ಸಾಮಾಜಿಕ ಜಾಲತಾಣದಲ್ಲಿ ಹಿಂದೂ ನಾಯಕರ ತೇಜೋವಧೆ : ಸೂಕ್ತ ಕ್ರಮ ಕೈ ಗೊಳ್ಳುವಂತೆ ಮನವಿ

ಕೋವಿಡ್ ಸಂದರ್ಭದಲ್ಲಿ ಬಜರಂಗಳ, ವಿಶ್ವ ಹಿಂದೂ ಪರಿಷತ್ ಸೇರಿದಂತೆ ಹಿಂದೂ ಸಂಘಟನೆಗಳು ಸೇವಾ ಭಾರತಿ ಅಶ್ರಯದಲ್ಲಿ ನಾನಾ ರೀತಿಯ ಸೇವಾ ಕಾರ್ಯಗಳಲ್ಲಿ ತೊಡಗಿವೆ. ಹೀಗಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಹಿಂದೂ ಸಂಘಟನೆಗಳ ನಾಯಕರ ತೇಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಇದು ಖಂಡನೀಯ ಎಂದು ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕರೂ, ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರೂ ಆದ ಮುರಳಿಕೃಷ್ಣ ಹಸಂತಡ್ಕ ಎಚ್ಚರಿಸಿದ್ದಾರೆ.

ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘಟನೆ ಮುಖಂಡ ಶರಣ್ ಪಂಪ್‍ವೆಲ್ ಸೇರಿದಂತೆ ಅನೇಕ ನಾಯಕರ ತೇಜೋವಧೆ ಮಾಡುವ, ಸೇವಾ ಕಾರ್ಯದಲ್ಲಿ ತೊಡಗಿರುವವರ ಕಾಲೆಳೆಯುವ, ಮಾನಸಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ. ಒಂದು ಘಟನೆಯಲ್ಲಿ ಪೊಲೀಸರು ವಿಚಾರಣೆ ಆರಂಭಿಸಿದ್ದು, ಕ್ರಮದ ಭರವಸೆ ಸಿಕ್ಕಿದೆ. ಇನ್ನೊಂದು ಕಡೆ ಫೇಸ್‍ಬುಕ್ ನಕಲಿ ಎಕೌಂಟ್ ಮಾಡಿಕೊಂಡು, ಗಣ್ಯರ ಖಾತೆ ಹ್ಯಾಕ್ ಮಾಡುವ, ಹಣಕ್ಕಾಗಿ ಬೇಡಿಕೆ ಇಡುವ ಕೆಲಸವೂ ನಡೆಯುತ್ತಿದೆ ಎಂದು ಹೇಳಿದರು.

ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡರಾದ ಡಾ. ಕೃಷ್ಣಪ್ರಸನ್ನ, ಬಜರಂಗದಳ ಮುಖಂಡರಾದ ಶ್ರೀಧರ ತೆಂಕಿಲ ಮತ್ತು ಜಿತೇಶ್ ಬಲ್ನಾಡ್ ಉಪಸ್ಥಿತರಿದ್ದರು.

 

 

 

Related Posts

Leave a Reply

Your email address will not be published.