HomeFresh Newsಕಾರ್ಕಳ ಪುರಸಭೆಯ ಸಾಮಾನ್ಯ ಸಭೆ

ಕಾರ್ಕಳ ಪುರಸಭೆಯ ಸಾಮಾನ್ಯ ಸಭೆ

ಕಾರ್ಕಳ: ವಿಸ್ತೃತ ಬಸ್ ನಿಲ್ದಾಣ ಹಾಗೂ ಬಂಡೀಮಠ ಬಸ್ ನಿಲ್ದಾಣಗಳೆರಡನ್ನು ಸಮಾನವಾಗಿ ಸದ್ಭಾವಕೆ ಮಾಡುವಂತೆ ರಾಜ್ಯ ಹೈಕೋರ್ಟ್ ಅದೇಶ ನೀಡಿ ವರ್ಷಗಳೆ ಕಳೆದು ಹೋಗಿದೆ. ಹೈಕೋರ್ಟ್ ಅದೇಶಕ್ಕೆ ಜಿಲ್ಲಾಡಳಿತ, ಕಾರ್ಕಳ ಪುರಸಭೆ ಗೌರವಿಸಿಲ್ಲ. ಈ ಕುರಿತು ಅರ್ಜಿದಾರರು ಮತ್ತೇ ನ್ಯಾಯಾಲಯಕ್ಕೆ ಮೋರೆ ಹೋದರೆ ಪುರಸಭಾ ಸದಸ್ಯರು ಸಹಿತ ಅಧಿಕಾರಿಗಳು ಕಾನೂನಿನ ಕುಣಿಕೆಯಲ್ಲಿ ಸಿಲುಕಬೇಕಾದಿತ್ತೆಂದು ಕಾರ್ಕಳ ಪುರಸಭಾ ಪ್ರತಿಪಕ್ಷ ನಾಯಕ ಅಶ್ಪಕ್ ಅಹಮ್ಮದ್ ಹೇಳಿದರು.

ಕಾರ್ಕಳ ಪುರಸಭಾ ಅಧ್ಯಕ್ಷೆ ಸುಮ ಅವರು ಅಧ್ಯಕ್ಷತೆಯಲ್ಲಿ ಜರುಗಿದ್ದ ಸಾಮಾನ್ಯ ಸಭೆಯ ಕಲಾಪವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಭರತ್‌ಲಾಲ್ ಮೀನಾ ಅವರು ಕಾರ್ಕಳ ಬಸ್ ನಿಲ್ದಾಣಕ್ಕೆಂದು ಬಂಡಿಮಠ ದಲ್ಲಿ ಜಾಗವನ್ನು ಕಾದಿರಿಸಿದ್ದರು. ಕಾರ್ಕಳ ಪುರಸಭೆಯು ಕಾಂಗ್ರೆಸ್‌ನ ಅವಧಿಯಲ್ಲಿ ಇದ್ದಾಗ ಅಂದಿನ ಉಸ್ತುವಾರಿ ಸಚಿವ ಡಾ.ವಿ.ಎಸ್.ಆಚಾರ್ಯ ಅವರ ಮುತುವರ್ಜಿಯಿಂದ ರೂ.2.75 ಕೋಟಿ ಅನುದಾನದೊಂದಿಗೆ ಬಂಡೀಮಠ ಬಸ್ ನಿಲ್ದಾಣವನ್ನು ಕಾಂಕ್ರೀಟ್‌ಕರಣಗೊಳಿಸಿ ಅಭಿವೃದ್ಧಿ ಪಡಿಸಿ ಅಂದಿನ ಮುಖ್ಯ ಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಲೋಕಾರ್ಪಣೆಗೈದಿದ್ದರು. ನಂತರದ ದಿನಗಳಲ್ಲಿ ಆ ಬಸ್ ನಿಲ್ದಾಣಕ್ಕೆ ಡಾ.ವಿ.ಎಸ್.ಆಚಾರ್ಯ ನಾಮಕರಣಗೈಯುವ ಮೂಲಕ ಅಂದಿನ ಪುರಸಭಾ ಆಡಳಿತವು ಅಭಿವೃದ್ಧಿಗೆ ಒತ್ತು ನೀಡಿತ್ತು.
ಸ್ಥಾಪಿತ ಹಿತಾಸಕ್ತಿಯಿಂದಾಗಿ ಕೊಟ್ಯಾಂತರ ರೂಪಾಯಿ ವೆಚ್ಚ ಮಾಡಿದ ಬಂಡೀಮಠ ಬಸ್ ನಿಲ್ದಾಣ ಪಾಳು ಬೀಳುವ ಸ್ಥಿತಿಗೆ ತಲುಪಿತು. ಈ ಕುರಿತು ನಾಗರಿಕರು ಹೈಕೊರ್ಟ್‌ಗೆ ಮೋರೆ ಹೋಗಿದ್ದರು ಎಂದು ಅಶ್ಪಕ್ ಅಹಮ್ಮದ್ ಸಭೆಯಲ್ಲಿ ಪ್ರಸ್ತಾಪಿದರು.
ಈ ಕುರಿತು ಉಡುಪಿ ಜಿಲ್ಲಾಧಿಕಾರಿಯವರ ವಿಚಾರ ಗಮನಕ್ಕೆ ತಂದು ಹೈಕೋರ್ಟ್ ಅದೇಶವನ್ನು ಅನುಷ್ಠಾನಗೊಳಿಸುವ ಎಂದು ಮುಖ್ಯಾಧಿಖಾರಿ ರೂಪಾ ಶೆಟ್ಟಿ ಸಭೆಯಲ್ಲಿ ತೀಳಿಸಿದರು.

ಉಪಾಧ್ಯಕ್ಷೆ ಪಲ್ಲವಿ ರಾವ್, ಸ್ಥಾಯೀ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ ಮಲ್ಯ, ಮುಖ್ಯಾಧಿಕಾರಿ ರೂಪಾ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments