ಹೋಟೆಲ್ ಉದ್ಯಮದಲ್ಲಿ ಹೊಸತನ ಸೃಷ್ಟಿಸಿದ ರಾಜೇಂದ್ರ ಶೆಟ್ಟಿ: ಪುಣೆಗೆ ಲಗ್ಗೆ ಇಟ್ಟಿದೆ ಹೋಟೆಲ್ “ವಿಶ್ವನಾಥ್ ಪ್ಯಾಲೆಸ್” “ಪಂಜುರ್ಲಿ

ಜಗತ್ತಿನಲ್ಲೇ ಹೋಟೆಲ್ ಉದ್ಯಮದಲ್ಲಿ ಪ್ರಸಿದ್ಧಿಯನ್ನು ಪಡೆದವರು ನಮ್ಮ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯವರು.ಪುಣೆಯ ರಾಷ್ಟ್ರೀಯ ಹೆದ್ದಾರಿಯ ಬಳಿ ಇರುವ   ಪಂಜುರ್ಲಿ ಗ್ರೂಪಿನ “ವಿಶ್ವನಾಥ್ ಪ್ಯಾಲೆಸ್”  ಹೋಟೆಲ್ ಬದುಕಿಗೊಂದು ಭರವಸೆಯ ಬೆಳಕಾಗಿದೆ.

  ಉಪಹಾರ  ಸೇವಿಸುವುದಕ್ಕಾಗಿ  ಹೋಟೆಲ್ ಒಳಗಡೆ ಹೆಜ್ಜೆ ಇಟ್ಟಾಗ  ಪ್ರತೀ ಹೆಜ್ಜೆಗೂ ಇಲ್ಲಿನ ಗೋಡೆಗಳ ಮೇಲಿನ ಭಿತ್ತಿ ಪತ್ರಗಳು ಮೈ ರೋಮಾಂಚನಗೊಳಿಸುತ್ತದೆ, ಕಾರಣ ಕೇಳುತ್ತೀರಾ, ಅದರಲ್ಲೇನಿದೆ ವಿಶೇಷ ಅಂತೀರಾ? ಅಲ್ಲೇ ಇರೋದು ವಿಷಯ!,!!

ಇವೆಲ್ಲಾ ಸಾಮಾನ್ಯ ಭಿತ್ತಿ ಚಿತ್ರಗಳು ಅಥವಾ ಸ್ಟಿಕ್ಕರ್ ಗಳಲ್ಲ, ಬದಲಾಗಿ ಈ ದೇಶ ಪ್ರೇಮಿಗಳಾದ  ಮಹಾನ್ ಸಾಧಕರ ಫೋಟೋಗಳು ಸ್ವಾತಂತ್ರ್ಯ ಹೋರಾಟಗಾರರು, ಆಧ್ಯಾತ್ಮ, ಸಾಹಿತ್ಯ, ಸಂಗೀತ, ಜನಸೇವೆ, ರಾಜಕೀಯ, ಸಾಮಾಜಿಕ, ವೈದ್ಯಕೀಯ, ಸಿನೇಮಾ ರಂಗಗಳಲ್ಲಿ ಮಹೋನ್ನತ ಸಾಧನೆ ಮಾಡಿದವರ ಫೊಟೊಗಳನ್ನು ಬಹಳ ಅಚ್ಚುಕಟ್ಟಾಗಿ ಜೋಡಿಸಿ ಪ್ರದರ್ಶಿಸಲಾಗಿದೆ.

ಹೋಟೆಲ್ ಉದ್ಯಮದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ , ದೇಶಕ್ಕೆ ಏನಾದರೂ ಸೇವೆ ನೀಡಬೇಕೆಂಬ ಆಸೆಗಳನ್ನು ತನ್ನ ಹೋಟೆಲ್‌ಗಳಲ್ಲಿ ರಾಜೇಂದ್ರ ಶೆಟ್ಟಿಯವರು ಈಡೇರಿಸಿದ್ದಾರೆ.

ನಮ್ಮ ನಾಡಿನ ಕಾರ್ಣಿಕದ ಶಕ್ತಿ ಪಂಜುರ್ಲಿಯ ಹೆಸರಿನಲ್ಲಿ ದೇಶ ವ್ಯಾಪ್ತಿ ಪ್ರಸಿದ್ಧಿಯಲ್ಲಿರುವ

ಶ್ರಿ ಪಂಜುರ್ಲಿ ಗ್ರೂಪ್ ಆಫ್ ಹೋಟೆಲ್ ಇಂಡಸ್ಟ್ರೀಸ್ ನ ಪುಣೆಯ ” ವಿಶ್ವನಾಥ್ ಪ್ಯಾಲೆಸ್ “

   “ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಇಲ್ಲಿ ಕೂಡ ಗ್ರಾಹಕರನ್ನು ಆಕರ್ಷಿಸಿದೆ . ಪುಣೆಯ ಸಾಧ್ಯವಾದಷ್ಟು ಜನ ಸಮಯವನ್ನು ಮಾಡಿಕೊಂಡು ಹೋಟೆಲ್ ಗೆ ಭೇಟಿ ಕೊಡಿಬಹುದು.

Related Posts

Leave a Reply

Your email address will not be published.