ಬಂಟ್ವಾಳ ತಾಲೂಕಿನ ಸಜೀಪ ಮೂಡದಲ್ಲಿ ಜಾನಪದ ಕ್ರೀಡೋತ್ಸವದ ಸಂಭ್ರಮ ಕಳೆಗಟ್ಟಲಿದೆ. ಶ್ರೀ ಮಲರಾಯ ಗ್ರಾಮ ಸಮಿತಿ, ಮರ್ತಾಜೆ ಗುತ್ತು ಸಜೀಪ ಮುನ್ನೂರು ಬಂಟ್ವಾಳ ಇದರ ವತಿಯಿಂದ ” ಮರ್ತಾಜೆದ ಮಣ್ಣೋಡ್” ೨ನೇ ವರ್ಷದ ಕೆಸರ್ದ ಗೊಬ್ಬು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಬಂಟ್ವಾಳ ತಾಲೂಕಿನ ಸಜೀಪ ಮೂಡದ ಮಲರಾಯ ದೈವಸ್ಥಾನದ ಬಳಿ ಇರುವ ಮರ್ತಾಜೆ ಗುತ್ತುವಿನಲ್ಲಿ ಆಗಸ್ಟ್ 23, 2023ರ ರವಿವಾರದಂದು ಬೆಳಿಗ್ಗೆ 8.30ರಿಂದ 2ನೇ ವರ್ಷದ ‘ಕೆಸರ್ದ ಗೊಬ್ಬು ೨೦೨೬’ ಕ್ರೀಡೋತ್ಸವ ವಿಜೃಂಭಣೆಯಿಂದ ನಡೆಯಲಿದೆ.
ತುಳುನಾಡಿನ ಗ್ರಾಮೀಣ ಸಂಸ್ಕೃತಿ ಮತ್ತು ಕ್ರೀಡೆಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ವಿವಿಧ ರಂಗಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ನೆರವೇರಲಿದೆ
ಈ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರು, ಕರಾವಳಿ ತರಂಗಿಣಿ ಪ್ರಧಾನ ಸಂಪಾದಕರು, ಚಲನಚಿತ್ರ ನಿರ್ದೇಶಕಿ ಶ್ರೀಮತಿ ಲಲಿತಾಶ್ರೀ ಪ್ರೀತಮ್ ರೈ ಸೇರಿದಂತೆ ವಿವಿಧ ರಂಗಗಳ ಗಣ್ಯರು ಗೌರವ ಉಪಸ್ಥಿತರಿರಲಿದ್ದಾರೆ.
ಗೌರವಾಧ್ಯಕ್ಷರಾದ ಸುಕುಮಾರ್ ಬಂಟ್ವಾಳ, ಅಧ್ಯಕ್ಷರಾದ ಸತೀಶ್ ಮರ್ತಾಜೆ ಪ್ರಧಾನ ಕಾರ್ಯದರ್ಶಿ ಶಿವರಾಮ್ ಮರ್ತಾಜೆ ಹಾಗೂ ಮಲರಾಯ ಗ್ರಾಮ ಸಮಿತಿಯ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಎಲ್ಲ ಕ್ರೀಡಾಭಿಮಾನಿಗಳನ್ನು ಹಾಗೂ ಊರ ಪರವೂರ ಬಂಧುಗಳನ್ನು ಪ್ರೀತಿಯಿಂದ ಆಹ್ವಾನಿಸಿದ್ದಾರೆ.

