ಅಂತರರಾಷ್ಟ್ರೀಯ ಕಾಫಿ ದಿನಾಚರಣೆ ಅಂಗವಾಗಿ, ಯೆನೆಪೊಯ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ (YIASCM), ಯೆನೆಪೊಯ (ಡೀಮ್ಡ್ ಟು ಬಿ ಯೂನಿವರ್ಸಿಟಿ) ಯ ಆತಿಥ್ಯ ವಿಜ್ಞಾನ ವಿಭಾಗವು “ಲೆಟ್ಸ್ ಹ್ಯಾವ್ ಕಾಫಿ” ಎಂಬ ವಿಶೇಷ ಕಾಫಿ ಅನುಭವ ಕಾರ್ಯಕ್ರಮವನ್ನು ಆಯೋಜಿಸಿದೆ.
ಈ ಕಾರ್ಯಕ್ರಮವು 2026ರ ಅಕ್ಟೋಬರ್ 1ರಂದು ಮಂಗಳೂರು ನಗರದ ಫಿಜಾ ಬೈ ನೆಕ್ಸಸ್ ಮಾಲ್ನಲ್ಲಿ, ಬೆಳಿಗ್ಗೆ 10:00 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೆ ನಡೆಯಲಿದೆ. ಕಾಫಿಯ ಸುವಾಸನೆ, ರುಚಿ ಹಾಗೂ ಅದರ ವೈವಿಧ್ಯಮಯ ಸಂಸ್ಕೃತಿಯನ್ನು ಅನುಭವಿಸಲು ಕಾಫಿ ಪ್ರಿಯರಿಗೆ ಇದು ಒಂದು ವಿಶೇಷ ಅವಕಾಶವಾಗಿರಲಿದೆ.
ವಿದ್ಯಾರ್ಥಿಗಳು, ವೃತ್ತಿಪರರು, ಕುಟುಂಬಸ್ಥರು ಹಾಗೂ ಸಾರ್ವಜನಿಕರು ಸೇರಿದಂತೆ ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಕಾಫಿಯ ಸವಿಯನ್ನು ಸವಿದು, ವಿಶ್ರಾಂತಿ ಪಡೆದು, ಸ್ನೇಹಪರ ವಾತಾವರಣವನ್ನು ಆನಂದಿಸಲು ಎಲ್ಲರಿಗೂ ಆತ್ಮೀಯ ಸ್ವಾಗತ ಕೋರಿದ್ದಾರೆ

