ಸಿಎಯಲ್ಲಿ ಪ್ರಥಮ ರ್‍ಯಾಂಕ್ ವಿಜೇತೆ ರುತ್ ಡಿಸಿಲ್ವ ಗೆ ಸಾರ್ವಜನಿಕ ಅಭಿನಂದನೆ

 ಸಿಎ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ್‍ಯಾಂಕ್  ಪಡೆದ ಮಂಗಳೂರಿನ ರುತ್ ಕ್ಲೇರ್ ಡಿಸಿಲ್ವಾ ಅವರಿಗೆ V4 ಸ್ಟುಡಿಯೋದಲ್ಲಿ ನಡೆದ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲೆಯ ವಿವಿಧ ಸಂಘ ಸಂಸ್ಥೆಯ ವತಿಯಿಂದ ಸನ್ಮಾನ ನೀಡಿ ಗೌರವಿಸಲಾಯಿತು.

 


ಮಂಗಳೂರಿನ ಯೆಯ್ಯಾಡಿಯಲ್ಲಿರುವ ವಿ4 ನ್ಯೂಸ್ ಸ್ಟುಡಿಯೋದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಅಭಿನಂದನಾ ಸಮಾರಂಭದಲ್ಲಿ ಹಲವಾರು ಸಂಘ ಸಂಸ್ಥೆಗಳು, ರಾಜಕೀಯ ಮುಖಂಡರು  ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ರು. 

ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತರಾದ ಮೀರಾ ಪಂಡಿತ್ ಅವರು, ರುತ್ ಕ್ಲೇರ್ ಡಿಸಿಲ್ವಾ ಅವರನ್ನುಸನ್ಮಾನಿಸಿ ಅಭಿನಂದಿಸಿ ಮಾತನಾಡಿ, ಮುಂದಿನ ವೃತ್ತಿ ಜೀವನದ ಸಂದರ್ಭದಲ್ಲಿ ರುತ್ ಡಿಸಿಲ್ವ ಅವರು ಬದ್ಧತೆ ಹಾಗೂ ವೃತ್ತಿಪರ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತುಳು ಪರಿಷತ್ ವತಿಯಿಂದ ಗೌರವಾಧ್ಯಕ್ಷ ಸ್ವರ್ಣ ಸುಂದರ್ ಹಾಗೂ ಪ್ರದಾನ ಕಾರ್ಯದರ್ಶಿ ಬೆನೆಟ್ ಅಮ್ಮಣ್ಣ ಅವರು, ರುತ್ ಕ್ಲೇರ್ ಡಿಸಿಲ್ವಾ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ಹಾಗೂ ಪುಸ್ತಕ ನೀಡಿ ಸನ್ಮಾನಿಸಿದರು.

 

ದಕ್ಷಿಣ ಕನ್ನಡ ಜಿಲ್ಲಾ ಬಸ್ ಮಾಲಕರ ಸಂಘದ ವತಿಯಿಂದ ಅಧ್ಯಕ್ಷ ಜಯಶೀಲ ಅಡ್ಯಂತಾಯ ಅವರು ಸನ್ಮಾನಿಸಿದರು. ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ವತಯಿಂದ ಜಿಲ್ಲಾ ಅಧ್ಯಕ್ಷ ಶುಭೋದಯ ಆಳ್ವ ಹಾಗೂ ಯೋಗೀಶ್ ಅವರು ಗಾಂಧಿ ಟೋಪಿ ಹಾಗೂ ಖಾದಿ ನೂಲಿನ ಹಾರವನ್ನು ಅರ್ಪಿಸಿ ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ಮಂಗಳೂರಿನ ಲಯನ್ಸ್ ನೇತ್ರಾವತಿ, ಪುತ್ತೂರಿನ ಸತ್ಯ ಶಾಂತ ಪ್ರತಿಷ್ಠಾನದ ಅಧ್ಯಕ್ಷೆ ಶಾಂತ ಕುಂಟನಿ, ಡಾ.ಸೌರಭ, ಕಥಾ ಬಿಂದು ಪ್ರಕಾಶನದ ಪ್ರದೀಪ್ ಕುಮಾರ್, ಸರಸ್ವತಿ ಲಯನ್ಸ್, ನೇತ್ರಾವತಿ ಲಯನ್ಸ್ ಸಂಸ್ಥೆ ವತಿಯಿಂದ ವೀಣಾ, ಲೋಲಾಕ್ಷಿ, ಆಶಾ ಸುಶಾಂತ್, ಪೂರ್ಣೆಮ ರಾವ್, ಆಶಾ ನಾಗಾರಾಜ್, ಕುಸುಮ ದೇವಾಡಿಗ, ಸ್ಮಿತ, ರೀನಾ ಮೊದಲಾದವರು ಸನ್ಮಾನಿಸಿದರು. ಕರ್ನಾಟಕ ರಾಜ್ಯ ರೈತ ಸಂಘದ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮನಾಥ್ ಶೆಟ್ಟಿ ಬಾಳ್ತಿಲ, ಮುಖಂಡ ರಾಯ್ ಕಾರ್ಲೋ ಅವರು ಹಸಿರಿ ಶಾಲು ನೀಡಿ ಹಾಗೂ ಎತ್ತಿನ ಬಂಡಿಯ ಸ್ಮರಣಿಕೆ ನೀಡಿ ಸನ್ಮಾನಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ, ಅವರ ಪುತ್ರ ಪ್ರಜ್ವಲ್ ಅವರು ರುತ್ ಕ್ಲೇರ್ ಡಿಸಿಲ್ವಾ ಅವರನ್ನ ಶಾಲು ಹೊದಿಸಿ, ಫಲಪುಷ್ಪ ನೀಡಿ, ಗೌರವಿಸಿದ್ರು. ರಾಷ್ಟ್ರೀಯವಾದಿ ಕ್ರೈಸ್ತ ಸಂಘಟನೆ ವತಯಿಂದ ಫ್ರಾಂಕ್ಲಿನ್ ಮೊಂತೆರೋ, ನಟಿ ಸರೋಜ್‌ರಾವ್ ಅವರು ಸನ್ಮಾನಿಸಿದರು. ಸಾಮಾಜಿಕ ಕಾರ್ಯಕರ್ತೆ ಪ್ರೀತಿ ಕರ್ಕೇರಾ ಹಾಗೂ ಪುತ್ರ ಸಾರ್ಥಕ್ ಕುಮಾರ್, ಐಕ್ಯಂ ಸಂಸ್ಥೆಯ ವತಿಯಿಂದ ಸಂಸ್ಥೆಯ ಅಧ್ಯಕ್ಷೆ ಕಮಾಲಾಕ್ಷಿ ಸನ್ಮಾನಿಸಿದರು. ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ವತಿಯಿಂದ ಚಂದ್ರಕಲಾ ರಾವ್, ಶೆರಿಲ್ ಲೋನ ಹಾಗೂ ಮಹಿಳಾ ಸದಸ್ಯರು ಸನ್ಮಾನಿಸಿದರು. ಜಿಲ್ಲಾ ಬಿಜೆಪಿ ವತಿಯಿಂದ ಹಿರಿಯ ಬಿಜೆಪಿ ಮುಖಂಡ ಹಾಗೂ ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರ್ ಅವರು ರ್‍ಯಾಂಕ್ ವಿಜೇತೆಯನ್ನು ಸನ್ಮಾನಿಸಿ ಶುಭಕೋರಿ ಮಾತಾನಾಡಿದರು.


ಇದೇ ಸಂದರ್ಭದಲ್ಲಿ ಮಂಗಳೂರಿನ ಬಿಎನ್‌ಐಯ ಸುನಿಲ್ ದತ್ ಪೈ ಮತ್ತು ಮೋಹನ್ ರಾವ್ ಅವರು ರುತ್ ಕ್ಲೇರ್‌ನ್ನು ಸನ್ಮಾನಿಸಿದರು.ಈ ಸಂದರ್ಭದಲ್ಲಿ ರುತ್ ಕ್ಲೇರ್ ಅವರ ತಾಯಿ ರೋಸ್ ಮರಿಯಾ ಡಿಸಿಲ್ವಾ, ಮಾರ್ಗದರ್ಶಿ ನಂದಗೋಪಾಲ್, ಪತ್ರಕರ್ತ ರಮೇಶ್ ಪೆರ್ಲ ಮತ್ತಿತರರು ಉಪಸ್ಥಿತಿರಿದ್ದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರುತ್ ಕ್ಲೇರ್ ಡಿ’ಸಿಲ್ವ ಅವರ ತಾಯಿ ರೋಸಿ ಮರಿಯಾ ಡಿ’ಸಿಲ್ವ ಅವರು ಮಾತನಾಡಿ , ಬಾಲ್ಯದಲ್ಲೇ ರುತ್ ತುಂಬಾ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದರು , ತುಂಬಾ ಪರಿಶ್ರಮಪಟ್ಟು ಓದಿದ ಪರಿಣಾಮ ಅವರು ಈ ಸಾಧನೆ ಮಾಡಿದ್ದಾರೆ , ದೇವರೆ ಕೃಪೆಯಿಂದ ಹಾಗೂ ಸ್ವಂತ ಪರಿಶ್ರಮದಿಂದ ಆಕೆ ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳಿದರು.

ಸನ್ಮಾನಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ರುತ್ ಕ್ಲೇರ್ ಡಿಸಿಲ್ವ ಅವರು, ಬದ್ಧತೆ, ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ , ತಂದೆ ತಾಯಿಯ ಬೆಂಬಲ , ಮನೆಯವರ ಪ್ರೋತ್ಸಾಹ ಸದಾ ಸ್ಮರಣೀಯವಾಗಿದೆ ಎಂದರು. ನನ್ನ ಬಗ್ಗೆ ಅಭಿಮಾನ ತೋರಿಸಿದ ಜಿಲ್ಲೆಯ ಜನತೆಯ ಪ್ರೀತಿಗೆ ಸದಾ ಧನ್ಯಳಾಗಿದ್ದೇನೆ , ಎಲ್ಲರ ಆಶಯ , ಸಲಹೆಗಳನ್ನು ಗೌರವದಿಂದ ಸ್ವೀಕರಿಸಿದ್ದೇನೆ ಎಂದು ಹೇಳಿದರು .

ಕಾರ್ಯಕ್ರಮವನ್ನು ವಿ4 ನ್ಯೂಸ್‌ನ ಪ್ರದಾನ ಸಂಪಾದಕರಾದ ತಾರನಾಥ್ ಗಟ್ಟಿ ನಿರ್ವಹಿಸಿದರು.

 

Related Posts

Leave a Reply

Your email address will not be published.