ಮಾವಿನ ಎಲೆ 290..! 64% ಡಿಸ್ಕೌಂಟ್ ಆಗಿ 109..!
ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಮಾವಿನಹಣ್ಣಿಗೆ ಬೇಡಿಕೆ ಇರುತ್ತದೆ. ಆದರೆ ಈಗ ಕಾಲ ಬದಲಾಗಿ ಮಾವಿನ ಎಲೆಗೂ ಕೂಡ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ. ಇದು ಆಚ್ಚರಿಯ ಸಂಗತಿಯಾದರೂ ನಂಬಲೇಬೇಕು
ಹೌದು ಕಾಲಕ್ಕೆ ತಕ್ಕಂತೆ ಕೋಲ.! ಈಗ ಬದಲಾಗಿದೆ ಆನ್ಲೈನ್ ಶಾಪಿಂಗ್ ಆ್ಯಪ್ ಒಂದಾದ ಅಮೇಜಾನ್ನಲ್ಲಿ 21 ಮಾವಿನ ಎಲೆಗೆ 290 ರೂಪಾಯಿಯಾಗಿದ್ದು 64% ಡಿಸ್ಕೌಂಟ್ ಆಗಿ 109 ರೂಪಾಯಿಯಾಗಿದೆ. ಮೊನ್ನೆ ಹಲಸಿನ ಬೀಜಕ್ಕೆ ಇಂದು ಮಾವಿನ ಎಲೆಗೆ ಡಿಮ್ಯಾಂಡ್ ಹೆಚ್ಚಾಗಿದ್ದು. ಸದ್ಯ ಈ ಸುದ್ದಿ ಸಾರ್ವಜನಿಕ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಇತ್ತೀಚೆಗೆ ನಮ್ಮ ಹಿತ್ತಲಿನಲ್ಲಿರುವ ವಸ್ತುಗಳಿಗೆ ಭಾರಿ ಡಿಮ್ಯಾಂಡ್ ಆಗಿದೆ.