ಮಂಗಳೂರು ಸ್ಮಾರ್ಟ್‍ಸಿಟಿ ಕಾಮಗಾರಿ : ಡೊಂಗರಕೇರಿ ಕಟ್ಟೆಯ ಬಳಿ ಪುರಾತನ ಬಾವಿ ಪತ್ತೆ

ಮಂಗಳೂರು ನಗರದಾದ್ಯಂತ ಸ್ಮಾರ್ಟ್‍ಸಿಟಿ ಕಾಮಗಾರಿ ನಡೆಯುತ್ತಿದ್ದು ನಗರದ ಡೊಂಗರಕೇರಿ ಕಟ್ಟೆಯ ಬಳಿ ಕಾಮಗಾರಿಯನ್ನು ನಡೆಸುತ್ತಿರುವ ಸಂದರ್ಭ ಪುರಾತನ ಬಾವಿಯೊಂದು ಪತ್ತೆಯಾಗಿದೆ. ನಗರದ ಅಲ್ಲಿಲ್ಲಿ ಕಾಮಗಾರಿ ವೇಳೆ ಬಾವಿ ಪತ್ತೆಯಾಗುತ್ತಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ನಗರದ ಡೊಂಗರಕೇರಿ ಕಟ್ಟೆಯ ಬಳಿ ಸ್ಮಾರ್ಟ್‍ಸಿಟಿ ಯೋಜನೆಯಲ್ಲಿ ರಸ್ತೆ ಫುಟ್‍ಬಾತ್ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿ ವೇಳೆ ಪುರಾತನ ಬಾವಿ ಪತ್ತೆಯಾಗಿದ್ದು, ತಕ್ಷಣ ಮಹಾನಗರ ಪಾಲಿಕೆ ಅಧಿಕಾರಿಗಳು ಬೇಟಿ ನೀಡಿ ಪರಿಶೀಲಿಸಿದ್ದಾರೆ. ಬಾವಿಯು ನೀರು ತುಂಬಿದ್ದು ಸುಮಾರು 50 ಅಡಿ ಆಳವಿದೆ ಅಲ್ಲದೇ ಬಾವಿಯನ್ನು ಕೆಂಪು ಕಲ್ಲಿನಲ್ಲಿ ಕಟ್ಟಲಾಗಿತ್ತು ಕಲ್ಲಿನಲ್ಲಿ ವಿನ್ಯಾಸವನ್ನು ಕೆತ್ತಲಾಗಿದೆ. ಸದ್ಯ ಮುಂಜಾಗರುಕ ಕ್ರಮವಾಗಿ ಬಾವಿಯನ್ನು ಮುಚ್ಚಲಾಗಿದೆ.

ಈ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ ವಿ4 ನ್ಯೂಸ್‍ಗೆ ಪ್ರತಿಕ್ರೀಯೆ ನೀಡಿ ಮಂಗಳೂರು ನಗರದಲ್ಲಿ ಇಂತಹಾ ಅನೇಕ ಪುರಾತನ ಬಾವಿಗಳು ಸಿಗುತ್ತಿರುವದು ಕಂಡು ಬರುತ್ತಿದೆ. ಇದನ್ನೆಲ್ಲ ಸಂರಕ್ಷಸಿಸುವುದು ನಮ್ಮ ಕರ್ತವ್ಯ ಡೊಂಗರಕೇರಿಯಲ್ಲಿ ಪತ್ತೆಯಾಗಿರುವ ಬಾವಿ ಸುಂದರವಾಗಿದೆ ಮತ್ತು ನೀರು ಕುಡಿಯಲು ಯೋಗ್ಯವಾಗಿದೆಯಾ ಎಂದು ಪರೀಕ್ಷಿಸಿ ಸಂರಕ್ಷಿಸುತ್ತೇವೆ ಎಂದು ಹೇಳಿದರು.

ಇನ್ನೂ ನಗರದಲ್ಲಿ ಅನೇಕ ಪುರಾತನ ಬಾವಿಗಳು ಪತ್ತೆಯಾಗುತ್ತಿರುವುದು ಸಾರ್ವಜನಿಕರಲ್ಲಿ ಕುತೂಹಲ ಸೃಷ್ಠಿಸಿದೆ ಮತ್ತು ಇಂತಹಾ ಪುರಾತನ ಬಾವಿಗಳನ್ನು ರಕ್ಷಿಸುವುದು ಮಂಗಳೂರು ಮಹಾ ನಗರ ಪಾಲಿಕೆಯ ಕರ್ತವ್ಯ ಕೂಡ ಹೌದು ಇಂತಹಾ ಪುರಾತನ ಬಾವಿಗಳ ಸಂರಕ್ಷಣೆ ಆಗಲಿ ಎನ್ನುವುದೇ ನಮ್ಮ ಕೋರಿಕೆ…………….

Related Posts

Leave a Reply

Your email address will not be published.