HomeFresh Newsಪ್ಯಾಸೆಂಜರ್ ರೈಲುಗಳನ್ನು ಪುನಃರಾರಂಭಿಸಬೇಕು : ಎಐಟಿಯುಸಿ ಮಂಜೇಶ್ವರ ಮಂಡಲ ಸಮಿತಿಯಿಂದ ಪ್ರತಿಭಟನೆ

ಪ್ಯಾಸೆಂಜರ್ ರೈಲುಗಳನ್ನು ಪುನಃರಾರಂಭಿಸಬೇಕು : ಎಐಟಿಯುಸಿ ಮಂಜೇಶ್ವರ ಮಂಡಲ ಸಮಿತಿಯಿಂದ ಪ್ರತಿಭಟನೆ

ಮಂಜೇಶ್ವರ: ಕೇಂದ್ರ ಸರಕಾರವು ರೈಲ್ವೆ ಇಲಾಖೆಯನ್ನು ಖಾಸಗಿಕರಣಗೊಳಿಸುವುದನ್ನು ನಿಲ್ಲಿಸಿ, ಪ್ಯಾಸಂಜರ್ ರೈಲುಗಳನ್ನು ಪುನಃರಾರಂಬಿಸಬೇಕು. ಹೆಚ್ಚಿಸಿದ ರೈಲ್ವೆ ಪ್ಲಾಟ್ ಫಾರ್ಮ್ ಶುಲ್ಕ ರದ್ದುಗೊಳಿಸಬೇಕು, ಸೀಸನ್ ಟಿಕೆಟ್ ಮತ್ತು ಯಾತ್ರಾ ಸೌಲಭ್ಯಗಳನ್ನು ಪುನಃ ಸ್ಥಾಪಿಸಬೇಕು ಮೊದಲಾದ ಬೇಡಿಕೆಗಳನ್ನು ಒತ್ತಾಯಿಸಿ ಎಐಟಿಯುಸಿ ಮಂಜೇಶ್ವರ ಮಂಡಲ ಸಮಿತಿ ವತಿಯಿಂದ ಮಂಜೇಶ್ವರ ರೈಲ್ವೆ ಸ್ಟೇಷನ್‌ಗೆ ಮಾರ್ಚ್ ಮತ್ತು ಧರಣಿ ನಡೆಯಿತು.

ಎಐಟಿಯುಸಿ ಜಿಲ್ಲಾ ಕೋಶಾಧಿಕಾರಿ ಬಿ.ವಿ ರಾಜನ್ ಉದ್ಘಾಟಿಸಿದರು. ಎಐಟಿಯುಸಿ ಮಂಡಲ ಅಧ್ಯಕ್ಷ ಗಂಗಾಧರ್ ಕೊಡ್ಡೆ ಅಧ್ಯಕ್ಷತೆ ವಹಿಸಿದರು. ಎಐಟಿಯುಸಿ ಮಂಡಲ ಕಾರ್ಯದರ್ಶಿ ಎಸ್.ರಾಮಚಂದ್ರ ಬಡಾಜೆ, ಪುರುಷೋತಮ ಪದವು ಶ್ರೀಧರ್ ಮಾಡ ಮೊದಲಾದವರು ಮಾತನಾಡಿದರು. ಮಾರ್ಚ್ ಮತ್ತು ಧರಣಿಗೆ ಮುಸ್ತಫಾ ಕಡಂಬಾರ್, ಗಣೇಶ್ ಕುಂಜತ್ತೂರ್, ಯತೀಶ್ ಬಿ.ಎಂ, ಪ್ರದೀಶ್ ಬಡಾಜೆ, ಶನೀಶ್ ಮಂಜೇಶ್ವರ ಮೊದಲಾದವರು ನೇತೃತ್ವ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments