರಿಪಾದೆಯವರು ವಹಿಸಿ ವಿಶ್ವ ಮಹಿಳಾ ದಿನಾಚರಣೆಯ ಮಹತ್ವವನ್ನು ತಿಳಿಸಿ ಬ್ರಹ್ಮಶ್ರೀ ಮಹಿಳಾ ವೇದಿಕೆಯ ಸದಸ್ಯರು ಇನ್ನೂ ಉತ್ತಮ ರೀತಿಯ ಕಾರ್ಯಕ್ರಮಗಳನ್ನು ನೀಡಬೇಕೆಂದು ತಿಳಿಸಿದರು.

ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಮಂದಿರ ಎಸ್ ಕೊಡಿ ಇದರ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಗುರುರಾಜ್ ಎಸ್ ಪೂಜಾರಿಯವರು ಮುಂದಿನ ಯುವ ಪೀಳಿಗೆಯನ್ನು ಉತ್ತಮ ಸಂಸ್ಕೃತಿ – ಸಂಸ್ಕಾರವನ್ನು ನೀಡಿ ಬೆಳೆಸ ಬೇಕಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಹೋಮಿಯೋಪತಿ ವೈದೈಯಾದ
ಡಾ ವಸುಮತಿ ಕೋಡಿಕಲ್ ರವರನ್ನು ಸಾಧಕರ ನೆಲೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಂದಿರದ ಅರ್ಚಕರಾದ ಶ್ರೀ ದಾಮೋದರ ಸುವರ್ಣ, ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಶಾಂತ ಅಶೋಕ್ ಕರ್ಕೇರ, ಯುವ ವೇದಿಕೆಯ ಅಧ್ಯಕ್ಷರಾದ ಶ್ರೀ ಪವನ್ ಕುಮಾರ್ ಉಪಸ್ಥಿತರಿದ್ದರು

ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ನೆರವೇರಿಸಿ ಬಹುಮಾನಗಳನ್ನು ವಿತರಿಸಿ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಕಾರ್ಯಕ್ರಮವನ್ನು ಶ್ರೀಮತಿ ಬಬಿತಾ ಜೆ. ಸುವರ್ಣ ರವರು ಸ್ವಾಗತಿಸಿ, ಸನ್ಮಾನ ಪತ್ರವನ್ನು ಶ್ರೀಮತಿ ಕುಸುಮ ಹೆಚ್ ಕೋಟ್ಯಾನ್ ರವರು ಓದಿ,
ಶ್ರೀಮತಿ ಸುನೀತ ಗುರುರಾಜ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

Related Posts

Leave a Reply

Your email address will not be published.