ಹೊಯ್ಗೆ ಬಜಾರ್ ಸಮುದ್ರ ದಡದಲ್ಲಿ ಯುವತಿಯ ಮೃತದೇಹ ಪತ್ತೆ
ಯುವತಿ ಮೃತದೇಹವೊಂದು ನೇತ್ರಾವತಿ ನದಿಯಲ್ಲಿ ತೇಲಿಬಂದಿದ್ದು, ಉಳ್ಳಾಲದ ಮೀನುಗಾರರು ಮೃತದೇಹ ಸಮುದ್ರ ಸೇರುವುದನ್ನು ತಪ್ಪಿಸಿ ಹೊಯ್ಗೆಬಜಾರ್ ತೀರಕ್ಕೆ ತಲುಪಿಸಿದ್ದಾರೆ.
ಸುಮಾರು 20-35 ರ ಒಳಗಿನ ಯುವತಿ ಮೃತದೇಹ ಇದಾಗಿದೆ. ಪ್ಯಾಂಟ್ ಹಾಗೂ ಟೀಶಟ್೯ ಧರಿಸಿದ್ದಳು. ಆತ್ಮಹತ್ಯೆಯೋ ಅಥವಾ ಬೇರೆ ಕಾರಣದಿಂದ ಮೃತಪಟ್ಟಿರುವುದೋ ಅನ್ನುವುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ. ಮಂಗಳೂರು ಧಕ್ಕೆಯ ಸಮೀಪ ಎಡಭಾಗ ನದಿಯಲ್ಲಿ ಮೃತದೇಹ ತೇಲಿಬರುತಿತ್ತು. ಇದನ್ನು ಗಮನಿಸಿದ ಮೀನುಗಾರಿಕೆಯಿಂದ ವಾಪಸ್ಸಾಗುತ್ತಿದ್ದ ದೋಣಿಯವರು ಉಳ್ಳಾಲ ಉಳಿಯ ನಿವಾಸಿ ನಾಡದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದವರಿಗೆ ಮಾಹಿತಿ ನೀಡಿದ್ದರು. ತಕ್ಷಣ ಮೃತದೇಹವಿದ್ದ ಸ್ಥಳಕ್ಕೆ ತೆರಳಿ ಇಬ್ಬರು ಮೀನುಗಾರರು ಅದನ್ನು ಹಿಡಿದು ಹೊಯ್ಗೆಬಝಾರ್ ದಡಕ್ಕೆ ತಲುಪಿಸುವಲ್ಲಿ ಯಶಸ್ವಿಯಾದರು. ದೋಣಿಯಲ್ಲಿ ಪ್ರೇಮ್ ಪ್ರಕಾಶ್, ಅನಿಲ್ ಮೊಂತೇರೋ ಇದ್ದರು. ಪಾಂಡೇಶ್ಬರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ತನಿಖೆ ಆರಂಭಿಸಿದ್ದಾರೆ.