ಮುಜರಾಯಿ ಇಲಾಖೆಯ ಸಿ ಗ್ರೇಡ್ ದೇವಸ್ಥಾನಗಳ ಅರ್ಚಕರು, ಸಿಬ್ಬಂದಿಗೆ ಆಹಾರ ಸಾಮಾಗ್ರಿ ಕಿಟ್ ವಿತರಣೆ

ಬಂಟ್ವಾಳ: ಮುಜರಾಯಿ ಇಲಾಖೆಯ ಸಿ ಗ್ರೇಡ್ ದೇವಸ್ಥಾನಗಳ ಅರ್ಚಕರು, ಸಿಬ್ಬಂದಿಗೆ ಆಹಾರ ಸಾಮಾಗ್ರಿ ಕಿಟ್ ವಿತರಿಸಲಾಗಿದ್ದು, ಇಲಾಖೆ ವ್ಯಾಪ್ತಿಗೆ ಬರದೆ ಸಂಕಷ್ಟದಲ್ಲಿರುವ ಕ್ಷೇತ್ರಗಳ ಸಿಬ್ಬಂದಿಗೂ ಕಿಟ್ ಕೊಡುವುದಕ್ಕೆ ಚಿಂತನೆ ನಡೆಸಲಾಗುವುದು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಹೇಳಿದರು. 

ಮುಜರಾಯಿ ಇಲಾಖೆಯ ಎ ಗ್ರೇಡ್ ಕ್ಷೇತ್ರವಾದ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಿಂದ ತಾಲೂಕಿನ 26 ದೇವಸ್ಥಾನಗಳ ಅರ್ಚಕರು ಹಾಗೂ ಸಿಬ್ಬಂದಿಗಳಿಗೆ ಆಹಾರ ಸಾಮಾಗ್ರಿಕಿಟ್ ಗಳನ್ನು ವಿತರಿಸಿ ಮಾತನಾಡಿದರು. ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ಸಾಕಷ್ಟು ಕ್ಷೇತ್ರಗಳ ಅರ್ಚಕರು, ಸಿಬಂದಿಗೆ ನೆರವು ನೀಡಲಾಗಿದೆ. ದೈವ ನರ್ತಕರಿಗೂ ನೆರವಾಗುವ ಚಿಂತನೆ ನಡೆಸಲಾಗಿದ್ದು, ಈಗಾಗಲೇ ಸಾಕಷ್ಟು ನೇಮ ಸೇವೆಗಳು ನಡೆದಿದೆ. ನಡೆಯದೇ ಇರುವ ಕಡೆ ಸೇವೆ ನೀಡುವವರ ವೇತನ ನೀಡುವ ಕುರಿತು ಚಿಂತಿಸುವುದು ಅಗತ್ಯ ಎಂದರು.

ರಾಜ್ಯ ಧಾರ್ಮಿಕ ಧತ್ತಿ ಪರಿಷತ್ತ್ ನ ಸದಸ್ಯರಾದ ಕಶೆಕೋಡಿ ಸೂರ್ಯನಾರಾಯಣ ಭಟ್ ಮಾತನಾಡಿ, ಮುಜರಾಯಿ ಇಲಾಖೆಯ ಎ ಗ್ರೇಡ್ ದೇವಸ್ಥಾನ ಗಳಿಂದ ಸಿಗ್ರೇಡ್ ದೇವಸ್ಥಾನ, ದೈವಸ್ಥಾನ ಗಳ ಅರ್ಚಕರು, ಸಿಬ್ಬಂದಿಗಳಿಗೆ ಕಿಟ್ ವಿತರಿಸಿದಂತೆ ಆದ್ಯತೆಯ ನೆಲೆಯಲ್ಲಿ ಬಿ ಗ್ರೇಡ್ ದೇವಸ್ಥಾನಗಳಿಗೂ ವಿತರಿಸಲು ಚಿಂತನೆ ನಡೆಸಲಾಗಿದೆ ಎಂದರು.

ಜಿಲ್ಲಾ ಧಾರ್ಮಿಕ ಧತ್ತಿಪರಿಷತ್ ಸದಸ್ಯ ಪೆÇಳಲಿ ಗಿರಿಪ್ರಕಾಶ್ ತಂತ್ರಿ, ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಪಿ.ಜಯಮ್ಮ, ಪ್ರಮುಖರಾದ ವಿವೇಕ್ ಶೆಟ್ಟಿ ನಗ್ರಿಗುತ್ತು, ಜಯರಾಮ ಶೆಟ್ಟಿ, ಸಜಿಪ ಮಾಗಣೆ ತಂತ್ರಿ ಸುಬ್ರಹ್ಮಣ್ಯ ಭಟ್, ಸಜೀಪ ಮೂಡ ಗ್ರಾ.ಪಂ.ಅಧ್ಯಕ್ಷೆ ಹರಿಣಾಕ್ಷಿ , ಸದಸ್ಯರಾದ ಸುಂದರಿ ಪೂಜಾರಿ, ಪ್ರಶಾಂತ್ ಪೂಜಾರಿ, ಶೋಭಾ ಶೆಟ್ಟಿ, ದೇವಸ್ಥಾನದ ಪ್ರಧಾನ ಅರ್ಚಕ ವಾಸುದೇವ ಮೂಲ್ಯ, ಎರಡನೇ ಅರ್ಚಕ ನಾರಾಯಣ ಮೂಲ್ಯ, ಅರ್ಚಕ ಮೋನಪ್ಪ ಮೂಲ್ಯ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.