ನೇಪಾಳದಲ್ಲಿ ಅರ್ಧ ವರುಷದ ಹಿಂದೆ ಜೆನ್ ಜೆಡ್ ಯುವಜನ ಚಳವಳಿ ನಡೆದು ಆಳುವವರನ್ನು ಉರುಳಿಸಿತ್ತು. ಈಗ ಮತ್ತೆ ಸಂಸತ್ತಿಗೆ ಚುನಾವಣೆ ನಡೆದು ಮತ ಎಣಿಕೆ ನಡೆದಿದೆ. ಜೆನ್ ಜೆಡ್ ಚಳವಳಿಯ ಬಾಲೆನ್ ಶಾ ಅವರ ಬೆಂಬಲದ ಆರ್ಎಸ್ಪಿ- ರಾಷ್ಟ್ರೀಯ ಸ್ವತಂತ್ರ ಪಕ್ಷವು ಗೆಲುವಿನತ್ತ ಹೆಜ್ಜೆ ಹಾಕಿದೆ. ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಆರ್ಎಸ್ಪಿಯು 93 ಕ್ಷೇತ್ರಗಳಲ್ಲಿ ಗೆಲುವಿನ ಸಮೀಪ ಬಂದಿದೆ.

ಕಾಠ್ಮಂಡು 1ರಲ್ಲಿ ಆರ್ಎಸ್ಪಿಯ ರಂಜು ನ್ಯೂಪನೆ ಗೆದ್ದಿದ್ದಾರೆ. ಮಾಜೀ ಪ್ರಧಾನಿ ಸಿಪಿಎನ್- ಯುಎಂಎಲ್ನ ಕೆ. ಪಿ. ಶರ್ಮಾ ಓಲಿ ಮುನ್ನಡೆಯಲ್ಲಿ ಇದ್ದಾರೆ. ಮಾಜೀ ರ್ಯಾಪ್ಪರ್ ಬಾಲೆನ್ ಶಾ ಅವರು ಜಾಲ ತಾಣಗಳ ಮೂಲಕ ಜನಪ್ರಿಯರಾಗಿದ್ದರು. ಅವರ ಹಿಂದೆ ದೊಡ್ಡ ಯುವಕರ ದಂಡು ಇದೆ. ಜೆನ್ ಜೆಡ್ ಚಳವಳಿ ಆ ಯುವಕರ ದಂಡಿನಿಂದಾಗಿಯೇ ಯಶಸ್ಸು ಕಂಡಿತ್ತು.

ನೇಪಾಳದ ಸಂಸತ್ತು 275 ಸ್ಥಾನಗಳನ್ನು ಹೊಂದಿದೆ. 165 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತದೆ. 110 ಸ್ಥಾನಗಳನ್ನು ಪಕ್ಷಗಳು ಪಡೆದ ಮತ ಪ್ರಮಾಣದ ಮೇಲೆ ಆಯಾ ಪಕ್ಷಗಳಿಂದ ನೇಮಕ ಮಾಡಿಕೊಳ್ಳಲಾಗುತ್ತದೆ. ೬೫ ಪಕ್ಷಗಳು ಸ್ಪರ್ಧೆಯಲ್ಲಿ ಇವೆ; ಅವುಗಳಲ್ಲಿ ಏಳು ಪ್ರಮುಖ ಪಕ್ಷಗಳಾಗಿವೆ. ಆದರೆ ಆರ್ಎಸ್ಪಿ ಅವೆಲ್ಲವುಗಳಿಗಿಂತ ಮುಂದಿರುವುದು ಸ್ಪಷ್ಟವಿದೆ.
