ಸ್ವಿಮ್ಮಿಂಗ್ ಪೂಲ್ ರೂಪ ತಾಳಿದ ತೆಂಕ ಗ್ರಾ.ಪಂ ರಸ್ತೆ:ಸ್ಥಳೀಯರ ಆಕ್ರೋಶ
ಕಾಪು ತಾಲೂಕಿನ ತೆಂಕ ಎರ್ಮಾಳು ಗ್ರಾ.ಪಂ. ವ್ಯಾಪ್ತಿಯ ಬೀಚ್ ರಸ್ತೆಯ ಬಬ್ಬುಸ್ವಾಮಿ ದೈವಸ್ಥಾನದ ಸಂಪರ್ಕ ರಸ್ತೆ ಮಳೆ ನೀರು ನಿಂತು ಸ್ವಿಮಿಂಗ್ ಪೊಲ್ ರೂಪ ತಾಳಿದ್ದರೂ ಗ್ರಾ.ಪಂ. ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬುದಾಗಿ ಆ ಭಾಗದ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಕ್ಷಾಂತರ ರೂ ಖರ್ಚು ಮಾಡಿ ನಿರ್ಮಾಣ ಮಾಡಿದ ಬಬ್ಬುಸ್ವಾಮಿ ದೈವಸ್ಥಾನ ಸಂಪರ್ಕ ಕಾಂಕ್ರೀಟ್ ರಸ್ತೆ ಬಹುತೇಕ ಮರಳು ಸಾಗಾಟಕ್ಕೆ ನಲುಗಿ ಹೋಗಿ ಬಿರುಕು ಬಿಟ್ಟಿದ್ದರೂ ಗ್ರಾ.ಪಂ. ತುಟಿ ಬಿಚ್ಚದಿರುವುದು ಒಂದು ಕಡೆಯಾದರೆ, ಇದೀಗ ರಸ್ತೆ ಆರಂಭವಾಗುವ ಪ್ರದೇಶದಲ್ಲೇ ರಸ್ತೆಯಲ್ಲಿ ಮೊನಕಾಲವರಗೆ ನೀರು ನಿಂತು ರಸ್ತೆ ಸ್ವಿಮಿಂಗ್ ಪೊಲ್ ರೂಪತಾಳಿ ನೂರಾರು ವಾಸದ ಮನೆಗಳನ್ನು ಸಂಪರ್ಕಿಸುವ ರಸ್ತೆಯಲ್ಲಿ ಜನ ನಡೆದಾಡುವುದಕ್ಕೂ ಸಮಸ್ಯೆಯಾಗಿದೆ,
ಈ ರಸ್ತೆಯಾಗಿಯೇ ಈ ಭಾಗದ ಗ್ರಾ.ಪಂ. ಸದಸ್ಯರೋರ್ವರು ನಿತ್ಯ ಪ್ರಯಾಣಿಸುತ್ತಿದ್ದು ಮತ್ತೊಙದು ಕಡೆ ಇದಕ್ಕೆ ಸಮೀಪದಲ್ಲೇ ಗ್ರಾ.ಪಂ. ಅಧ್ಯಕ್ಷರ ನಿವಾಸ ಇದ್ದರೂ ಈ ಸಮಸ್ಯೆಗೆ ಮುಕ್ತಿ ನೀಡಲು ವಿಫಲರಾಗಿದ್ದಾರೆ, ನಮ್ಮೀ ಸಮಸ್ಯೆ ಶೀಘ್ರ ಪರಿಹಾರ ಮಾಡುವಂತ್ತೆ ಸ್ಥಳೀಯ ನಿವಾಸಿ ಶರತ್ ಶೆಟ್ಟಿ ಗ್ರಾಮಸ್ಥರ ಪರವಾಗಿ ಒತ್ತಾಯಿಸಿದ್ದಾರೆ.