ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರಕ್ಕೆ ಹೊಸ ಪ್ಲಾನ್
ಕೊರೋನಾದ ಚೈನ್ ಬ್ರೇಕ್ ಮಾಡುವ ನಿಟ್ಟಿನಿಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಅತ್ಯಂತ ಮುಖ್ಯವಾದುದು, ಆದರೆ ನಮ್ಮ ಮಾರುಕಟ್ಟೆ , ಸಾರ್ವಜನಿಕ ಪ್ರದೇಶಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡುವುದೇ ಬಾರೀ ದೊಡ್ಡ ಸಮಸ್ಯೆಯಾಗಿದೆ. ಇಂತಹ ಸಂದರ್ಭದಲ್ಲಿ ಯುನಿವರ್ಸಲ್ ಪ್ರಾಪರ್ಟೀಸ್ ಐಲಾಂಡ್ ಮಂಗಳೂರಿನ ಮ್ಯಾನೆಜಿಂಗ್ ಪಾರ್ಟ್ನರ್ ಆಗಿರುವ ಗಿರ್ಲ್ಬಟ್ ಡಿಸೋಜ ಅವರು ಒಂದು ಹೊಸ ಪ್ಲಾನ್ ಒಂದನ್ನು ರೂಪಿಸಿದ್ದಾರೆ.
ಜನರ ಮೊಬೈಲ್ ಫೋನ್ ಸಂಖ್ಯೆಯ ಕೊನೆಯ ಒಂದು ಸಂಖ್ಯೆಯ ಪ್ರಕಾರ ಅವರಿಗೆ ಪ್ರತ್ಯೇಕವಾಗಿ ನಿಗದಿಪಡಿಸಿದ ನಿರ್ದಿಷ್ಟ ಸಮಯದಲ್ಲಿ ಶಾಪಿಂಗ್ ಮಾಡಲು ಅವಕಾಶ ಕಲ್ಪಿಸಬೇಕು.
ಈ ವಿಧಾನವನ್ನು ಜಾರಿಗೆ ತಂದರೆ ಯಾವುದೇ ಸಮಯದಲ್ಲಿ ಹೊರಬರಲು ಅನುಮತಿಸಲಾದ ಜನರ ಸಂಖ್ಯೆ ಶೇಕಡ 10 ಮಾತ್ರ ಆಗಿರುತ್ತದೆ. ಈ ರೀತಿ ಅನುಷ್ಠಾನದಿಂದ ಎಲ್ಲಾ ಜನರು ಒಂದೇ ದಿನದಲ್ಲಿ , ಒಂದೇ ಅವಧಿಯಲ್ಲಿ ಖರೀದಿಗೆ ಹೋಗುವುದಿಲ್ಲ . ಈ ಪ್ಲಾನ್ ಮೂಲಕ ಪ್ರತಿಯೊಬ್ಬರಿಗೂ ವಾರದ 6ದಿನಗಳಲ್ಲೂ ಮಾರುಕಟ್ಟೆಗೆ ಹೋಗಲು ಅವಕಾಶ ಸಿಗುತ್ತದೆ. 7 ನೇ ದಿನವಾದ ಆದಿತ್ಯವಾರ ಸಂರ್ಪೂಣವಾಗಿ ಲಾಕ್ಡೌನ್ ಮಾಡಬಹುದು ಅನ್ನುವುದು ಗಿಲ್ಬರ್ಟ್ ಡಿಸೋಜ ಅವರ ಸಲಹೆಯಾಗಿದೆ.
ಗಿಲ್ಬರ್ಟ್ ಡಿಸೋಜ ಅವರ ಈ ಪ್ಲಾನ್ ಪ್ರಕಾರ ದಿನದ ಬೆಳಿಗ್ಗೆ 8 ರಿಂದ ಸಂಜೆ 6 ಗಂಟೆ ತನಕ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಬೇಕು. ಮಾರುಕಟ್ಟೆ ಓಪನ್ ಇರಿಸಲು ಒಟ್ಟು 10 ಗಂಟೆಗಳ ಅವಧಿಗೆ ಲಭಿಸುತ್ತದೆ. ಈ ಅವಧಿಯನ್ನು ಒಂದೊಂದು ತಾಸಿನಂತೆ ವಿಭಾಗಿಸಬೇಕು. ಒಂದರಿಂದ 10 ರ ತನಕ ಕೊನೆಗೊಳ್ಳುವ ಸಂಖ್ಯೆಯವರಿಗೆ ಆಯಾ ಅವಧಿಯ ಒಂದು ತಾಸಿನಲ್ಲಿ ಪ್ರತಿ ದಿನವೂ ಮಾರುಕಟ್ಟೆಗೆ ಹೋಗಲು ಅವಕಾಶ ಕಲ್ಪಿಸಬೇಕು . ಈ ಪ್ಲಾನ್ ಜಾರಿ ಮಾಡಿದರೆ ಮಾರುಕಟ್ಟೆಯಲ್ಲಿ ದಿನದ ಯಾವುದೇ ಹೊತ್ತಲ್ಲೂ ಜನ ಜಂಗುಳಿ ಇರುವುದಿಲ್ಲ ಎಂದು ಗಿಲ್ಬರ್ಟ್ ಡಿಸೋಜ ಅವರು ಹೇಳುತ್ತಾರೆ.