ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಿ ಆಗಸ್ಟ್ 6 ಮತ್ತು 7ರಂದು ನ್ಯಾನೋ ವಿಜ್ಞಾನ ಮತ್ತು ನ್ಯಾನೋ ತಂತ್ರಜ್ಞಾನ ವಿಷಯದ ಕುರಿತು ಅಂತರಾಷ್ಟ್ರೀಯ ಸಮ್ಮೇಳನ
ಶ್ರೀನಿವಾಸ್ ವಿಶ್ವವಿದ್ಯಾಲಯದ ಕಾಲೇಜ್ ಆಫ್ ಎಂಜಿನಿಯರಿಂಗ್‌ಆಂಡ್ ಟೆಕ್ನಾಲಜಿಯು ನ್ಯಾನೋ ವಿಜ್ಞಾನ ಮತ್ತು ನ್ಯಾನೋ ತಂತ್ರಜ್ಞಾನ ಎಂಬ ವಿಷಯದ ಕುರಿತು ಆಗಸ್ಟ್ 6 ಮತ್ತು 7ರಂದು ಅಂತರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿದೆ.ಸಿಂಗಾಪುರದನ್ಯಾಶನಲ್ ಯೂನಿವರ್ಸಿಟಿಯ ಫ್ರೆಂಗ್ ನಿರ್ದೇಶಕ ಡಾ ಸೀರಾಮ್ ರಾಮಕೃಷ್ಣ ಹಾಗೂ ಕೇರಳದ ಮಹಾತ್ಮಾಗಾಂಧಿ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಸಾಬು ಥಾಮಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.
ಶ್ರೀನಿವಾಸ್ ವಿವಿಯ ಕುಲಾಧಿಪತಿಡಾ ಸಿಎ ಎ ರಾಘವೇಂದ್ರ ರಾವ್ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿರುವರು. ಗೌರವಾಧ್ಯಕ್ಷತೆಯನ್ನು ಸಹ ಕುಲಾಧಿಪತಿಡಾ ಎ ಶ್ರೀನಿವಾಸ್ ರಾವ್ ವಹಿಸಲಿರುವರು.
ಕುಲಪತಿಡಾ ಪಿ ಎಸ್ ಐತಾಲ್, ಕಾಲೇಜಿನ ಡೀನ್ ಥಾಮಸ್‌ಪಿಂಟೋ ಮತ್ತು ಶ್ರೀನಿವಾಸ್ ವಿವಿಯ ಸಂಶೋಧನಾ ನಿರ್ಧೇಶಕಡಾ. ಪ್ರವೀಣ್ ಬಿ ಎಂ, ಕುಲಸಚಿವಡಾ ಅನಿಲ್ ಕುಮಾರ್, ಕುಲಸಚಿವ (ಅಭಿವೃದ್ಧಿ)ಡಾ ಅಜಯ್ ಕುಮಾರ್, ಕುಲಸಚಿವ (ಮೌಲ್ಯಮಾಪನ)ಡಾ ಶ್ರೀನಿವಾಸ ಮಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.ಈ ಸಮ್ಮೇಳನದಲ್ಲಿ ಸಂಶೋಧನಾ ಬರಹಗಳನ್ನು ಮಂಡಿಸಲಾಗುತ್ತದೆ.ಅತ್ಯುತ್ತಮ ಸಂಶೋಧನಾ ಬರಹಪ್ರಶಸ್ತಿ, ಅತ್ಯುತ್ತಮ ಯುವ ವಿಜ್ಞಾನಿ ಪ್ರಶಸ್ತಿ ಮತ್ತು ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ಈ ಸಂದರ್ಭದಲ್ಲಿನೀಡಲಾಗುವುದು.
https://srinivas.webex.com/meet/sitmangaloreನ ಮೂಲಕ ಕಾರ್ಯಕ್ರಮಕ್ಕೆ ಭಾಗವಹಿಸಬಹುದು.