HomeFresh Newsನಕ್ಸಲ್ ಸಂಬಂಧ ಆರೋಪ ಪ್ರಕರಣ: ವಿಠಲ ಮಲೆಕುಡಿಯ, ಲಿಂಗಣ್ಣ ಮಲೆಕುಡಿಯ ನಿರ್ದೋಷಿ

ನಕ್ಸಲ್ ಸಂಬಂಧ ಆರೋಪ ಪ್ರಕರಣ: ವಿಠಲ ಮಲೆಕುಡಿಯ, ಲಿಂಗಣ್ಣ ಮಲೆಕುಡಿಯ ನಿರ್ದೋಷಿ

ವಿಠ್ಠಲ ಮಲೆಕುಡಿಯ ಮತ್ತು ಅವರ ತಂದೆಯವರ ಮೇಲೆ ನಕ್ಸಲೀಯರೆಂದು ಹೂಡಲಾಗಿದ್ದ ಮೊಕದ್ದಮೆಯಲ್ಲಿ ಅವರು ನಿರ್ದೋಷಿಗಳೆಂದು ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯವು ಇಂದು ತೀರ್ಪು ನೀಡಿದೆ.

ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿರುವ ಡಿವೈಎಫ್‌ಐ ಕರ್ನಾಟಕ ರಾಜ್ಯ ಸಮಿತಿ ”ಇದು ನ್ಯಾಯಯುತ ಹೋರಾಟಕ್ಕೆ, ಸತ್ಯಕ್ಕೆ ಸಂದ ಜಯ. ಈ ತೀರ್ಪು ಆಳುವ ಸರ್ಕಾರ ಮತ್ತು ಸ್ಥಾಪಿತ ಹಿತಾಸಕ್ತಿಗಳ ಕುತಂತ್ರವನ್ನು ಬಯಲಿಗೆಳೆದಿದೆ” ಎಂದು ತಿಳಿಸಿದೆ. ಹಾಗೂ ಸಂತ್ರಸ್ತರಾಗಿ ಒಂಬತ್ತು ವರ್ಷಗಳ ಕಾಲ ದೇಶದ್ರೋಹದ ಆರೋಪ ಹೊತ್ತ ವಿಠಲ ಮಲೆಕುಡಿಯ ಹಾಗೂ ಅವರ ತಂದೆ ಲಿಂಗಣ್ಣ ಮಲೆಕುಡಿಯರವರಿಗೆ ಸರಕಾರ ನಷ್ಟ ಪರಿಹಾರ ಒದಗಿಸುವಂತೆ ಆಗ್ರಹಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments