ಮಂಗಳೂರಿನ ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯ : ವಿಟಿಯು ಪರೀಕ್ಷೆಯಲ್ಲಿ ಶೇ.100ರ ಫಲಿತಾಂಶ

ಮಂಗಳೂರಿನ ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಯ ವಿಟಿಯು ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಮತ್ತು ನಮ್ಮ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಕಂಪೆನಿಗಳಲ್ಲಿ ಅತ್ಯುತ್ತಮ ಉದ್ಯೋಗಾವಕಾಶ ಲಭಿಸಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಶ್ರೀನಿವಾಸ ಮಯ್ಯ ಡಿ. ತಿಳಿಸಿದರು.

ಅವರು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, 2006ರಲ್ಲಿ ಪ್ರಾರಂಭಗೊಂಡ ಈ ಸಂಸ್ಥೆ ತಮ್ಮ ಪ್ರಥಮ ಬ್ಯಾಚ್‍ನ ವಿದ್ಯಾರ್ಥಿಗಳಿಂದ ಈ ವರೆಗೂ ಉದ್ಯೋಗ ನೇಮಕಾತಿಯಲ್ಲಿ ಉತ್ತಮ ಸಾಧನೆಯನ್ನು ಮಾಡಿಕೊಂಡು ಬಂದಿದ್ದು, ಪ್ರಸಕ್ತ ಜಾಗತಿಕ ಸ್ಥಿತಿಯಿಂದಾಗಿ ಔದ್ಯೋಗಿಕ ವಲಯದಲ್ಲಿ ಏಳು ಬೀಳುಗಳಿದ್ದರೂ, ನಮ್ಮ ವಿದ್ಯಾ ಸಂಸ್ಥೆಯ ಅಂತಿಮ ವರ್ಷದ ಎಲ್ಲಾ ವಿದ್ಯಾರ್ಥಿಗಳಿಗೆ ಉದ್ಯೋಗದ ಭರವಸೆ ದೊರೆತಿದೆ. ಪ್ರಸ್ತುತ ಸಾಲಿನಲ್ಲಿ ಸುಮಾರು 214ಕ್ಕೂ ಮಿಕ್ಕಿ ಪ್ರಮುಖ ಕಂಪೆನಿಗಳಾದ ಇನ್ಫೋಸಿಸ್, ಟಿಸಿಎಸ್, ವಿಪ್ರೋ, ಸ್ಯಾಪ್, ಸಿಸ್ಕೊ, ಟೆಕ್ ಮಹೀಂದ್ರ, ಮೈಂಡ್ ಟ್ರೀ ಸೇರಿದಂತೆ ಮುಂತಾದವುಗಳು ಕ್ಯಾಂಪಸ್ ನೇಮಕಾತಿಯಲ್ಲಿ ಪಲ್ಗೊಂಡು ಸುಮಾರು 609ಕ್ಕೂ ಹೆಚ್ಚು ಉದ್ಯೋಗವಕಾಶಗಳನ್ನು ಕಾಲೇಜಿನ ವಿದ್ಯಾರ್ಥಿಗಳಿಗೆ ಒದಗಿಸಿದೆ.

ಶ್ರೀನಿವಾಸ್ ತಾಂತ್ರಿಕ ಮಹಾವಿದ್ಯಾಲಯ 2021ನೇ ಆಗಸ್ಟ್/ ಸೆಪ್ಟೆಂಬರ್ ತಿಂಗಳಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ನಡೆಸಿದ ಬಿ.ಇ. 8ನೇ ಸೆಮಿಸ್ಟರ್‍ನ ಪರೀಕ್ಷೆಗಳಲ್ಲಿ ಇನ್‍ಫಾರ್ಮೇಶನ್ ಸಾಯನ್ಸ್ ವಿಭಾಗದ ವಿದ್ಯಾರ್ಥಿಗಳು ಶೇ.100, ಏರೋನಾಟಿಕಲ್ ವಿಭಾಗದ ವಿದ್ಯಾರ್ಥಿಗಳು ಶೇ.100 ಮರೈನ್ ವಿಭಾಗದ ವಿದ್ಯಾರ್ಥಿಗಳು ಶೇ.100ರ ಫಲಿತಾಂಶ, ನ್ಯಾನೋ ಟೆಕ್ನಾಲಜಿ ವಿಭಾಗದ ವಿದ್ಯಾರ್ಥಿಗಳು ಶೇ.100 ಫಲಿತಾಂಶ ಪಡೆದಿದ್ದಾರೆ. ನಮ್ಮ ವಿದ್ಯಾಸಂಸ್ಥೆಯು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಆಧೀನಕೊಳಪಟ್ಟಿದ್ದು, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್, ನ್ಯಾಕ್ ಹಾಗೂ ವಾಸ್ತುಶಿಲ್ಪ ಶಿಕ್ಷಣ ಪರಿಷತ್‍ನಿಂದ ಮಾನ್ಯತೆ ಪಡೆದಿದೆ. ಇನ್ನು ವಿದ್ಯಾರ್ಥಿಗಳ ಸಾಧನೆಗೆ ಎ ಶ್ಯಾಮ ರಾವ್ ಫೌಂಡೇಶನ್‍ನ ಅಧ್ಯಕ್ಷರಾದ ಸಿಎ. ಎ ರಾಘವೇಂದ್ರ ರಾವ್, ಉಪಾಧ್ಯಕ್ಷರಾದ ಎ. ಶ್ರೀನಿವಾಸ್ ರಾವ್ ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.
ಈ ಸಂದರ್ಭದಲ್ಲಿ ಸುದ್ದಿಗೋಷ್ಟಿಯಲ್ಲಿ ಕಾಲೇಜಿನ ನೇಮಕಾತಿ ಅಧಿಕಾರಿ ಪ್ರೊ. ಧೀರಜ್ ಹೆಬ್ರಿ ಉಪಸ್ಥಿತರಿದ್ದರು.

 

 

 

 

Related Posts

Leave a Reply

Your email address will not be published.