HomeFresh Newsರಂಗ ನಿನ್ನ ಆಲ್ಬಾಂ ಸಾಂಗ್ ಬಿಡುಗಡೆ

ರಂಗ ನಿನ್ನ ಆಲ್ಬಾಂ ಸಾಂಗ್ ಬಿಡುಗಡೆ

ಹಿಂದೂಸ್ತಾನಿಯ ಖ್ಯಾತ ಸಂಗೀತ ಕಲಾವಿದೆ, ಕರಾವಳಿಯ ಪ್ರತಿಭೆ ವಿದ್ವಾನ್ ವಿಭಾ ಎಸ್.ನಾಯಕ್ ಅವರು ಸಂಗೀತ ನಿರ್ದೇಶಿಸಿ, ತಾವೇ ಹಾಡಿರುವ ’ರಂಗ ನಿನ್ನ’ ಎಂಬ ಶ್ರೀಕೃಷ್ಣ ದೇವರ ಕುರಿತ ಭಕ್ತಿ ಪ್ರಧಾನ ಅಲ್ಬಾಂ ಸಾಂಗ್ ಅನಾವರಣಗೊಂಡಿದೆ.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ರಂಗ ನಿನ್ನ ಅಲ್ಬಾಂ ಸಾಂಗ್ ಬಿಡುಗಡೆ ಸಮಾರಂಭ ನಡೆಯಿತು.

ಶ್ರೀಕೃಷ್ಣ ಜನ್ಮಾಷ್ಠಮಿಯ ಹಿನ್ನೆಲೆಯಲ್ಲಿ ಶ್ರೀಕೃಷ್ಣನ ಕುರಿತು ಶ್ರೀ ವ್ಯಾಸರಾಯರು ಬರೆದಿರುವ ಹಾಡಿಗೆ ವಿದ್ವಾನ್ ವಿಭಾ ಎಸ್.ನಾಯಕ’ ಅವರು ಸಂಗೀತ ನೀಡಿ ತಾವೇ ಹಾಡಿರುವ ಈ ಆಲ್ಬಾಂ ಸಾಂಗ್‌ನ್ನು ಮಂಗಳೂರು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಬಿಡುಗಡೆಗೊಳಿಸಿದರು. ಡಿವಿಡಿ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಈ ಹಾಡು ಲಭ್ಯವಾಗಲಿದೆ.

ಬಿಡುಗಡೆ ಸಮಾರಂಭದಲ್ಲಿ ಮಂಗಳೂರಿನ ಬೈಕಂಪಾಡಿಯ ಅನಘ ರಿಫೈನರೀಸ್ ಆಡಳಿತ ನಿರ್ದೇಶಕ ಸಾಂಬ ಶಿವರಾವ್, ಮಂಗಳೂರಿನ ಡಿಂಕಿ ಡೈನ್ ನ ಆಡಳಿತ ನಿರ್ದೇಶಕ ಸ್ವರ್ಣ ಸುಂದರ್, ದಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ನಾಯಕ್ ಇಂದಾಜೆ, ಕಲಾ ಸಾಧನ ಮ್ಯೂಸಿಕ್ ಸ್ಕೂಲ್ ನ ವಿಭಾ ಶ್ರೀನಿವಾಸ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments