HomeFresh News46ನೇ ಮಂಗಳೂರು ವಿ ವಿ ಅಂತರ್ ಕಾಲೇಜು ಅಥ್ಲೆಟಿಕ್ಸ್ 24ನೇ ಬಾರಿ ಆಳ್ವಾಸ್ ಸಮಗ್ರ ಚಾಂಪಿಯನ್ಸ್

46ನೇ ಮಂಗಳೂರು ವಿ ವಿ ಅಂತರ್ ಕಾಲೇಜು ಅಥ್ಲೆಟಿಕ್ಸ್ 24ನೇ ಬಾರಿ ಆಳ್ವಾಸ್ ಸಮಗ್ರ ಚಾಂಪಿಯನ್ಸ್

ಮೂಡುಬಿದಿರೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ಉಡುಪಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಹಭಾಗಿತ್ವದಲ್ಲಿ ನವೆಂಬರ್ 11 ರಿಂದ 13 ರವರೆಗೆ ನಡೆದ ಮಂಗಳೂರು ಅಂತರ್ ಕಾಲೇಜು ಮಟ್ಟದ ಪುರುಷರ ಮತ್ತು ಮಹಿಳೆಯರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಕಾಲೇಜು ತಂಡವು 24ನೇ ಬಾರಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದೆ.

ಆಳ್ವಾಸ್ ತಂಡವು ಪುರುಷರ ವಿಭಾಗದಲ್ಲಿ 274, ಮಹಿಳೆಯರ ವಿಭಾಗದಲ್ಲಿ 192 ಅಂಕ ಒಟ್ಟು 466 ಅಂಕ ಗಳಿಸಿತು. 38 ಚಿನ್ನ 20 ಬೆಳ್ಳಿ ಒಟ್ಟು 58 ಪದಕ ಗಳಿಸಿ ಸಮಗ್ರ ತಂಡ ಪ್ರಶಸ್ತಿ ಪಡೆಯಿತು. ಆಳ್ವಾಸ್‌ನ ಕ್ರೀಡಾಪಟುಗಳು 02 ನೂತನ ಕೂಟ ದಾಖಲೆಗಳನ್ನು ಮಾಡಿರುತ್ತಾರೆ.

ಪುರುಷರ ವಿಭಾಗದಲ್ಲಿ ಅಂಕಿತ್ ಜೋಗಿ 200ಮೀ, 4*100 ರಿಲೇ ನೂತನ ಕೂಟ ದಾಖಲೆಗಳನ್ನು ಮಾಡಿರುತ್ತಾರೆ.
ಆಳ್ವಾಸ್‌ನ ಮನೀಶ್ 400ಮೀ ಹಾಗೂ ವಿಭಾ ಶಂಕರ್ ಕುಮಾರ್ 100ಮೀ ನಲ್ಲಿ ಬೆಸ್ಟ್ ಅಥ್ಲೀಟ್ ಆಗಿ ಹೊರಹೊಮ್ಮಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದ 47 ಸ್ಪರ್ಧೆಗಳಲ್ಲಿ, 47 ಕೂಟ ದಾಖಲೆಗಳು ಆಳ್ವಾಸ್ ಕಾಲೇಜಿನ ಹೆಸರಿನಲ್ಲಿರವುದು ಇಲ್ಲಿ ಉಲ್ಲೇಖನೀಯ.

ಕ್ರೀಡಾಪಟುಗಳಿಗೆ ಅಗತ್ಯವಾದ ಮೂಲಸೌಕರ್ಯ, ಗುಣಮಟ್ಟದ ತರಬೇತಿ ಮತ್ತು ನಿರಂತರ ಪ್ರೋತ್ಸಾಹ ನೀಡಿದಾಗ ಉತ್ತಮ ಸಾಧನೆ ಸಾಧ್ಯ ಎಂಬುದನ್ನು ಆಳ್ವಾಸ್ ಕ್ರೀಡಾಪಟುಗಳ ಗೆಲುವು ಸಾಕ್ಷಿಯಾಗಿದೆ. ಸತತ 24ನೇ ಬಾರಿ ಮಂಗಳೂರು ವಿಶ್ವವಿದ್ಯಾನಿಲಯದ ಸಮಗ್ರ ಅಥ್ಲೆಟಿಕ್ಸ್ ಪ್ರಶಸ್ತಿ ಗೆದ್ದಿರುವುದು ಹೆಮ್ಮೆಯ ಸಂಗತಿ ಒಂದೆಡೆಯಾದರೆ, ಅದರಲ್ಲೂ ಮಂಗಳೂರು ವಿವಿಯ 46 ಕೂಟ ದಾಖಲೆಗಳು ಆಳ್ವಾಸ್ ಕ್ರೀಡಾಪಟುಗಳ ಹೆಸರಿನಲ್ಲಿರುವುದು ಸಂಸ್ಥೆಯ ನಿರಂತರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ- ಡಾ.ಎಂ ಮೋಹನ ಆಳ್ವ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments