ಸುರತ್ಕಲ್ ನಲ್ಲಿ ಮತ್ತೊಂದು ನೈತಿಕ ಪೊಲೀಸ್‍ಗಿರಿ
ನಗರ ಹೊರವಲಯದ ಸುರತ್ಕಲ್ ನಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ಘಟನೆ ನಡೆದಿದೆ. ಯುವಕನೊಬ್ಬ ತನ್ನ ಗೆಳತಿಯನ್ನು ಬೈಕಿನಲ್ಲಿ ಆಕೆಯ ಅಪಾರ್ಟ್ಮೆಂಟ್ ಗೆ ಬಿಡಲು ಹೋಗಿದ್ದ ಸಂದರ್ಭದಲ್ಲಿ ಆರು ಜನರ ತಂಡ ಅಡ್ಡಗಟ್ಟಿ ಇಬ್ಬರಿಗೂ ಹಲ್ಲೆ ನಡೆಸಿದೆ.
ಹಿಂದು ಸಂಘಟನೆಯ ಕಾರ್ಯಕರ್ತರು ಎನ್ನಲಾದ ಆರು ಮಂದಿ ಅನ್ಯಕೋಮಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ್ದಾರೆ. ಮೊಹಮ್ಮದ್ ಯಾಸೀನ್ ಮತ್ತು ಆತನ ಸ್ನೇಹಿತೆ ಆನ್ಸಿ ವಿನ್ನಿ ಡಯಾಸ್ ಹಲ್ಲೆಗೀಡಾದವರು.
ಬೈಕ್ ಅಪಾರ್ಟ್ಮೆಂಟ್ ತಲುಪುತ್ತಿದ್ದಂತೆ ತಡೆದು ನಿಲ್ಲಿಸಿದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿ ನಿಮ್ಮ ಹೆಸರೇನೆಂದು ಕೇಳಿ ಕೈಯಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರನ್ನು ಪ್ರಹ್ಲಾದ್, ಪ್ರಶಾಂತ್, ಗುರುಪ್ರಸಾದ್ , ಪ್ರತೀಶ್, ಭರತ್, ಸುಕೇಶ್ ಎಂದು ಗುರುತಿಸಲಾಗಿದೆ.