HomeFresh Newsಪುತ್ತೂರಿನಲ್ಲಿ ಅಕ್ರಮವಾಗಿ ದಾಸ್ತಾನಿಟ್ಟ ಮರದ ದಿಮ್ಮಿಗಳ ವಶ

ಪುತ್ತೂರಿನಲ್ಲಿ ಅಕ್ರಮವಾಗಿ ದಾಸ್ತಾನಿಟ್ಟ ಮರದ ದಿಮ್ಮಿಗಳ ವಶ

ಪುತ್ತೂರು ತಾಲೂಕು ಅರಿಯಡ್ಕ ಗ್ರಾಮದ ಮಡ್ಯಂಗಳ ಎಂಬಲ್ಲಿ ಅರುಣ್ ಕುಮಾರ್ ಪಿ ರವರ ಮನೆಯಲ್ಲಿ ಅಕ್ರಮವಾಗಿ ಬೀಟೆ, ಸಾಗುವಾನಿ,ಹಲಸು ಹಾಗೂ ಇನ್ನಿತರ ಜಾತಿಯ ಸೈಜು ಮತ್ತು ದಿಮ್ಮಿಗಳನ್ನು ದಾಸ್ತಾನಿಟ್ಟ ಬಗ್ಗೆ ಬಂದ ಖಚಿತ ವರ್ತಮಾನದಂತೆ ಒಟ್ಟು 2.242 ಘನ ಮೀಟರ್ ಸೈಜುಗಳು ಮತ್ತು ಮೋಪನ್ನು ಹಾಗೂ ಅವುಗಳನ್ನು ಸಾಗಾಟ ಮಾಡಲು ಬಳಸಿದ ವಾಹನ ಜೀಪು ಸಂಖ್ಯೆ ಕೆಎ 31 ಎಮ್ 0446 ನ್ನು ಇಲಾಖಾ ಪರ ಅಮಾನತು ಪಡಿಸಿಕೊಳ್ಳಲಾಗಿದೆ.

ಸೊತ್ತುಗಳ ಹಾಗೂ ವಾಹನ ಮೌಲ್ಯ 3 ಲಕ್ಷ ಎಂದು ಅಂದಾಜಿಸಲಾಗಿದೆ. ಪ್ರಕರಣವನ್ನು ಪಾಣಾಜೆ ಉಪ ವಲಯ ಅರಣ್ಯ ಅಧಿಕಾರಿ ಲೋಕೇಶ್, ನರಿಮೊಗರು ಉಪವಲಯ ಅರಣ್ಯ ಅಧಿಕಾರಿ ಕುಮಾರಸ್ವಾಮಿ, ಅರಿಯಡ್ಕ ಗಸ್ತು ಅರಣ್ಯ ರಕ್ಷಕರಾದ ನಿಂಗರಾಜ್, ಕನ್ನಡ್ಕ ಗಸ್ತಿನ ಅರಣ್ಯ ರಕ್ಷಕರಾದ ಉಮೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸದ್ರಿ ಸೊತ್ತುಗಳ ಹಾಗೂ ವಾಹನದ ಮೌಲ್ಯ ಅಂದಾಜು 3.೦೦ ಲಕ್ಷ ಆಗಿದೆ. ಆರೋಪಿಯು ತಲೆಮರೆಸಿಕೊಂಡಿರುತ್ತಾರೆ. ಪ್ರಕರಣದ ಮುಂದಿನ ತನಿಖೆಯನ್ನು ಮಂಗಳೂರು ವಿಭಾಗ ಉಪ ಸಂರಕ್ಷಣಾಧಿಕಾರಿ ವೈ.ಕೆ ದಿನೇಶ್ ಕುಮಾರ್ ರವರು ಹಾಗೂ ಪುತ್ತೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ ಪಿ ಕಾರ್ಯಪ್ಪ ರವರ ಮಾರ್ಗದರ್ಶನದಂತೆ ಪುತ್ತೂರು ವಲಯ ಅರಣ್ಯ ಅಧಿಕಾರಿ ಸುಬ್ಬಯ್ಯ ರವರು ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments