HomeFresh Newsಹಿಂಜಾವೇ ಕಾರ್ಯಕರ್ತರಿಗೆ ಠಾಣಾಧಿಕಾರಿ ಹೊಡೆದಿದ್ದಾರೆಂಬ ಆರೋಪ ಕಾರ್ಯಕರ್ತರಿಂದ ನಗರ ಠಾಣೆಗೆ ಮುತ್ತಿಗೆ

ಹಿಂಜಾವೇ ಕಾರ್ಯಕರ್ತರಿಗೆ ಠಾಣಾಧಿಕಾರಿ ಹೊಡೆದಿದ್ದಾರೆಂಬ ಆರೋಪ ಕಾರ್ಯಕರ್ತರಿಂದ ನಗರ ಠಾಣೆಗೆ ಮುತ್ತಿಗೆ

ಕುಂದಾಪುರ: ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಗೆ ನಗರ ಠಾಣಾಧಿಕಾರಿ ಹೊಡೆದಿದ್ದಾರೆ ಎಂದು ಆರೋಪಿಸಿ ಹಿಂದೂ ಜಾಗರಣಾ ವೇದಿಕೆಯ ನೂರಾರು ಕಾರ್ಯಕರ್ತರು ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಿ ಭಜನೆ ನಡೆಸಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ

ಅನ್ಯಧರ್ಮದ ಹುಡಗನೊಬ್ಬ ಚೈತ್ರಾ ಕುಂದಾಪುರ ಅವರ ಬಗ್ಗೆ ಅವಹೇಳನಕಾರಿ ವ್ಯಾಟ್ಸಪ್ ಸ್ಟೇಟಸ್ ಹಾಕಿದ ಹಿನ್ನೆಲೆ ಆ ಹುಡುಗ ಹಾಗೂ ಜಾಗರಣ ವೇದಿಕೆ ಕಾರ್ಯಕರ್ತರಿಗೆ ಜಗಳ ನಡೆದಿತ್ತು. ಘಟನೆಯ ಬಳಿಕ ಹಿರಿಯರ ನೇತೃತ್ವದಲ್ಲಿ ನಗರ ಠಾಣೆಯಲ್ಲಿ ರಾಜಿ ಮಾಡಿಕೊಂಡಿದ್ದ ಎರಡು ಕಡೆಯವರು ಠಾಣೆಯಲ್ಲಿರುವಾಗಲೇ ನಗರ ಠಾಣಾಧಿಕಾರಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರಿಗೆ ಹೊಡೆದಿದ್ದಾರೆ ಎನ್ನಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಹಿಂದೂ ಜಾಗರಣ ಕಾರ್ಯಕರ್ತರು ಕುಂದಾಪುರ ಠಾಣೆಗೆ ಮುತ್ತಿಗೆ ಹಾಕಿ ಭಜನೆ ನಡೆಸಿದರು.ಸ್ಥಳಕ್ಕೆ ಭೇಟಿ ನೀಡಿದ ಕುಂದಾಪುರ ಡಿ ವೈ ಎಸ್ಪಿ ಶ್ರೀಕಾಂತ್ ಘಟನೆಯ ಬಗ್ಗೆ ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದರು. ನಂತರ ಕಾರ್ಯಕರ್ತರು ಠಾಣೆಯಿಂದ ಹೊರ ನಡೆದರು.

ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ಮುಖಂಡ ಪ್ರಕಾಶ್ ಕುಕ್ಕೆಹಳ್ಳಿ, ಭಾಜಪ ಕ್ಷೇತ್ರಾಧ್ಯಕ್ಷ ಶಂಕರ್ ಅಂಕದಕಟ್ಟೆ,ಮಾಜಿ ತಾಪಂ ಸದಸ್ಯ ಕರಣ್ ಪೂಜಾರಿ ತಲ್ಲೂರು,ಗಿರೀಶ್ ,ಪ್ರದೀಪ್ ಸಂಗಮ್ ಮೊದಲಾದವರು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments