ಶ್ರೀ ಕ್ಷೇತ್ರ ಪೊಳಲಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ‘ಹಣತೆ ದೀಪ’
ಪೊಳಲಿ ಟೈಗರ್ಸ್ ಫ್ರೆಂಡ್ಸ್ ಮತ್ತು ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು ತಂಡದ ವತಿಯಿಂದ ಶ್ರೀ ಕ್ಷೇತ್ರ ಪೊಳಲಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ‘ಹಣತೆ ದೀಪ’ ಬೆಳಕಿನ ಹಬ್ಬಕ್ಕೆ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಪೊಳಲಿಯಲ್ಲಿ ದೇವಸ್ಥಾನದ ಆವರಣದಲ್ಲಿ ತುಪ್ಪ ದೀಪ ಅಲಂಕಾರ ಸೇವೆ ನೆರವೇರಿತು… ಈ ವಿಶೇಷ ಸೇವೆಯು ಕಳೆದ ಎರಡು ವರ್ಷಗಳಿಂದ ನಡೆದುಕೊಂಡು ಬಂದಿದ್ದು ಈ ಬಾರಿಯ ಸೇವಾಕಾರ್ಯಕ್ಕೆ ಅತಿಥಿಯಾಗಳು ಸೇರಿ ಚಾಲನೆ ನೀಡಿದರು. ಈ ವೇಳೆ ದೇವಸ್ಥಾನದ ಪ್ರಧಾನ ಅರ್ಚಕರಾದ ಅನಂಥ್ ಭಟ್, ಕಾಂತಪ್ಪ ಶೆಟ್ಟಿ, ಸಂತೋಷ್ ಪೊಳಲಿ, ವೆಂಕಟೇಶ್ ನಾವಡ, ಜನಾರ್ದನ ಶೆಟ್ಟಿ, ಜಗದೀಶ್ ಸಾನೂರ್, ಜಗದೀಶ್ ಪಂಪ್ವೆಲ್, ಪೊಳಲಿ ಪುರಲ್ದಪ್ಪೆನ ಮೋಕೆದ ಬೊಳ್ಳಿಲು ಟೈಗರ್ಸ್ ತಂಡದ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು