ಮಂಗಳೂರು : ಎರಡು ದಶಕ ಪೂರೈಸಿದ ಎ.ಜೆ. ಆಸ್ಪತ್ರೆ
ಎ.ಜೆ. ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರವು ಒಂದು ಅತ್ಯಾಧುನಿಕ, ಸುಸಜ್ಜಿತ ಆಸ್ಪತ್ರೆ. 2001ರಲ್ಲಿ ಪ್ರಾರಂಭಗೊಂಡ, 425 ಹಾಸಿಗೆಗಳುಳ್ಳ ಈ ಆಸ್ಪತ್ರೆಯನ್ನು ವಿಶ್ವ ದರ್ಜೆಯ ಆರೋಗ್ಯ ಸೇವೆ ನೀಡಲು ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ ವಿನ್ಯಾಸಗೊಳಿಸಲಾಗಿದೆ. ಮಂಗಳೂರಿನಲ್ಲಿ ಎನ್ಎಬಿಹೆಚ್ ಮಾನ್ಯತೆ ಪಡೆದ ಮೊದಲ ಆಸ್ಪತ್ರೆ. ಎ.ಜೆ. ಆಸ್ಪತ್ರೆಯು 30ಕ್ಕೂ ಹೆಚ್ಚು ಪ್ರಮುಖ ವೈದ್ಯಕೀಯ ವಿಭಾಗಗಳನ್ನು ಹೊಂದಿದ್ದು, ಉನ್ನತ ಮಟ್ಟದ ಆರೋಗ್ಯ ಸೇವೆಯನ್ನು ನೀಡಲು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ.
ಅತ್ಯಾಧುನಿಕ ಸೌಕರ್ಯಗಳು ಮತ್ತು ಸಲಕರಣೆಗಳನ್ನು ಹೊಂದಿರುವ ಎ.ಜೆ. ಆಸ್ಪತ್ರೆಯು ಅನುಭವಿ ವೈದ್ಯರ ತಂಡದ ನೇತೃತ್ವದಲ್ಲಿದೆ ಹಾಗೂ ನುರಿತ ಪ್ರೊಪೇಶನಲ್ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಸಿಬ್ಬಂದಿಯಿಂದ ಬೆಂಬಲಿತವಾಗಿದೆ. ಆಸ್ಪತ್ರೆಯು ಅತ್ಯಾಧುನಿಕ ಉಪಕರಣಗಳನ್ನು ಹೊಂದಿದೆ. ಗುಣಮಟ್ಟದ ಆರೋಗ್ಯ ಸೇವೆಯನ್ನು ಕೈಗೆಟಕುವ ಬೆಲೆಯಲ್ಲಿ ನೀಡುತ್ತಿದೆ. ಆಸ್ಪತ್ರೆಯು ಹೃದ್ರೋಗ, ಯುರೋಲಜಿ, ಕಾಸ್ಮೆಟಿಕ್, ಪುನನಿರ್ಮಾಣ ಮತ್ತು ಮೈಕ್ರೋವ್ಯಾಸ್ಕ್ಯಲರ್ ಸರ್ಜರಿಗಳಲ್ಲಿ ಪ್ರಭಾವಶಾಲಿ ದಾಖಲೆಗಳನ್ನು ಸ್ಥಾಪಿಸಿದೆ.
4ನೇ ತಲೆಮಾರಿನ ವಿನ್ಸಿ ಸಿಸ್ಟಮ್ಸ್ ಸಂಸ್ಥೆಯ ರೋಬೋಟ್ ಎನ್ನು ಎಜೆ ಆಸ್ಪತ್ರೆಯಲ್ಲಿ ಅಳವಡಿಸಲಾಗಿದ್ದು, ದೇಶದಲ್ಲಿಯೇ ಈ ಸೌಲಭ್ಯವನ್ನು ಹೊಂದಿರುವ 4ನೇ ಆಸ್ಪತ್ರೆಯಾಗಿದೆ. ರೋಬೋಟ್ ಶಸ್ತ್ರಚಿಕಿತ್ಸೆಯು ರೋಗಿ ಮತ್ತು ವೈದ್ಯರಿಬ್ಬರಿಗೂ ಲಾಭದಾಯಕ.
ಎಜೆ ಆಸ್ಪತ್ರೆಯು ಎಲ್ಲಾ ಸೂಪರ್ ಸ್ಪೆಶಾಲಿಟಿ ವಿಭಾಗಗಳಾದ ಹ್ರದಯರೋಗ, ಹೃದಯ ಶಸ್ತ್ರಚಿಕಿತ್ಸೆ, ಎಂಡೊಕ್ರೈನೊಲಜಿ, ಎಮೆರ್ಜೆನ್ಸಿ ಮೆಡಿಸಿನ್, ಗ್ಯಾಸ್ಟ್ರೋಎಂಟರೋಲಜಿ, ಹೆಮಟೊ ಒಂಕಾಲಜಿ, ಇಂಟರ್ವೆನ್ಶನಲ್ ರೆಡಿಯೋಲಜಿ, ಮೆಡಿಕಲ್ ಒಂಕಾಲೊಜಿ, ನೆಪ್ರೋಲಜಿ, ನ್ಯೂರೋಲಜಿ, ನ್ಯೂರೋಸರ್ಜರಿ, ನ್ಯುಕ್ಲಿಯರ್ ಮೆಡಿಸನ್, ಪೆಯಿನ್ & ಪಲ್ಲಿಯೆಟಿವ್ ಮೆಡಿಸನ್, ಮಕ್ಕಳ ಹೃದಯರೋಗ, ಮಕ್ಕಳ ಹೃದಯ ಶಸ್ತ್ರಚಿಕಿತ್ಸೆ, ಪ್ಲಾಸ್ಟಿಕ್ ಮತ್ತು ಮೈಕ್ರೋವ್ಯಾಸ್ಕ್ಯುಲರ್ ಶಸ್ತ್ರಚಿಕಿತ್ಸೆ, ರೇಡಿಯೇಶನ್ ಅಂಕೋಲಜಿ, ಸರ್ಜಿಕಲ್ ಒಂಕೋಲಜಿ, ಸರ್ಜಿಕಲ್ ಗ್ಯಾಸ್ಟ್ರೋ ಎಂಟರೊಲಜಿ ಸರ್ಜರಿ, ಲಿವರ್ ಟ್ರಾನ್ಸ್ ಪ್ಲಾಂಟ್, ಯುರೋಲಜಿ, ಕಿಡ್ನಿ ಕಸಿ ಮತ್ತು ಸಾಮಾನ್ಯ ಸ್ಪೆಶಾಲಿಟಿಗಳಲ್ಲಿ ಚಿಕಿತ್ಸೆಯನ್ನು ಪೂರೈಸುತ್ತದೆ.
ಎ.ಜೆ. ಆಸ್ಪತ್ರೆಯು ತನ್ನ ವಿಶಾಲವಾದ ಕ್ಯಾಂಪಸ್ನಲ್ಲಿರುವ ವಿಶ್ವದರ್ಜೆಯ ಸೌಲಭ್ಯಗಳು ಮತ್ತು ಸಮರ್ಪಿತ ಸಿಬ್ಬಂದಿಯೊಂದಿಗೆ, ರೋಗಿಗಳ ಸೇವೆಗೆ ಆದ್ಯತೆಯನ್ನು ನೀಡುವ ಮೂಲಕ ಅತ್ಯುತ್ತಮ ಚಿಕಿತ್ಸೆಯನ್ನು ಒದಗಿಸುತ್ತಿದೆ.