ಶ್ರೀ ಕ್ಷೇತ್ರ ಪೊಳಲಿ ಅವರಣದಲ್ಲಿ ಸಾರಿಗೆ ಸುರಕ್ಷಾ-ಐಸಿಯು ಬಸ್‌ಗೆ ಸಚಿವ ಕೋಟಾ ಚಾಲನೆ

ಬಂಟ್ವಾಳ: ಕೋವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಸಂಸ್ಥೆ ವಿನ್ಯಾಸಗೊಳಿಸಿಸದ ’ ಸಾರಿಗೆ ಸುರಕ್ಷಾ-ಐಸಿಯು ಬಸ್’ ಗೆ ಶ್ರೀಕ್ಷೇತ್ರ ಪೊಳಲಿ ಅವರಣದಲ್ಲಿ ಚಾಲನೆ ನೀಡಲಾಯಿತು. ದ.ಕ.ಜಿಲ್ಲಾ ಉಸ್ತಿವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರ ಉಪಸ್ಥಿತಿಯಲ್ಲಿ ಉದ್ಘಾಟಿಸಿದರು.


ದ.ಕ.ಜಿಲ್ಲೆಯಲ್ಲೆ ಮೊದಲಿಗೆ ಮಂಗಳೂರು ಮತ್ತು ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗ ವ್ಯಾಪ್ತಿಯ ಬಂಟ್ವಾಳ ಕ್ಷೇತ್ರಕ್ಕೆ ಬಂದಿರುವ ಏಕೈಕ ಬಸ್ ಇದಾಗಿದೆ. ಈ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತೆ ರೋಹಿಣಿ ಸಿಂಧೂರಿ,ದ.ಕ.ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ.ಕೆ , ಕೆ.ಎಸ್. ಆರ್‌ಟಿಸಿ ಪುತ್ತ ವಿಭಾಗ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ, ಬಿಸಿರೋಡು ಘಟಕ ವ್ಯವಸ್ಥಾಪಕ ಶ್ರೀಶ ಭಟ್, ಅಧಿಕಾರಿಗಳಾದ ರಮೇಶ್ ಶೆಟ್ಟಿ, ರವೀನಾ, ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ! ಮಂಜಯ್ಯ ಶೆಟ್ಟಿ, ಮೊಕ್ತೇಸರರಾದ ತಾರನಾಥ ಆಳ್ವ, ಸೂರ್ಯ ನಾರಾಯಣ ರಾವ್, ದೇವಸ್ಥಾನದ ಸಿಒ.ಜಯಮ್ಮ, ದೇವಳದ ಪ್ರಧಾನ ಅರ್ಚಕ ಮಾದವ ಭಟ್,
ಬೂಡ ಆದ್ಯಕ್ಷ ದೇವದಾಸ್ ಶೆಟ್ಟಿ, ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಮುಖರಾದ ಸುಲೋಚನ ಭಟ್, ಡೊಂಬಯ್ಯ ಅರಳ, ರವೀಶ್ ಶೆಟ್ಟಿ ಕರ್ಕಳ, ರಮನಾಥ ರಾಯಿ, ಪುರುಷೋತ್ತಮ ಶೆಟ್ಟಿ, ಪ್ರಕಾಶ್ ಅಂಚನ್, ಯಶವಂತ ನಾಯ್ಕ್ ನಗ್ರಿ, ಗಣೇಶ್ ರೈ, ಮಹೇಶ್ ಶೆಟ್ಟಿ, ಕೇಶವ ದೈಪಲ,ವೆಂಕಟೇಶ್ ನಾವಡ, ಕಿಶೋರ್ ಪಲ್ಲಿಪಾಡಿ, ಚಂದ್ರಾವತಿ, ಸುಕೇಶ್ ಚೌಟ, ಲೋಕೇಶ್ ಭರಣಿ , ಸಂಪತ್ ಕುಮಾರ್ ಶೆಟ್ಟಿ, ನಂದಕುಮಾರ್ ರೈ, ವಾಮನ ಆಚಾರ್ಯ, ಕಾರ್ತಿಕ್ ಬಲ್ಲಾಳ್, ರಾಧಕೃಷ್ಣ ತಂತ್ರಿ, ಮತ್ತಿತರರು ಉಪಸ್ಥಿತರಿದ್ದರು.

ಬಸ್ಸಿನೊಳಗೆ ಏನೇನಿದೆ :

ಸಾರಿಗೆ ಸುರಕ್ಷಾ-ಐಸಿಯು ಬಸ್ ನೊಳಗೆ ಏನೇನಿದೆ ಎಂಬುದನ್ನು ನೋಡುವುದಾದರೆ ಆಂಬ್ಯುಲೆನ್ಸ್ ರೀತಿಯಲ್ಲೇ ಬಸ್ಸಿಗೆ ಸೈರನ್ ಅಳವಡಿಸಲಾಗಿದ್ದು, ಒಳಗೆ ಮಿನಿ ಕ್ಲಿನಿಕ್ ಮಾದರಿಯಲ್ಲಿ ಐದು ಬೆಡ್, ಪ್ರತಿ ಬೆಡ್ ಗೂ ಆಕ್ಸಿಜನ್ ವ್ಯವಸ್ಥೆ, ರೋಗಿಗಳ ರಕ್ತದೊತ್ತಡ, ಆಕ್ಸಿಜನ್ ಪ್ರಮಾಣ, ಇಸಿಜಿ, ತಾಪಮಾನ ಪರೀಕ್ಷೆಗೆ ಮಾನಿಟರ್ ವ್ಯವಸ್ಥೆ ಇದೆ. ವೆಂಟಿಲೇಟರ್ ಅಳವಡಿಸುವ ಸೌಲಭ್ಯ, ತುರ್ತು ಔಷಧಿ ಸಹಿತ ಜನರೇಟರ್ ವ್ಯವಸ್ಥೆಯೂ ಇದೆ. ನೋಟಿಸ್ ಬೋರ್ಡ್, ವಿಶೇಷ ಬರಹಗಳು ಕೂಡ ಇದೆ. ಪ್ರತಿ ಎರಡು ತಿಂಗಳಿಗೊಮ್ಮೆ ಗ್ರಾಮಗಳಿಗೆ ತೆರಳಿ ಸಂಚಾರಿ ಆಸ್ಪತ್ರೆ ರೀತಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಇದರಲ್ಲಿ ತಜ್ಞ ವೈದ್ಯರು ಮತ್ತು ಆರೋಗ್ಯ ಸಹಾಯಕರು ಇರುತ್ತಾರೆ.

 

Related Posts

Leave a Reply

Your email address will not be published.