HomeFresh Newsಉಳ್ಳಾಲ: ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಯುವತಿ ಪತ್ತೆ - ಸಾಮೂಹಿಕ ಅತ್ಯಾಚಾರ ಯತ್ನ ಶಂಕೆ -...

ಉಳ್ಳಾಲ: ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಯುವತಿ ಪತ್ತೆ – ಸಾಮೂಹಿಕ ಅತ್ಯಾಚಾರ ಯತ್ನ ಶಂಕೆ – ಪೊಲೀಸರಿಂದ ತನಿಖೆ

ಉಳ್ಳಾಲ: ಯುವತಿಯೋರ್ವಳು ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಉಳ್ಳಾಲ ಠಾಣಾ ವ್ಯಾಪ್ತಿಯ ಸರಹದ್ದಿನಲ್ಲಿ ಪತ್ತೆಯಾಗಿದ್ದು, ಮೈಪೂರ್ತಿ ಗಾಯದ ಗುರುತು ಪತ್ತೆ ಆಗಿದ್ದು, ಸಾಮೂಹಿಕ ಅತ್ಯಾಚಾರದ ಶಂಕೆ ಮೇಲೆ ಉಳ್ಳಾಲ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ತಡರಾತ್ರಿ ವೇಳೆ ಹೊರರಾಜ್ಯದ ಯುವತಿ ನಶೆಯಿಂದ ಸ್ಥಳೀಯ ಮನೆಬಾಗಿಲು ಬಡಿದಿದ್ದಾಳೆ. ನೀರು ಕೇಳುತ್ತಿದ್ದಂತೆ ಅಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಈ ಕುರಿತು 112 ಗೆ ಮನೆಮಂದಿ ಫೋನಾಯಿಸಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಯುವತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವತಿ ನಶೆಯಲ್ಲಿ ಮಾತನಾಡದ ಸ್ಥಿತಿಯಲ್ಲಿದ್ದು, ಮೈಯಿಡೀ ಗಾಯದ ಗುರುತುಗಳಿರುವುದಾಗಿ ತಿಳಿದುಬಂದಿದೆ. ಠಾಣಾ ಸರಹದ್ದಿನಲ್ಲಿ ಪ್ರದೇಶದಲ್ಲಿ ನಿರ್ಜನ ಮನೆಯೊಂದಿದ್ದು, ಅಲ್ಲಿಗೆ ತಡರಾತ್ರಿ ಗಾಂಜಾ, ಅಮಲು ವ್ಯಸನಿಗಳು ನಿತ್ಯ ಬರುತ್ತಿರುತ್ತಾರೆ. ಅಲ್ಲೇ ನಿನ್ನೆ ತಡರಾತ್ರಿ ನಾಲ್ವರ ತಂಡವೂ ಇತ್ತು. ಆದರೆ ಯುವತಿ ನೆರೆಮನೆಗೆ ಬರುತ್ತಿದ್ದಂತೆ ನಾಲ್ವರ ತಂಡವೂ ಪರಾರಿಯಾಗಿರುವುದಾಗಿ ತಿಳಿದುಬಂದಿದೆ. ಸದಸ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ಪಡೆಯುತ್ತಿರುವ ಯುವತಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿರುವಾಕೆ ಈವರೆಗೆ ಪೊಲೀಸರಿಗೆ ಯಾವುದೇ ಮಾಹಿತಿ ನೀಡಿಲ್ಲ. ಸ್ಥಳಕ್ಕೆ ಪೊಲೀಸ್ ಕಮೀಷನರ್ ಅನುಪಮ್ ಅಗರವಾಲ್ ಭೇಟಿ ನೀಡಿದ್ದಾರೆ.

add - rai's kitchen
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments