HomeFresh Newsವಿಟ್ಲ: ವಿದೇಶದಲ್ಲಿರುವ ವ್ಯಕ್ತಿಯ ಮನೆಗೆ ನುಗ್ಗಿದ ಕಳ್ಳರು: ಸೊತ್ತುಗಳಿಗಾಗಿ ಸಾಕಷ್ಟು ಜಾಲಾಡಿದ ಕಳ್ಳರು

ವಿಟ್ಲ: ವಿದೇಶದಲ್ಲಿರುವ ವ್ಯಕ್ತಿಯ ಮನೆಗೆ ನುಗ್ಗಿದ ಕಳ್ಳರು: ಸೊತ್ತುಗಳಿಗಾಗಿ ಸಾಕಷ್ಟು ಜಾಲಾಡಿದ ಕಳ್ಳರು

ವಿಟ್ಲ: ವಿಟ್ಲ ಪಡ್ನೂರು ಗ್ರಾಮದ ಪರ್ತಿಪ್ಪಾಡಿ ಮಸೀದಿ ದ್ವಾರದ ಮುಂಭಾಗದ ಮನೆಯಲ್ಲಿ ಕಳ್ಳರ ಕರಾಮತ್ತು ನಡೆದಿದೆ. ಮನೆ ಮಾಲೀಕ ವಿದೇಶದಲ್ಲಿದ್ದು, ಬೀಗ ಹಾಕಿದ ಮನೆಗೆ ನುಗ್ಗಿದ ಕಳ್ಳರು ಮನೆಯಿಡೀ ಜಾಲಾಡಿ ಡಿ.ವಿ.ಆರ್ ಹೊತ್ತೊಯ್ದ ಘಟನೆ ನಡೆದಿದೆ.

ಮನೆ ಮಾಲಿಕ ಎಂ.ಕೆ.ಖಲೀಲ್ ಕುಟುಂಬ ಅರಬ್ ರಾಷ್ಟ್ರದ ಅಜ್ಮನ್ ನಲ್ಲಿದ್ದು ಆರು ತಿಂಗಳ ಹಿಂದಷ್ಟೇ ಬಂದು ಹೋಗಿದ್ದರು. ಭಾನುವಾರ ಬೆಳಗ್ಗೆ ಪಕ್ಕದ ಮನೆಯವರು ನೋಡಿದಾಗ ಮುಂಭಾಗದ ಬಾಗಿಲು ತೆರೆದಿರುವುದನ್ನು ಗಮನಿಸಿ ಸಂಶಯಗೊಂಡಿದ್ದರು. ಮನೆಗೆ ಹೋಗಿ ನೋಡಿದಾಗ ಅಂಗಳದಲ್ಲಿದ್ದ ಸಿ.ಸಿ.ಕ್ಯಾಮರಾದ ದೃಷ್ಟಿ ಬದಲಾಯಿಸಿ ಮುಂಭಾಗದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಎ.ಸಿ.ಚಾಲು ಮಾಡಿಯೇ ನಾಲ್ಕು ಕಪಾಟುಗಳನ್ನು ಒಡೆದು ಸೊತ್ತುಗಳಿಗಾಗಿ ಗಂಟೆಗಳ ಕಾಲ ಸಾಕಷ್ಟು ಜಾಲಾಡಿದ್ದಾರೆ.

ಕಪಾಟಿನಲ್ಲಿದ್ದ ಒಂದು ಲಕ್ಷ ರೂಪಾಯಿ ಮೌಲ್ಯದ ಖಚಿಜo ವಾಚ್ ಮಾತ್ರ ನಾಪತ್ತೆಯಾಗಿದೆ. ಮಾಲಿಕ ಖಲೀಲ್ ಕುಟುಂಬ ವಿದೇಶದಲ್ಲಿರುವ ಕಾರಣ ಅದೃಷ್ಟವಶಾತ್ ಚಿನ್ನಾಭರಣಗಳೆಲ್ಲವೂ ಸೇಫಾಗಿದೆ. ಸೊತ್ತುಗಳಿಗಾಗಿ ಸಾಕಷ್ಟು ಜಾಲಾಡಿದ ಕಳ್ಳರು ಮರಳಿ ಹೋಗುವ ಸಂದರ್ಭ ಡಿ.ವಿ.ಆರ್ ಹೊತ್ತೊಯ್ದಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments