ಮಂಗಳೂರು ಶ್ರೀನಿವಾಸ್ ವಿವಿಯಲ್ಲಿ ವರ್ಚುವಲ್ ಸಮ್ಮೇಳನ
ಮಂಗಳೂರು: ಶ್ರೀನಿವಾಸ್ ವಿಶ್ವವಿದ್ಯಾಲಯದ ಕಾಲೇಜ್ ಆಫ್ ಸೋಶಿಯಲ್ ಸೈನ್ಸ್ ಆಂಡ್ ಹ್ಯೂಮಾನಿಟಿಸ್ ಇದರ ವಿಜ್ಞಾನ, ಸಾಮಾಜಿಕ ವಿಜ್ಞಾನ, ನಿರ್ವಹಣೆ, ಮಾಹಿತಿ ವಿಜ್ಞಾನ, ಕಾನೂನು ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ‘ಸುಧಾರಣೆ, ಪ್ರದರ್ಶನ ಮತ್ತು ಪರಿವರ್ತನೆ: ಸವಾಲುಗಳು ಮತ್ತು ಅವಕಾಶಗಳು’ ಎಂಬ ವಿಷಯದ ಕುರಿತು ಆನ್ಲೈನ್ ವೇದಿಕೆಯ ಮೂಲಕ ವರ್ಚುವಲ್ ಸಮ್ಮೇಳನ ನಡೆಯಿತು.
ಮುಖ್ಯ ಅತಿಥಿಯಾಗಿ ಮಾತನಾಡಿದ ಶೆರಾಟನ್ ಗ್ರ್ಯಾಂಡ್ ಬೆಂಗಳೂರು- ಮ್ಯಾರಿಯಟ್ ಇಂಟರ್ನ್ಯಾಷನಲ್ ನ ಮಾನವ ಸಂಪನ್ಮೂಲ ನಿರ್ದೇಶಕ ಪ್ರದೀಪ್ ಘೋರ್ಪಡೆ ರವರು ಮಾತನಾಡಿ ಕೋವಿಡ್ ನಂತಹ ಸಂದರ್ಭದಲ್ಲಿ ವ್ಯಾಪಾರ – ವ್ಯವಹಾರ ಸುಧಾರಣೆಗಳಿಂದ ಉಂಟಾಗುವ ಆರ್ಥಿಕ ಕುಸಿತಕ್ಕೆ ಪ್ರತಿಕ್ರಿಯೆಯಾಗಿ ಗ್ರಾಹಕರ ಅನುಭವ ಮತ್ತು ಸೇವೆಯನ್ನು ಹೆಚ್ಚಿಸುವುದರ ಜೊತೆಗೆ ಅದರ ಕಾರ್ಯಕ್ಷಮತೆಯನ್ನು ವೇಗಗೊಳಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀನಿವಾಸ್ ವಿಶ್ವವಿದ್ಯಾಲಯ ಕುಲಪತಿ ಡಾ. ಪಿ ಎಸ್ ಐತಾಳ್ ಮಾತನಾಡಿ ಪ್ರಕ್ರಿಯೆಗಳು ಮತ್ತು ಅಸ್ಥಿರ ಬದಲಾವಣೆಯೊಂದಿಗೆ ಕಾರ್ಯನಿರ್ವಹಿಸುವ ತಂತ್ರಗಳನ್ನು ಬಳಸಬಹುದು ಎಂದರು.
ಮುಲ್ಕಿಯ ಪೌಲಿನ್ ಹೋಮ್ ಕೌನ್ಸೆಲಿಂಗ್ ಸೆಂಟರ್ನ ನಿರ್ದೇಶಕಿ ಡಾ. ಸಿಸ್ಟರ್ ಸೆವೆರಿನ್ ಮೆನೆಜೆಸ್ ಮತ್ತು ಡೆಹ್ರಾಡೂನ್ನ ಗ್ರಾಫಿಕ್ ಎರಾ ಹಿಲ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಲಾ ವಿಭಾಗದ ಮುಖ್ಯಸ್ಥ ಡಾ. ಬ್ರಿಜೇಂದ್ರ ಸಿಂಗ್ ಯಾದವ್ ಅವರು ಸಮ್ಮೇಳನ ವಿಷಯದ ಕುರಿತು ತಾಂತ್ರಿಕ ಅಧಿವೇಶನಗಳನ್ನು ನೀಡಿದರು.
ಸಮ್ಮೇಳನದಲ್ಲಿ ಸುಮಾರು 39 ಸಂಶೋಧನಾ ಲೇಖನಗಳನ್ನು ಶಿಕ್ಷಣ ತಜ್ಞರು ಹಾಗು ಸಂಶೋಧನಾ ವಿದ್ಯಾರ್ಥಿಗಳು ಮಂಡಿಸಿ ಚರ್ಚಿಸಿದರು.ಈ ಸಂದರ್ಭ ಸಮ್ಮೇಳನದ ಅಬ್ಟ್ರಾಕ್ಟ್ ಪುಸ್ತಿಕೆ, ಕಳೆದ ಸಮ್ಮೇಳನದ ಸಂಶೋದನಾ ಲೇಖನಗಳ ಪುಸ್ತಿಕೆ, ಪಿ. ಕೆ. ಪೌಲ್, ಪಿ. ಎಸ್. ಐತಾಳ್, ಸುಬ್ರಮಣ್ಯ ಭಟ್, ಕೃಷ್ಣ ಪ್ರಸಾದ್ ಕೆ,. ಯವರು ಬರೆದ ಇನ್ಫಾರ್ಮೇಶನ್ ಕಮ್ಯೂನಿಕೇಶನ್ ಆಂಡ್ ಕಂಪ್ಯೂಟೇಶನ್ ಟೆಕ್ನಾಲಜಿ ಪುಸ್ತಕ ಹಾಗೂ ಲವೀನ ಡಿ ಮೆಲ್ಲೋ ರವರ ಸೋಶಿಯಲ್ ವರ್ಕ್: ಹಿಸ್ಟರಿ ಆಂಡ್ ಫಿಲೋಸಫಿ ಎನ್ನುವ ಪುಸ್ತಕವನ್ನು ಬಿಡುಗೊಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಪಿ. ಕೆ. ಪೌಲ್ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಮ್ಮೇಳನದ ಸಂಯೋಜಕ ಸಹಾಯಕ ಪ್ರಾಧ್ಯಾಪಕ ಡಾ. ಪ್ರದೀಪ್ ಎಂ.ಡಿ., ಕಾಲೇಜ್ ಆಫ್ ಸೋಶಿಯಲ್ ಸೈನ್ಸ್ ಆಂಡ್ ಹ್ಯೂಮಾನಿಟಿಯ ಡೀನ್ ಡಾ. ಲವೀನ ಡಿ?ಮೆಲ್ಲೊ. ಸ್ನಾತಕೋತ್ತರ ಮನಃಶಾಸ್ತ್ರ ವಿಭಾಗದ ಸಂಯೋಜಕಿ ಡಾ. ವಿದ್ಯಾ ಎನ್., ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಪದವಿ ವಿಭಾಗದ ಸಂಯೋಜಕಿ ಅಶ್ವಿನಿ, ಸಂಶೋಧನಾ ವಿದ್ಯಾರ್ಥಿ ಗುರು ರಾಜ್ ಜಿ. ಗೌಡ, ಕಾಲೇಜಿನ ಎಂಎಸ್ಡಬ್ಲ್ಯೂ, ಎಂಎಸ್ಸಿ ಸೈಕಾಲಜಿ, ಬಿಎ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.