ಕಾಣಿಯೂರು: ಬೆಡ್‌ಶೀಟ್ ಮಾರಾಟಕ್ಕೆಂದು ಕಾರಲ್ಲಿ ಬಂದಿದ್ದ ಇಬ್ಬರು ಆರೋಪಿಗಳಿಂದ ಮಾನಭಂಗ ಯತ್ನ ನಡೆದಿರುವ ಹಿನ್ನಲೆಯಲ್ಲಿ ಸಂತ್ರಸ್ತೆ ಮಹಿಳೆ ಮನೆಗೆ ಸಚಿವ ಎಸ್. ಅಂಗಾರ ಅ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಬೆಡ್ ಶೀಟ್ ಮಾರಾಟಕ್ಕೆಂದು ಬಂದಿದ್ದ ಇಬ್ಬರು ಆರೋಪಿಗಳು ತನ್ನ ಮೇಲೆ ಮಾನಭಂಗ ಯತ್ನಿಸಿರುವ ಬಗ್ಗೆ ರಫಿಕ್ ಮತ್ತು ರಮೀಜುದ್ದೀನ್ ಎಂಬವರ ವಿರುದ್ಧ
ಮದುವೆಯಾಗಿ ಹಲವು ವರ್ಷ ಕಳೆದರೂ ಮಕ್ಕಳಾಗದ ಚಿಂತೆಯಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ಠಾಣಾ ವ್ಯಾಪ್ತಿಯ ಕೊಯಿಲ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಕೊಯಿಲಾ ಗ್ರಾಮದ ಗುಲ್ಗೋಡಿ ನಿವಾಸಿ ತಿಮ್ಮಪ್ಪ ಗೌಡ (೭೦) ಎಂದು ಗುರಿತಿಸಲಾಗಿದೆ. ಇವರು ರಬ್ಬರ್ ಟ್ಯಾಪರ್ ಆಗಿದ್ದು, ಇತ್ತೀಚೆಗೆ ಕೊಲ್ಯದ ರೊಟ್ಟಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇವರಿಗೆ ಮಕ್ಕಳಿಲ್ಲದ ಪರಿಣಾಮ ಅದೇ ಕೊರಗಿನಲ್ಲಿ
ಕಡಬ: ಇನ್ನೋವಾ ಹಾಗೂ ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿದ ಘಟನೆ ಶನಿವಾರ ಬೆಳಿಗ್ಗೆ ಪಂಜ – ಕಡಬ ರಸ್ತೆಯ ಕೋಡಿಂಬಾಳದಲ್ಲಿ ನಡೆದಿದೆ.ಧರ್ಮಸ್ಥಳ ಮೂಲದವರಿದ್ದ ಇನ್ನೋವಾ ಕಾರು ಹಾಗೂ ಬೆಂಗಳೂರಿನಿಂದ ಪಂಜ ಮಾರ್ಗವಾಗಿ ಕಡಬಕ್ಕೆ ಬರುತ್ತಿದ್ದ ಸುಗಮ ಸಂಸ್ಥೆಗೆ ಸೇರಿದ ಖಾಸಗಿ ಬಸ್ ನಡುವೆ ಕೋಡಿಂಬಾಳ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಇನ್ನೋವಾ ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದು, ಪವಾಡಸದೃಶ ಅಪಾಯದಿಂದ ಪಾರಾಗಿದ್ದಾರೆ.
ಕಡಬ,ಸವಣೂರು : ಮಾತೃಭೂಮಿ ಸಾವಯವ ಕೃಷಿ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ.) ಕಡಬ ,ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ,ಅರಣ್ಯ ಇಲಾಖೆ ಪುತ್ತೂರು ,ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲ ಇದರ ವತಿಯಿಂದ ಸವಣೂರು ಯುವಕ ಮಂಡಲದ ಯುವ ಸಭಾಭವನದಲ್ಲಿ ಸಸಿ ಮತ್ತು ತರಕಾರಿ ಬೀಜ ವಿತರಣೆ ಹಾಗೂ ಕೃಷಿ ಅರಣ್ಯ ರೈತ ಸಹಾಯಧನದ ಬಗ್ಗೆ ಮಾಹಿತಿ ಕಾರ್ಯಗಾರ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಾರ್ಯಪ್ಪ ಮಾತನಾಡಿ,
ಕಡಬ: ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಪತ್ರಕರ್ತರ ಪ್ರಯತ್ನ ಶ್ಲಾಘನೀಯ ಎಂದು ದ.ಕ.ಜಿಲ್ಲಾ ಮುಖ್ಯ ಕಾರ್ಯ ನಿರ್ವಹ ಣಾಧಿಕಾರಿ ಡಾ.ಕುಮಾರ್ ತಿಳಿಸಿದ್ದಾರೆ. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕಡಬ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಕೊಂಬಾರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿಂದು ಪತ್ರಕರ್ತರು ಗ್ರಾಮ ವಾಸ್ತವ್ಯ ಮಾಡಿರುವ ಸಿರಿಬಾಗಿಲು-ಕೊಂಬಾರು ಗ್ರಾಮಗಳ ವ್ಯಾಪ್ತಿಗೊಳಪಟ್ಟ ನಾಲ್ಕು ಶಾಲೆಗಳ ಮಕ್ಕಳಿಗೆ ಕೆಐಓಸಿಲ್ ಸಿಎಸ್
ಕಡಬ: ಹುಚ್ಚುನಾಯಿಯೊಂದು ಕಡಿದ ಪರಿಣಾಮ ವಿದ್ಯಾರ್ಥಿಯೋರ್ವ ಗಾಯಗೊಂಡ ಘಟನೆ ಕಡಬ ಪೇಟೆಯಲ್ಲಿ ನಡೆದಿದೆ. ಗಾಯಗೊಂಡ ಬಾಲಕನನ್ನು ಕಡಬ ನಿವಾಸಿ ಹಮೀದ್ ಎಂಬವರ ಪುತ್ರ ಅಫ್ನಾನ್ ಎಂದು ಗುರುತಿಸಲಾಗಿದೆ. ಎಂದಿನಂತೆ ಮದರಸ ಬಿಟ್ಟು ತೆರಳುತ್ತಿದ್ದ ಬಾಲಕನ ಮೇಲೆ ಹುಚ್ಚು ನಾಯಿ ಎರಗಿದ್ದು, ಕೈಗೆ ಕಚ್ಚಿದೆ ಎಂದು ತಿಳಿದುಬಂದಿದೆ. ಬಾಲಕನಿಗೆ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ವಿದ್ಯಾರ್ಥಿನಿಯೋರ್ವರು ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ನೆಲ್ಯಾಡಿ ಸಮೀಪದ ಕೊಣಾಲು ಗ್ರಾಮದ ಅಂಬರ್ಜೆ ಎಂಬಲ್ಲಿ ನ.15ರಂದು ಬೆಳಿಗ್ಗೆ ನಡೆದಿದೆ. ಅಂಬರ್ಜೆ ನಿವಾಸಿ ಮೋಹನ ಹಾಗೂ ವಿನೋದ ದಂಪತಿಯ ಪುತ್ರಿ, ರಾಮಕುಂಜೇಶ್ವರ ಪ.ಪೂ.ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಶ್ರೇಯಾ(18ವ.)ಮೃತಪಟ್ಟ ದುರ್ದೈವಿ ವಿದ್ಯಾರ್ಥಿನಿಯಾಗಿದ್ದಾರೆ. ಈಕೆ ಬೆಳಿಗ್ಗೆ ತಮ್ಮ ಮನೆ ಸಮೀಪದ ಕೆರೆಗೆ ತಾವರೆ ಹೂವಿನ ಗಿಡ ಹಾಕಲೆಂದು ಹೋಗಿದ್ದ ವೇಳೆ ಆಕಸ್ಮಿಕವಾಗಿ
ಕಡಬ: ರೈಲು ಹಳಿಯಲ್ಲಿ ಬಿರುಕು ಬಿಟ್ಟ ಘಟನೆ ನಡೆದಿದ್ದು ರೈಲು ಚಾಲಕನ ಸಮಯಪ್ರಜ್ಞೆಯಿಂದ ಬಾರೀ ಅವಘಡ ತಪ್ಪಿದ ಘಟನೆ ಸುಬ್ರಹ್ಮಣ್ಯ-ಮಂಗಳೂರು ರೈಲ್ವೇ ರಸ್ತೆಯ ಎಡಮಂಗಳ ಸಮೀಪ ಸಂಭವಿಸಿದೆ. ಮುಂಜಾನೆ ಸಂಚರಿಸುವ ಬೆಂಗಳೂರು- ಕಾರವಾರ ರೈಲು ನೆಟ್ಟಣ ದಿಂದ ಮುಂದಕ್ಕೆ ಎಡಮಂಗಲ ಸಮೀಪ ತಲುಪಿದ ವೇಳೆಯಲ್ಲಿ, ರೈಲ್ವೆ ಹಳಿಯಲ್ಲಿ ಬಿರುಕು ಬಿಟ್ಟಿದೆ. ರೈಲಿನ ಒಂದು ಬೋಗಿ ಚಲಿಸಿದ ವೇಳೆ ಸಮಸ್ಯೆಯು ಚಾಲಕನ ಗಮನಕ್ಕೆ ಬಂದಿದೆ. ಕೂಡಲೇ ಸಮಯಪ್ರಜ್ಞೆ ಮೆರೆದ ಚಾಲಕ ರೈಲನ್ನು
ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಅತೀ ವೇಗದಿಂದ ಬಂದ ಟೆಂಪೋವೊಂದು ದ್ವಿಚಕ್ರ ಸವಾರನಿಗೆ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ಸವಾರ ಸ್ಥಳದಲ್ಲೇ ಮೃತಪಟ್ಟು, ಸಹ ಸವಾರ ಗಾಯಗೊಂಡ ಘಟನೆ ಗೋಳಿತೊಟ್ಟು ಸಮೀಪದ ಸಣ್ಣಂಪಾಡಿ ಎಂಬಲ್ಲಿ ನಡೆದಿದೆ. ಮಂಗಳೂರಿನ ಕುಂಟಲ್ಪಾಡಿಪದವು ನಿವಾಸಿ ಸಚಿನ್ (29) ಮೃತ ದ್ವಿಚಕ್ರ ಸವಾರ. ಈತನೊಂದಿಗೆ ಪ್ರಯಾಣಿಸುತ್ತಿದ್ದ ಬೆಳ್ತಂಗಡಿಯ ಅಂಕೀತ್ ಗಾಯಗೊಂಡಿದ್ದು, ಈತನನ್ನು ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಹಳೆನೂಜಿ ಎಂಬಲ್ಲಿ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಹಾನಿ ಉಂಟಾದ ಘಟನೆ ಸಂಭವಿಸಿದೆ. ಹಳೆನೂಜಿ ಬಾಬು ಗೌಡರ ಮಗ ಹೊನ್ನಪ್ಪ ಗೌಡ ಎಂಬವರು ವಾಸ್ತವ್ಯವಿದ್ದ ಮನೆಗೆ ಆಕಸ್ಮಿಕವಾಗಿ ಬೆಂಕಿಬಿದ್ದಿದ್ದು, ಘಟನೆಯಲ್ಲಿ ಕೊಠಡಿಯ ಪೀಠೋಪಕರಣ, ವಸ್ತುಗಳು ಬೆಂಕಿ ತಗುಲಿ ಹಾನಿಗೊಳಗಾಗಿದೆ. ಕೊಠಡಿಯಲ್ಲಿದ್ದ ಮೂರು ಕ್ವೀಂಟಾಲ್ ಗೂ ಅಧಿಕ ರಬ್ಬರ್, ಒಂದು ಸಾವಿರ ತೆಂಗು, ಅಡಿಕೆ, ಕರಿ ಮೆಣಸು, ಪೈಪ್, ಇತರೆ ಸಾಮಾಗ್ರಿಗಳು