ಭರದಿಂದ ಸಾಗುತ್ತಿದೆ ಮುದೆಲ್ ಕಿರು ಚಿತ್ರದ ಚಿತ್ರೀಕರಣ
ಖ್ಯಾತ ತುಳು ಚಿತ್ರ ನಟ ರವಿ ರಾಮಕುಂಜ ನಿರ್ದೆಶನದ, ಸಂತೋಷ್ ಕುಮಾರ್ ಶೆಟ್ಟಿ ಛಾಯಾಗ್ರಹಣದ ಮುದೆಲ್ ” ಕಿರು ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ.
ಕಡಬ ತಾಲೂಕಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಕೂಲ್ ಕುಸಲ್ ಕ್ರಿಯೇಷನ್ ನ ಮೊದಲ ಕಿರು ಚಿತ್ರ ಇದಾಗಿದೆ. ರಮಾ ಬಿ.ಸಿ ರೋಡ್ ಸಂಭಾಷಣೆ ಸಹಕಾರದ ಖ್ಯಾತ ರಂಗಭೂಮಿ ಕಲಾವಿದ ತುಳು ಹಾಗೂ ಕನ್ನಡ ಚಿತ್ರ ನಟ ರವಿರಾಮಕುಂಜ ನಿರ್ದೆಶನ ಹಾಗೂ ಅಭಿನಯದ ಚಿತ್ರವಾಗಿದೆ. ತನ್ನ ಬರವಣಿಗೆಯ ಕವನಗಳ ಮೂಲಕ ಹಲವಾರು ಮನ್ನಣೆ ಪಡೆದಿರುವ ನವ್ಯಾ ಪ್ರಸಾದ್ ನೆಲ್ಯಾಡಿ ಅಭಿನಯದಲ್ಲಿದ್ದಾರೆ. ರಂಗಭೂಮಿ ಕಲಾವಿದರಾದ ಸಂತೋಷ್ ನೆಲ್ಯಾಡಿ, ಆಪ್ತ ಶೆಟ್ಟಿ ಹಾಗೂ ಕೂಲ್ ಕುಸ್ ಕ್ರಿಯೇಷನ್ ಕಲಾವಿದರಾದ ಕುಶಾಲಪ್ಪ ನೆಲ್ಯಾಡಿ, ಅನಿಲ್ ನೆಲ್ಯಾಡಿ ದಿನೇಶ್ ನೆಲ್ಯಾಡಿ, ದೀಪಕ್ ನೆಲ್ಯಾಡಿ, ದೀಕ್ಷಿತ್ ನೆಲ್ಯಾಡಿ ಹಾಗೂ ಚರಣ್ ನೆಲ್ಯಾಡಿ ಅಭಿನಯ ಬಳಗದಲ್ಲಿದ್ದಾರೆ.