ಮೀನುಗಾರಿಕೆ ದೋಣಿ ಮಗುಚಿ ದುರುಂತ

ಬೈಂದೂರು ಉಪ್ಪುಂದದ ತಾರಾಪತಿಯಲ್ಲಿ ಜೈಗುರೂಜಿ ಹೆಸರಿನ ದೋಣಿಯಲ್ಲಿ ಆರು ಜನರು ಮೀನುಗಾರಿಕೆ ತೆರಳಿದ್ದು, ಮೀನುಗಾರಿಕೆ ಮುಗಿಸಿ ಹಿಂತಿರುಗಿ ಬರುವ ವೇಳೆ ರಭಸದಿಂದ ಹೊಡೆದ ತೆರೆಗೆ ದೋಣಿ ಮಗುಚಿ ಬಿದ್ದ ಪರಿಣಾಮವಾಗಿ ಆರು ಜನರಲ್ಲಿ ನಾಲ್ವರನ್ನು ಕಾಪಾಡುವಲ್ಲಿ ಯಶಸ್ವಿಯಾಗಿ, ಉಳಿದಿಬ್ಬರು ಚರಣ್ ಹಾಗೂ ಗೊಂಡಯ್ಯ
ಅಣ್ಣಪ್ಪ ಎಂಬುವರು ನಾಪತ್ತೆಯಾಗಿದ್ದರು. ನಾಪತ್ತೆಯಾಗಿದ್ದ ಚರಣ್ ಮತ್ತು ಅಣ್ಣಪ್ಪ ಎಂಬುವರಲ್ಲಿ ಚರಣ್ ಮೃತ ದೇಹ ಅಮ್ಮನವರ ತೊಪ್ಲು ಎಂಬಲ್ಲಿ ಶನಿವಾರದಂದು ಪತ್ತೆಯಾಗಿದೆ.ಗೊಂಡಯ್ಯಅಣ್ಣಪ್ಪನವರ ಮೃತ ದೇಹ ಪತ್ತೆ ಹಚ್ಚುವಲ್ಲಿ ಕರಾವಳಿ ಕಾವಲು ಪಡೆ ಸಿಬ್ಬಂದಿಗಳು ಹಾಗೂ ಮುಳುಗು ತಜ್ಞರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಬೈಂದೂರು ತಾಲೂಕು ತಹಶೀಲ್ದಾರ್ ಶೋಭಾಲಕ್ಷ್ಮಿ, ಡಿವೈಎಸ್ಪಿ ಶ್ರೀ ಕಾಂತ್, ಬೈಂದೂರು ವೃತ್ತನಿರೀಕ್ಷಕರು, ಠಾಣಾಧಿಕಾರಿ ಪವನ್ ಕುಮಾರ್, ಕರಾವಳಿ ಕಾವಲು ಪಡೆ ಎಸ್.ಐ, ಬೈಂದೂರು ಠಾಣಾ ಎಎಸ್‍ಐ ಮಹಾಬಲ ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Related Posts

Leave a Reply

Your email address will not be published.