HomeFresh Newsಶಿರ್ವ: ದೈವ ನರ್ತನ ಕೆಲಸ ಮಾಡುತ್ತಿದ್ದ ದಿಲೀಪ್ ಪಾಣಾರ ಶವ ಪತ್ತೆ

ಶಿರ್ವ: ದೈವ ನರ್ತನ ಕೆಲಸ ಮಾಡುತ್ತಿದ್ದ ದಿಲೀಪ್ ಪಾಣಾರ ಶವ ಪತ್ತೆ

ಶಿರ್ವದ ನಡಿಬೆಟ್ಟು ಕಿಂಡಿ ಅಣೆಕಟ್ಟು ಬಳಿ ಮೀನಿಗೆ ಗಾಳ ಹಾಕಲು ಹೋಗಿ ಹೊಳೆಗೆ ಬಿದ್ದು ನಾಪತ್ತೆಯಾದ ಯುವಕನ ಶವ ಪತ್ತೆಯಾಗಿದೆ.

ದಿಲೀಪ್ ಪಾಣಾರ (30) ಮೃತ ವ್ಯಕ್ತಿ  ದೈವ ನರ್ತನ ಕೆಲಸ ಮಾಡುತ್ತಿದ್ದ ದಿಲೀಪ್ ಪಾಣಾರ ತನ್ನ ಸಹಪಾಠಿಗಳೊಂದಿಗೆ ಭಾನುವಾರ ಹೊಳೆಗೆ ಮೀನು ಹಿಡಿಯಲು ಹೋಗಿದ್ದ ಈತ ಆಕಸ್ಮಿಕವಾಗಿ ಹೊಳೆಗೆ ಬಿದ್ದು ನಾಪತ್ತೆಯಾಗಿದ್ದ, ಸಂಜೆಯವರೆಗೂ ಈತನ ಪತ್ತೆಗಾಗಿ ಹುಡುಕಾಟ ನಡೆಸಿದರಾದರೂ ಕತ್ತಲಾವರಿಸಿದ್ದರಿ ಕಾರ್ಯಚರಣೆ ಸ್ಥಗಿತಗೊಳಿಸಿದ್ದರು. ಮತ್ತೆ ಸೋಮವಾರ ಅಗ್ನಿಶಾಮಕ ದಳ ಸಿಬ್ಬಂದಿ ಸಹಿತ ಮುಳುಗು ತಜ್ಞರು ಕಾರ್ಯಚರಣೆಗಿಳಿದಿದ್ದು ಇದೀಗ ದಿಲೀಪ್ ಪಾಣರ ಶವವಾಗಿ ನೀರಿನಾಳದಲ್ಲಿ ಪತ್ತೆಯಾಗಿದ್ದಾನೆ. ಸ್ಥಳಕ್ಕೆ ಆಗಮಿಸಿದ ಶಿರ್ವ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments