HomeFresh Newsಉತ್ತರ ಪ್ರದೇಶದಲ್ಲಿ ಮಳೆಗೆ 56 ಬಲಿ | ಉಪ್ರದ ಹತ್ತು ಜಿಲ್ಲೆಗಳಲ್ಲಿ ವ್ಯಾಪಕ ಹಾನಿ |...

ಉತ್ತರ ಪ್ರದೇಶದಲ್ಲಿ ಮಳೆಗೆ 56 ಬಲಿ | ಉಪ್ರದ ಹತ್ತು ಜಿಲ್ಲೆಗಳಲ್ಲಿ ವ್ಯಾಪಕ ಹಾನಿ | ಭಯಂಕರ ಗಾಳಿ ಗುದ್ದಿನೊಡನೆ ಬಿದ್ದ ಮಳೆ

ಭಾರೀ ಬಿರುಗಾಳಿ ಸಹಿತ ಉತ್ತರ ಪ್ರದೇಶದಲ್ಲಿ ಬಿದ್ದ ಕೊಡ ಸುರಿ ಮಳೆಯು ಹತ್ತು ಜಿಲ್ಲೆಗಳಲ್ಲಿ ಅಪಾರ ಹಾನಿಯುಂಟು ಮಾಡಿದ್ದು, ಕಡಿಮೆ ಎಂದರೆ ಐವತ್ತಾರು ಜನರು ಸಾವಿಗೆ ಸೇರಿದ್ದಾರೆ. ದೇಶದ ಬಹುತೇಕ ಕಡೆ ಮುಂಗಾರು ಮುನ್ ಮಳೆಯು ಸುರಿದಿದ್ದು, ಸಾಕಷ್ಟು ಹಾನಿಯನ್ನು ಕೂಡ ಮಾಡಿದೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್, ಪ್ರತಾಪ್‌ಗಡ, ಬದೋಲಿ, ಫತೇಪುರ, ಉನ್ನಾವೊ, ಕಾನ್ಪುರ, ದೋಹತ್, ಚಂದೌಲಿ, ಸೋನಾಭದ್ರ, ಬದೌನ್ ಜಿಲ್ಲೆಗಳಲ್ಲಿ ಭರಪೂರ ಮಳೆಯಿಂದ ವ್ಯಾಪಕ ಹಾನಿ ಆಗಿದೆ.

ವಿತ್ತ ಸ್ವತ್ತು ಹಾನಿಯಲ್ಲದೆ ಗಣನೀಯವಾಗಿ ಜೀವ ಹಾನಿಯೂ ನಡೆದಿದೆ. ಈ ಹತ್ತು ಜಿಲ್ಲೆಗಳಲ್ಲಿ ಕನಿಷ್ಟ ಐವತ್ತಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮತ್ತೂ ಹಲವು ಜನರು ಕೈಕಾಲು ಕುಂಟುವ ಸ್ಥಿತಿಗೆ ಮುಟ್ಟಿದ್ದಾರೆ. ಪ್ರಯಾಗ್ ರಾಜ್ ಹಾಗೂ ಬದೌನ್ ಜಿಲ್ಲೆಗಳಲ್ಲಿ ತಲಾ ಹದಿನಾರು ಎಂದು ಮೂವತ್ತೆರಡು ಮಂದಿ ಮಳೆಯ ಕಾರಣದಿಂದ ಹತರಾಗಿದ್ದಾರೆ. ಸಾಕಷ್ಟು ಕಡೆ ಮರಗಳು, ಮನೆಗಳು ಬಿದ್ದು ಈ ಸಾವುಗಳು ಆಗಿವೆ.

ಫತೇಪುರದಲ್ಲಿ ಒಂಬತ್ತು, ಉನ್ನಾವೊದಲ್ಲಿ ನಾಲ್ಕು, ಕಾನ್ಪುರ ದೋಹತ್‌ಗಳಲ್ಲಿ ಮೂರ್‍ಮೂರು, ಬದೋಲಿಯಲ್ಲಿ ಐದು, ಚಂದೌಲಿಯಲ್ಲಿ ಇಬ್ಬರು, ಸೋನಾಭದ್ರದಲ್ಲಿ ಒಬ್ಬರು ಮರಣಿಸಿರುವುದಾಗಿ ತಿಳಿದುಬಂದಿದೆ. ಇನ್ನೂ ಹೆಚ್ಚು ಮಂದಿ ಸಾವು ಕಂಡಿರುವ ಸಂಶಯ ಪ್ರಕಟಿಸಲಾಗಿದೆ. ಐವತ್ತಕ್ಕೂ ಹೆಚ್ಚು ಜನರು ನಾನಾ ಪ್ರಮಾಣದ ಗಾಯಗಳಿಗೆ ತುತ್ತಾಗಿದ್ದಾರೆ. ಸಾಕಷ್ಟು ಕಡೆ ವಿದ್ಯುತ್ ಕಂಬಗಳು ಬಿದ್ದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments