ಪಡುಬಿದ್ರಿ, ಅ. 27: ಪದ್ರದಬೆಟ್ಟು ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಜೀರ್ಣೋ ದ್ಧಾರ ಸಮಿತಿ ಸಭೆಯು ದೈವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ ಸಭಾಧ್ಯಕ್ಷಯತೆಯನ್ನುವಹಿಸಿ ಮಾತನಾಡಿ, ಸುಮಾರು 1.5 ಕೋ.ರೂ. ವೆಚ್ಚದಲ್ಲಿ ಜೀರ್ಣೋದ್ದಾರ ಗೊಳ್ಳಲಿದ್ದು, ದೈವಸ್ಥಾನ ದ ಭಕ್ತರೆಲ್ಲರೂ ಸಹಕರಿಸಬೇಕು. ದೈವಸ್ಥಾನದ ಕೋಲದ ಚಪ್ಪರ ಹಾಗೂ ಇನ್ನಿತರ ಕಾಮಗಾರಿಗಳಿಗಾಗಿ ಸೆ. 5ರಂದು ಭೂಮಿಪೂಜೆ ನಡೆಸಲಾಗುವುದು ಎಂದು ತಿಳಿಸಿದರು.
ಮುಂಬಯಿ ಸಮಿತಿಯ ಅಧ್ಯಕ್ಷ ನಾರಾಯಣ ಶೆಟ್ಟಿ (ಎನ್.ಸಿ. ಶೆಟ್ಟಿ) ಅವರು ಮುಂಬಯಿ ಭಕ್ತರ ಸಹಕಾರದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದು ಮುಂಬಯಿನಲ್ಲೂ ಸಭೆ ನಡೆಸಲಾಗುವುದೆಂದು ತಿಳಿಸಿದರು.
ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ಜಯ ಶೆಟ್ಟಿ ಪದ್ರ, ಕೋಶಾಧಿಕಾರಿ ರವಿ ಶೆಟ್ಟಿ ಗೌರವಾಧ್ಯಕ್ಷ ಸೀತಾರಾಮ ಶೆಟ್ಟಿ, ಉಪಾಧ್ಯಕ್ಷ ನವೀನ್ ಎನ್. ಶೆಟ್ಟಿ, ಮಿಥುನ್ ಶೆಟ್ಟಿ, ರಾಜೇಶ್ ಶೆಟ್ಟಿ, ಪ್ರಣವ್ ಶೆಟ್ಟಿ, ಉಮೇಶ್ ಪೂಜಾರಿ, ಗಣೇಶ್ ಶೆಟ್ಟಿ ಸೋಮಪ್ಪ ಕರಿಯ, ಗುಣನಾಥ್, ಗಣೇಶ್, ಬಾಲಕೃಷ್ಣ ಮುಖಾರಿ, ಅಶೋಕ, ಪ್ರಕಾಶ್, ರಮೇಶ್ ಗುರಿಕಾರ ಉಪಸ್ಥಿತರಿದ್ದರು.

