HomeUncategorizedದ್ವಿತೀಯ ಪಿಯುಸಿ ಫಲಿತಾಂಶ : ದಕ್ಷಿಣ ಕನ್ನಡ ಜಿಲ್ಲೆ ಫಸ್ಟ್, ಉಡುಪಿಗೆ ನಾಲ್ಕನೇ ಸ್ಥಾನ

ದ್ವಿತೀಯ ಪಿಯುಸಿ ಫಲಿತಾಂಶ : ದಕ್ಷಿಣ ಕನ್ನಡ ಜಿಲ್ಲೆ ಫಸ್ಟ್, ಉಡುಪಿಗೆ ನಾಲ್ಕನೇ ಸ್ಥಾನ

2020-21ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶವನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಕಟಿಸಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಲಾಗಿತ್ತು. ಆದರೆ ಫಲಿತಾಂಶ ಮಾರ್ಗಸೂಚಿ ತಂತ್ರ ಅನುಸರಿಸಿ ಫಲಿತಾಂಶ ನೀಡಲಾಗಿದೆ. ಎಸ್‍ಎಂಎಸ್ ಮೂಲಕ ವಿದ್ಯಾರ್ಥಿಗಳಿಗೆ ಫಲಿತಾಂಶ ರವಾನೆ ಮಾಡಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

ಎಸ್‍ಎಸ್‍ಎಲ್ ಸಿ, ಫಸ್ಟ್ ಪಿಯುಸಿ ಫಲಿತಾಂಶ ಮತ್ತು ದ್ವಿತೀಯ ಪಿಯುಸಿ ಕೃಪಾಂಕ ಅನುಸರಿಸಿ ಫಲಿತಾಂಶವನ್ನು ನೀಡಲಾಗಿದೆ. ಇನ್ನು ಹೊಸ ವಿದ್ಯಾರ್ಥಿಗಳು ಹಾಗೂ ರಿಪಿಟರ್ಸ್ ಕೂಡ ಪಾಸ್ ಆಗಿದ್ದಾರೆ.ರಾಜ್ಯದಲ್ಲಿ ಒಟ್ಟಾರೆ 6,66,497 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ 3,35,138 ವಿದ್ಯಾರ್ಥಿಗಳು ಹಾಗೂ 3,31,359 ವಿದ್ಯಾರ್ಥಿನಿಯರಿದ್ದಾರೆ.

ಇನ್ನು 1,95,650 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದಾರೆ. 2,52,056 ವಿದ್ಯಾರ್ಥಿಗಳು ಫಸ್ಟ್ ಕ್ಲಾಸ್ ಪಡೆದಿದ್ದರೆ 1,47,055 ವಿದ್ಯಾರ್ಥಿಗಳು ಸೆಕೆಂಡ್ ಕ್ಲಾಸ್ ನಲ್ಲಿ ತೆರ್ಗಡೆ ಹೊಂದಿದ್ದಾರೆ.ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಅಗ್ರಸ್ಥಾನ ಪಡೆದಿದೆ. ದಕ್ಷಿಣ ಕನ್ನಡದ 445 ವಿದ್ಯಾರ್ಥಿಗಳು 600ಕ್ಕೆ 600 ಅಂಕಗಳನ್ನು ಪಡೆದಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿ ಬೆಂಗಳೂರು ದಕ್ಷಿಣವಿದ್ದು ಇಲ್ಲಿ 302 ವಿದ್ಯಾರ್ಥಿಗಳು ಪೂರ್ಣ ಅಂಕಗಳನ್ನು ಪಡೆದಿದ್ದಾರೆ.

ಬೆಂಗಳೂರು ಉತ್ತರದ 261 ವಿದ್ಯಾರ್ಥಿಗಳು, ಉಡುಪಿಯ 149 ವಿದ್ಯಾರ್ಥಿಗಳು, ಹಾಸನದ 104 ವಿದ್ಯಾರ್ಥಿಗಳು 600 ಅಂಕಗಳನ್ನು ಪಡೆದಿದ್ದಾರೆ.

ಡಿಸ್ಟಿಕ್ಷನ್ ಪಡೆದ ವಿದ್ಯಾರ್ಥಿಗಳು- 95 ಸಾವಿರದ 628 ವಿದ್ಯಾರ್ಥಿಗಳು

ಪ್ರಥಮ ದರ್ಜೆ- 3 ಲಕ್ಷದ 55 ಸಾವಿರದ 78 ವಿದ್ಯಾರ್ಥಿಗಳು

ದ್ವಿತೀಯ ದರ್ಜೆ- 1 ಲಕ್ಷದ 47 ಸಾವಿರದ 55 ವಿದ್ಯಾರ್ಥಿಗಳು

ತೃತೀಯ ದರ್ಜೆ- 68 ಸಾವಿರದ 729 ವಿದ್ಯಾರ್ಥಿಗಳು

ಫಲಿತಾಂಶ ತಡೆ ಹಿಡಿಯಲಾದ ವಿದ್ಯಾರ್ಥಿಗಳ ಸಂಖ್ಯೆ- 07

ಒಟ್ಟು 6 ಲಕ್ಷದ 66 ಸಾವಿರದ 497 ವಿದ್ಯಾರ್ಥಿಗಳು ಪಾಸ್

 

600 ಕ್ಕೆ 600 ಅಂಕ ಗಳಿಕೆ
1. ದಕ್ಷಿಣ ಕನ್ನಡ 445 ವಿದ್ಯಾರ್ಥಿಗಳು
2. ಬೆಂಗಳೂರು ದಕ್ಷಿಣ 307
3. ಬೆಂಗಳೂರು ಉತ್ತರ 261
4. ಉಡುಪಿ 149
5. ಹಾಸನ 104

 

2239 ವಿದ್ಯಾರ್ಥಿಗಳು 600ಕ್ಕೆ 600 ಅಂಕ ಗಳಿಸಿದ್ದಾರೆ

ಕಲಾವಿಭಾಗ-18

ವಾಣಿಜ್ಯ ವಿಭಾಗ-292

ವಿಜ್ಞಾನ-1929

ಫಲಿತಾಂಶ ಬೇಡ ಎನ್ನುವವರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಪೂರಕ ಹಾಗೂ ಖಾಸಗಿ ವಿದ್ಯಾರ್ಥಿಗಳಿಗೂ ಪರೀಕ್ಷೆಗೆ ಅವಕಾಶ ನೀಡಲಾಗಿದೆ. ಆಗಸ್ಟ್ ತಿಂಗಳಲ್ಲಿ ಪರೀಕ್ಷೆ ನಡೆಯಲಿದೆ.

ಪರೀಕ್ಷಾ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 31-07-21
ಕಚೇರಿಗೆ ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕ-02-08-21

ಪೂರಕ ತಾತ್ಕಾಲಿಕ ವಾರ್ಷಿಕ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಆಗಸ್ಟ್ 19ರಿಂದ ಸೆ.3 ರವರೆಗೆ ಪರೀಕ್ಷೆ ನಿಗದಿಪಡಿಸಲಾಗಿದೆ. ಇದರ ಮಧ್ಯೆ ಸಿಇಟಿ ಪರೀಕ್ಷೆ ಬರುವುದರಿಂದ ಸೆಪ್ಟೆಂಬರ್ ವರೆಗೆ ಪರೀಕ್ಷೆ ಮಾಡಲು ನಿರ್ಧಾರ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments