HomeFresh Newsಹಿಂದೂ ಎನ್ನಲು ಆಲಯಕ್ಕೆ ಹೋಗಬೇಕಿಲ್ಲ- ಸುಕೋ | ಗುಡಿಸಲಿನಲ್ಲಿ ಹಚ್ಚುವ ದೀಪವೂ ಧರ್ಮ ನಂಬಿಕೆ |...

ಹಿಂದೂ ಎನ್ನಲು ಆಲಯಕ್ಕೆ ಹೋಗಬೇಕಿಲ್ಲ- ಸುಕೋ | ಗುಡಿಸಲಿನಲ್ಲಿ ಹಚ್ಚುವ ದೀಪವೂ ಧರ್ಮ ನಂಬಿಕೆ | ಶಬರಿಮಲೆಗೆ ಹೆಣ್ಣುಮಕ್ಕಳು, ಮುಂದುವರಿದ ವಿಚಾರಣೆ

ಶಬರಿಮಲೆಗೆ ಹೆಣ್ಣುಮಕ್ಕಳು ಹೋಗುವ ವಿಷಯದ ವಿಚಾರಣೆಯಲ್ಲಿ ಹಿಂದೂ ಎನ್ನಲು ದೇವಾಲಯಕ್ಕೆ ಹೋಗುವುದು ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟು ಅಭಿಪ್ರಾಯ ಪಟ್ಟಿತು. ಸಿಜೆಐ ಸೂರ್ಯಕಾಂತ್ ಸಹಿತ ಒಂಬತ್ತು ನ್ಯಾಯಮೂರ್ತಿಗಳ ಸುಪ್ರೀಂ ಕೋರ್ಟ್ ಪೀಠವು ಶಬರಿಮಲೆಗೆ ಹೆಣ್ಣುಮಕ್ಕಳ ಪ್ರವೇಶದ ವಿಷಯದ ವಿಚಾರಣೆ ನಡೆಸಿದೆ. ಹದಿನೈದು ದಿನಗಳ ವಿಚಾರಣೆ ನಡೆದು ಮತ್ತೂ ಮುಂದಕ್ಕೆ ಹೋಯಿತು.

ಹಿಂದೂ ಒಂದು ಜೀವನ ವಿಧಾನವಾಗಿದ್ದು, ಹಿಂದೂ ಎಂದು ನಿರೂಪಿಸಲು ದೇವಾಲಯಕ್ಕೆ ಹೋಗಬೇಕಿಲ್ಲ. ಅವರವರ ನಂಬಿಕೆ ಮುಖ್ಯ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿತು. ಮಧ್ಯಸ್ಥಿಕೆಗಾರ ವಕೀಲರಾದ ಮೋಹನ್ ಗೋಪಾಲ್ ಅವರು ಸಮುದಾಯಗಳ ನಡುವಿನಿಂದಲೇ ಸಾಮಾಜಿಕ ನ್ಯಾಯಕ್ಕೆ ಬೇಡಿಕೆ ಏಳುತ್ತದೆ ಎಂದರು. 1966 ರಲ್ಲಿ ವೇದ ಒಪ್ಪಿದವರು ಹಿಂದೂಗಳು ಎಂದು ಸುಪ್ರೀಂ ತೀರ್ಪು ಬಂದಿದೆ. ಅದನ್ನೂ ಇಡೀ ಸಮಾಜ ಅನುಸರಿಸಿಲ್ಲ ಎಂಬುದು ವಾದ ನಡೆಯಿತು.ಎಲ್ಲರಿಗೂ ಅವರವರ ನಂಬಿಕೆ ಮುಖ್ಯ. ಒಂದು ಗುಡಿಸಲಿನಲ್ಲಿ ದೀಪ ಹಚ್ಚುವುದು ಕೂಡ ಅವರ ಧಾರ್ಮಿಕ ನಂಬಿಕೆಯೇ ಆಗಿದೆ ಎಂದು ಸುಕೋ ಹೇಳಿತು.

Sunplus

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments